2019ರಲ್ಲಿ ಕಾಂಗ್ರೆಸ್‌ಗೆ ಬೆಂಬಲ; ಭಾರತೀಯ ಕಿಸಾನ್ ಸಂಘದ ಅಸಲಿ ಮುಖ ಇಲ್ಲಿದೆ!

Published : Jan 12, 2021, 08:46 PM ISTUpdated : Jan 12, 2021, 09:18 PM IST
2019ರಲ್ಲಿ ಕಾಂಗ್ರೆಸ್‌ಗೆ ಬೆಂಬಲ; ಭಾರತೀಯ ಕಿಸಾನ್ ಸಂಘದ ಅಸಲಿ ಮುಖ ಇಲ್ಲಿದೆ!

ಸಾರಾಂಶ

ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ ರೈತರ ಹೋರಾಟ ನಿಂತಿಲ್ಲ. ಇದೀಗ ರೈತ ಹೋರಾಟದ ಮುಂದಾಳತ್ವ ವಹಿಸಿರುವ ಭಾರತೀಯ ಕಿಸಾನ್ ಸಂಘದ ಅಸಲಿ ಮುಖ ಬಹಿರಂಗವಾಗಿದೆ.  2019ರ ಲೋಕಸಭಾ ಚುನಾವಣೆಗೂ ಮೊದಲು ಅಗತ್ಯ ಸರಕು ಕಾಯ್ದೆ ತಿದ್ದುಪಡಿ, ಎಪಿಎಂಸಿ ನೀತಿ ರದ್ದು ಮಾಡಬೇಕೆಂದು ಆಗ್ರಹಿಸಿ ಲೈವ್ ವಿಡಿಯೋ ಮಾಡಿದ್ದ, ಭಾರತೀಯ ಕಿಸಾನ್ ಇದೀಗ ಸುಖಾಸುಮ್ಮನೆ ಹೋರಾಟ ಮಾಡುತ್ತಿದೆ. 

ನವದೆಹಲಿ(ಜ.12): ರೈತ ಸಂಘಟನೆಗಳ ಹೋರಾಟ ಉದ್ದೇಶವೇನು? ಈ ಪ್ರಶ್ನೆ ಉದ್ಭವವಾಗಲು ಕಾರಣವಿದೆ. ಸುಪ್ರೀಂ ಕೋರ್ಟ್ ಕೇಂದ್ರದ ಕೃಷಿ ಕಾಯ್ದೆಗೆ ತಡೆ ನೀಡಿದೆ. ಇನ್ನು ಕಾಯ್ದೆ ಕುರಿಚು ಚರ್ಚಿಸಲು ಸಮಿತಿಯೊಂದನ್ನು ರಚಿಸಿದೆ. ಇದೀಗ ರೈತರ ವರಸೆ ಬದಲಾಗಿದೆ. ಸಮಿತಿ ಬೇಡ, ಏನೂ ಬೇಡ, ಕೃಷಿ ಕಾಯ್ದೆ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ತಡೆ ನೀಡಿದರೂ ನಿಲ್ಲದ ರೈತರ ಹೋರಾಟ!..

ರೈತರ ಆರಂಭದಲ್ಲಿ ಹೇಳಿದಂತೆ ಕೃಷಿ ಕಾಯ್ದೆಗೆ ತಡೆ ಸಿಕ್ಕಿದೆ. ಈ ಕಾಯ್ದೆ ರೈತರಿಗೆ ಮಾರಕವೋ ಅಥವಾ ಪೂರಕವೋ ಅನ್ನೋದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ವರದಿ ನೀಡಲಿದೆ. ಆದರೆ ಈ ಸಮತಿ ವರದಿ ನೀಡುವುದೇ ಬೇಡ ಎನ್ನುತ್ತಿದೆ ರೈತ ಸಂಘಟನೆಗಳು. ವರದಿ ಬೇಡ, ಕಾಯ್ದೆ ರದ್ದು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇದೇ ರೈತ ಸಂಘಟನೆಗಳು 2019ರ ಲೋಕಸಭಾ ಚುನಾವಣೆಗೂ ಮೊದಲು ಮಾಡಿದ ಲೈವ್ ವಿಡಿಯೋ ಇದೀಗ ವೈರಲ್ ಆಗಿದೆ.

 

ಈ ವಿಡಿಯೋದಲ್ಲಿ ಭಾರತೀಯ ಕಿಸಾನ್ ಸಂಘ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾತನಾಡಿದ್ದಾರೆ. 2019ರ ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಣಾಳಿಕೆ ಹಿಡಿದು ಮಹತ್ವದ ಘೋಷಣೆ ಮಾಡಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಗತ್ಯ ಸರುಗಳ ಕಾಯ್ದೆ ತಿದ್ದುಪಡಿ, ಎಂಪಿಎಂಸಿ ಕಾಯ್ದೆ ರದ್ದು ಸೇರಿದಂತೆ ಪ್ರಮುಖ ಕೃಷಿ ಸುಧಾರಣೆಗಳನ್ನು ಕಾಂಗ್ರೆಸ್ ಹೇಳಿದೆ. 

ಸ್ವತಂತ್ರಾ ಭಾರತದಲ್ಲಿ ಇದು ಮೊತ್ತ ಮೊದಲ ಹಾಗೂ ಮಹತ್ವದ ಬದಲಾಣೆಗೆ ಕಾಂಗ್ರೆಸ್ ಮುಂದಾಗಿದೆ. ಈ ಕಾರಣಕ್ಕಾಗಿ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದು ಬೂಪಿಂದರ್ ಸಿಂಗ್ ಹೇಳಿದ್ದರು. ಇದೀಗ ಇದೇ ಭಾರತೀಯ ಕಿಸಾನ್ ಯೂನಿಯನ್, ಎಂಪಿಎಂಸಿ ಕಾಯ್ದೆ ರದ್ದು ಮಾಡಿದ್ದು ಯಾಕೆ? ಅಗತ್ಯ ಸರಕು ಕಾಯ್ದೆ ತಿದ್ದುಪಡಿ ಮಾಡಿದ್ದೇ ತಪ್ಪು ಎನ್ನುತ್ತಿದೆ.

ಭಾರತೀಯ ಕಿಸಾನ್ ಸಂಘ 2019ರ ಮೇ 11ರಂದು ಪಂಜಾಬ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಬಹಿರಂಗ ಸಮಾವೇಷ ಮಾಡಿತ್ತು. ಈ ಕುರಿತು ಭಾರತೀಯ ಕಿಸಾನ್ ಯೂನಿಯನ್ ಟ್ವೀಟ್ ಮೂಲಕ ಪೋಸ್ಟ್ ಮಾಡಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು