
ಶಿಮ್ಲಾ (ಏ.19) ಕರ್ನಾಟಕದಲ್ಲಿ ಕಾಂಗ್ರೆಸ್ ಐದು ಗ್ಯಾರೆಂಟಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಇದೇ ತಂತ್ರ ರೂಪಿಸಲಾಗಿತ್ತು. ಇಷ್ಟೇ ಅಲ್ಲ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಮೂಲಕ ಅಧಿಕಾರಕ್ಕೆ ಬಂದಿದೆ. ಸುಖ್ವಿಂದರ್ ಸಿಂಗ್ ಸುಖು ಈಗಾಗಲೇ ಹಿಮಾಚಲ ಪ್ರದೇಶ ಜನರಿಗೆ ಉಚಿತ ಗ್ಯಾರೆಂಟಿ ನೀಡುತ್ತಿದ್ದಾರೆ. ಆದರೆ ಸದ್ಯ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದ ಖರ್ಚು ವೆಚ್ಚ, ವೇತನ ನೀಡಲು ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಉನ್ನತ ಅಧಿಕಾರಿಗಳ ವೇತವನ್ನು ಕನಿಷ್ಠ 6 ತಿಂಗಳ ಮುಂದೂಡಲಾಗುತ್ತಿದೆ. ಇವರ ಶೇಕಡಾ 30ರಿಂದ 50 ರಷ್ಟು ವೇತನವನ್ನು 6 ತಿಂಗಳ ಕಾಲ ಮುಂದೂಡಲಾಗುತ್ತಿದೆ. ಈ ಕುರಿತು ಹಿಮಾಚಲ ಪ್ರದೇಶ ಫಿನಾನ್ಸ್ ವಿಭಾಗ ಅಧಿಸೂಚನೆ ಹೊರಡಿಸಿದೆ ಎಂದು ವರದಿಯಾಗಿದೆ.
ಹಿಮಾಚಲ ಪ್ರದೇಶದ ಉನ್ನತ ಅಧಿಕಾರಿಗಳ ಶೇಕಡಾ 30 ರಿಂದ 50 ರಷ್ಟು ವೇತನವನ್ನು ಕನಿಷ್ಠ 6 ತಿಂಗಳ ಕಾಲ ಮುಂದೂಡಿಕೆ ಮಾಡುವ ಅಧಿಸೂಚನೆಯಲ್ಲಿ ಕೆಲ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಮೇ 2026ರಿಂದಲೇ ಈ ಪ್ರಕ್ರಿಯೆ ಜಾರಿಯಾಗುತ್ತಿದೆ. ಇದು ತಾತ್ಕಾಲಿಕ ಪ್ರಕ್ರಿಯೆ ಆಗಿದೆ ಎಂದಿದೆ.
ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಸರಿಯಾಗಿ ವೇತನ ನೀಡಲು, ರಾಜ್ಯದ ಖರ್ಚು ವೆಚ್ಚ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪಿಂಚಣಿ ಸಮಸ್ಯೆಗಳು ತೀವ್ರಗೊಂಡಿದೆ. ಅಧಿಸೂಚನೆಯಲ್ಲಿ ಯಾರಿಗೆಲ್ಲಾ ವೇತನ ಮುಂದೂಡಿಕೆಯಾಗಲಿದೆ ಅನ್ನೋ ಮಾಹಿತಿಯನ್ನು ನೀಡಲಾಗಿದೆ. ಹಿಮಾಚಲ ಪ್ರದೇಶದ ಐಎಎಸ್, ಐಪಿಎಲ್, ಐಎಫ್ಎಸ್ ಅಧಿಕಾರಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸರ್ಕಾರದ ಕಾರ್ಯದರ್ಶಿಗಳು, ಡಿಜಿಪಿ ಪೊಲೀಸ್ ಸೇರಿದಂತೆ ಪ್ರಮುಖ ಹಾಗೂ ಉನ್ನತ ಅಧಿಕಾರಿಗಳ ವೇತನ ಮುಂದೂಡಿಕೆಯಾಗುತ್ತಿದೆ.
ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ, ಮುಖ್ಯಮಂತ್ರಿ, ಕ್ಯಾಬಿನೆಟ್ ಸಚಿವರು, ಶಾಸಕರ ವೇತನ ಹಾಗೂ ಭತ್ಯೆ ಮುಂದೂಡಲು ಒಪ್ಪಿಕೊಂಡಿದ್ದಾರೆ. ನಾವು ರಾಜ್ಯದ ಆರ್ಥಿಕ ಪರಿಸ್ಥಿತಿ ಅರ್ಥೈಸಿಕೊಂಡು ಹೋರಾಟದಲ್ಲಿ ಒಗ್ಗಟ್ಟಾಗಿದ್ದೇವೆ ಎಂದು ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ