251 ರು. ಫ್ರೀಡಂ ಫೋನ್ ವಂಚಕನಿಂದ 200 ಕೋಟಿ ಡ್ರೈ ಫ್ರೂಟ್ ಗೋಲ್ಮಾಲ್!

By Kannadaprabha NewsFirst Published Jan 13, 2021, 7:54 AM IST
Highlights

251 ರು.ಗೆ ಮೊಬೈಲ್‌ ಆಫರ್‌ ಕೊಟ್ಟವನಿಂದ ಈಗ 200 ಕೋಟಿ ಡ್ರೈ ಫ್ರೂಟ್‌ ಗೋಲ್ಮಾಲ್‌!| ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವರ್ತಕರಿಗ ವಂಚನೆ| ಮೋಹಿತ್‌ ಗೋಯಲ್‌ ಸೇರಿ 6 ಆರೋಪಿಗಳ ಬಂಧನ

ನೋಯ್ಡಾ(ಜ.13): ಕೇವಲ 251 ರು.ಗಳಿಗೆ ಫ್ರೀಡಂ ಹೆಸರಿನ ಸ್ಮಾರ್ಟ್‌ಫೋನ್‌ ನೀಡುವುದಾಗಿ ಕೋಟ್ಯಂತರ ಭಾರತೀಯರಿಗೆ ವಂಚಿಸಿದ್ದ ನೋಯ್ಡಾ ಮೂಲದ ಉದ್ಯಮಿ ಮೋಹಿತ್‌ ಗೋಯಲ್‌, ಇದೀಗ 200 ಕೋಟಿ ರು. ಮೊತ್ತದ ಡ್ರೈಫä್ರಟ್‌ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾನೆ.

ಆತನ ವಿರುದ್ಧ ಕರ್ನಾಟಕ ಸೇರಿ ಹಲವು ರಾಜ್ಯಗಳ ವರ್ತಕರಿಗೆ ವಂಚಿಸಿದ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಮೋಹಿತ್‌ ಹಾಗೂ ಆತನ ಇತರೆ 5 ಸಹಚರರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಏನಿದು ಹಗರಣ?:

ಮೋಹಿತ್‌ ಮತ್ತು ಆತನ ಸಹಚರರು ದುಬೈ ಡ್ರೈಫä್ರಟ್ಸ್‌ ಆ್ಯಂಡ್‌ ಸ್ಪೈಸಸ್‌ ಹಬ್‌ ಎಂಬ ಕಂಪನಿಯೊಂದನ್ನು ತೆರೆದಿದ್ದರು. ಇದರ ಮೂಲಕ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವರ್ತಕರಿಂದ ಮಾರುಕಟ್ಟೆದರಕ್ಕಿಂತ ಹೆಚ್ಚಿನ ದರ ಕೊಟ್ಟು ಡ್ರೈಫä್ರಟ್ಸ್‌ಗಳನ್ನು ಖರೀದಿಸುತ್ತಿದ್ದರು. ಮೊದಮೊದಲು ಪೂರ್ಣ ಹಣ ಕೊಟ್ಟು ವಸ್ತು ಖರೀದಿಸುತ್ತಿದ್ದ ಕಂಪನಿ, ನಂತರ ಖರೀದಿಸಿದ ಸರಕಿಗೆ ಹಣ ಪೂರೈಕೆ ಸ್ಥಗಿತ ಮಾಡಿ ಬೇರೆಯವರಿಂದ ಸರಕು ಖರೀದಿ ಮಾಡುತ್ತಿತ್ತು. ಹಣ ಕೇಳಿದವರ ಮೇಲೆ ಕಂಪನಿ ಸುಳ್ಳು ಆರೋಪ ಹೊರಿಸಿ ಕೇಸು ದಾಖಲಿಸುತ್ತಿತ್ತು.

ಹೀಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 40ಕ್ಕೂ ಹೆಚ್ಚು ವರ್ತಕರಿಂದ 200 ಕೋಟಿ ರು.ಗೂ ಹೆಚ್ಚಿನ ಮೊತ್ತದ ವಂಚನೆಯ ದೂರು ಸಲ್ಲಿಕೆಯಾದ ಹಿನ್ನೆಲೆ ನೋಯ್ಡಾ ಪೊಲೀಸರು ಮೋಹಿತ್‌ ಮತ್ತು ಆತನ ಇತರೆ 5 ಸಹಚರರನ್ನು ಬಂಧಿಸಿದ್ದಾರೆ.

click me!