ಕೋವಿನ್ ಆ್ಯಪ್‌ನಲ್ಲಿ ನಕಲಿ ರಿಜಿಸ್ಟ್ರೇಶನ್; ಬೆಳಕಿಗೆ ಬಂತು ವಂಚಕರ ಬಹುದೊಡ್ಡ ಜಾಲ!

Published : Jun 14, 2021, 03:27 PM IST
ಕೋವಿನ್ ಆ್ಯಪ್‌ನಲ್ಲಿ ನಕಲಿ ರಿಜಿಸ್ಟ್ರೇಶನ್; ಬೆಳಕಿಗೆ ಬಂತು ವಂಚಕರ ಬಹುದೊಡ್ಡ ಜಾಲ!

ಸಾರಾಂಶ

ಲಸಿಕೆ ಪಡೆಯಲು ಕೋವಿನ್ ಆ್ಯಪ್‌ ಮೂಲಕ ರಿಜಿಸ್ಟ್ರೇಶನ್ ವೆಬ್‌ಸೈಟ್, ಆ್ಯಪ್ ನ್ಯೂನತೆ ಬಳಸಿ ಡೇಟಾ ಸೋರಿಕೆ ಜಾಲ ಪತ್ತೆ ನೋಂದಣಿ ಮಾಡುವ ಮೊದಲೆ ತಮ್ಮ ದಾಖಲೆಗಳಲ್ಲಿ ವಂಚಕರಿಂದ ರಿಜಿಸ್ಟ್ರೇಶನ್

ಕೇರಳ(ಜೂ.14):  ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದೆ. ಜೂನ್ 21 ರಿಂದ ಇದರ ವೇಗ ಮತ್ತಷ್ಚು ಹೆಚ್ಚಾಗಲಿದೆ. ಕಾರಣ ಜೂನ್ 21 ರಿಂದ ಹೊಸ ಲಸಿಕಾ ನೀತಿ ಜಾರಿಯಾಗಲಿದೆ. ಜನರು ಲಸಿಕೆಗಾಗಿ ಕೋವಿನ್ ಆ್ಯಪ್, ವೆಬ್‌ಸೈಟ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಳ್ಳುತ್ತಿದ್ದಾರೆ. ಲಸಿಕೆ ಅಭಾವ ಕಾರಣ ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇದರ ನಡುವೆ ಲಸಿಕೆ ರಿಜಿಸ್ಟ್ರೇಶನ್‌ನಲ್ಲಿ ವಂಚಕರ ಜಾಲವೊಂದು ನಕಲಿ ರಿಜಿಸ್ಟ್ರೇಶನ್ ಮಾಡುತ್ತಿರುವುದು ಪತ್ತೆಯಾಗಿದೆ. 

ಫೇಕ್ ಕೋವಿಡ್ ವ್ಯಾಕ್ಸಿನೇಷನ್ ರಿಜಿಸ್ಟ್ರೇಷನ್ ಆ್ಯಪ್ಸ್ ಇವೆ! ಕಂಡು ಹಿಡಿಯೋದ್ಹೇಗೆ?

ಕೇರಳದ ಕೊಲ್ಲಂ ಜೀಲ್ಲೆಯ ಪುನಲೂರಿನ ಅಜಿತ್ ಈ ಜಾಲದ ಕುರಿತು ಮಾಹಿತಿ ನೀಡಿದ್ದಾರೆ. ಕೋವಿನ್ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿರುವ ಕೆಲ ನ್ಯೂನತೆಗಳನ್ನು ಬಳಸಿಕೊಂಡು ವಂಚಕ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಅಜಿತ್ ತನ್ನ ಪೋಷಕರಿಗೆ ಲಸಿಕೆ ರಿಜಿಸ್ಟ್ರೇಶನ್ ಮಾಡಲು ಕೋವಿನ್ ಆ್ಯಪ್ ಬಳಸಿದ್ದಾರೆ. ಈ ವೇಳೆ ಪೋಷಕರ ಆಧಾರ್ ಕಾರ್ಡ್ ನಂಬರ್ ನಮೂದಿಸಿದಾಗ ಈ ಕಾರ್ಡ್‌ನಲ್ಲಿ ಈಗಾಗಲೇ ಲಸಿಕೆಗೆ ರಿಜಿಸ್ಟ್ರೇಶನ್ ಆಗಿದೆ ಎಂದು ತೋರಿಸುತ್ತಿದೆ. 

ಉತ್ತರ ಭಾರತದ ಹೆಸರಿನಲ್ಲಿ ಪೋಷಕರಿಬ್ಬರ ಆಧಾರ್ ಕಾರ್ಡ್‌ನಲ್ಲಿ ಲಸಿಕೆಗೆ ನೋಂದಣಿ ಆಗಿದೆ. ಈ ಕುರಿತು ಅಜಿತ್ ಮಾಧ್ಯಮದ ಗಮನಕ್ಕೆ ತಂದಿದ್ದಾರೆ. ಕೋವಿನ್ ಆ್ಯಪ್‌ನಲ್ಲಿ ಕೆಲ ನ್ಯೂನತೆಗಳಿವೆ. ಇದರಲ್ಲಿ ಲಸಿಕೆ ರಿಜಿಸ್ಟ್ರೇಶನ್ ಮಾಡಲು ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಕೆಲ ದಾಖಲೆ ಅಗತ್ಯ. ಆದರೆ ನಿಮ್ಮ ಗುರುತಿನ ಚೀಟಿ ಬಳಸಿ ಇನ್ಯಾರೋ ಲಸಿಕೆ ರಿಜಿಸ್ಟ್ರೇಶನ್ ಮಾಡಲು ಸಾಧ್ಯವಿದೆ. ಅದು ಕೂಡ ಇತರ ಹೆಸರಿನಲ್ಲಿ ಸಾಧ್ಯವಿದೆ. ಇದೇ ಲೋಪವನ್ನು ಬಂಡವಾಳ ಮಾಡಿಕೊಂಡ ವಂಚಕರ ಜಾಲ ಹಲವರ ಹೆಸರಿನಲ್ಲಿ ಈಗಾಗಲೇ ಲಸಿಕೆ ರಿಜಿಸ್ಟ್ರೇಶನ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ!.

ವ್ಯವಸ್ಥಿತವಾಗಿ ಈ ಜಾಲ ಕಾರ್ಯನಿರ್ವಹಿಸುತ್ತಿದೆ. ವಿದೇಶ ಪ್ರಯಾಣಕ್ಕೆ ಇದೀಗ ಲಸಿಕೆ ಪಡೆಯಲೇಬೇಕು. ಲಸಿಕೆ ಪ್ರಮಾಣ ಪತ್ರವನ್ನು ಪಾಸ್‌ಪೋರ್ಟ್‌ಗೆ ಲಿಂಕ್ ಮಾಡಲಾಗುತ್ತದೆ. ಆದರೆ ಈ ರೀತಿಯ ಜಾಲದಿಂದ ಹಲವರ ವಿದೇಶ ಪ್ರಯಾಣವೇ ಮೊಟಕಾಗಲಿದೆ. ಜೊತೆಗೆ ವೈಯುಕ್ತಿ ಮಾಹಿತಿ ಬಳಸಿ ಅನಾಹುತ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು