ಕೋವಿಡ್ ಎರಡನೇ ಅಲೆ ದೇಶದಲ್ಲಿ ಭಾರಿ ಬಿಕ್ಕಟ್ಟು ಸೃಷ್ಟಿಸಿದೆ. ಈ ಕೋವಿಡ್ ಮೇಲೆ ನಿಯಂತ್ರಣ ಸಾಧಿಸಬೇಕಿದ್ದರೆ ಎಲ್ಲರೂ ಲಸಿಕೆ ಹಾಕಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಲಸಿಕೆ ಹಾಕಿಸಿಕೊಳ್ಳಲು ಅಭಿಯಾನ ರೂಪಿಸಿದೆ. ಜೊತೆಗೆ, ಲಸಿಕೆ ನೋಂದಣಿಗೆ ವೆಬ್‌ಸೈಟ್ ಕೂಡ ರೂಪಿಸಿದೆ. ಆದರೆ, ದುಷ್ಕರ್ಮಿಗಳು ನಕಲಿ ವ್ಯಾಕ್ಸಿನ್ ನೋಂದಣಿ ಆಪ್ ರೆಡಿ ಮಾಡಿದ್ದಾರೆ. ಈ ಬಗ್ಗೆ ಹೆಚ್ಚು ಎಚ್ಚರ ವಹಿಸುವುದು ಅಗತ್ಯವಾಗಿದೆ.

ಲಸಿಕೆ ಹಾಕಿಸಿಕೊಂಡಿದ್ದೀರಾ? CoWinನಿಂದ ವಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಹೇಗೆ?

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(ಸಿಇಆರ್‌ಟಿ-ಇನ್) ಕೋವಿನ್ ರೀತಿಯಲ್ಲಿ ನಕಲಿ ಆಪ್ಸ್‌ಗಳು ಇರುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ. ಜನರು ಕೋವಿಡ್ ಲಸಿಕೆ ಪಡೆಯಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸರ್ಕಾರವು ಕೋವಿನ್ ವೆಬ್‌ಸೈಟ್‌ ಅನ್ನು ರೂಪಿಸಿದೆ. ಇದು ಅಧಿಕೃತ ವೆಬ್‌ಸೈಟ್ ಕೂಡ. ಆದರೆ, ಇದೇ ರೀತಿಯ ನಕಲಿ ಆಪ್‌ಗಳನ್ನ ರಚಿಸಲಾಗಿದ್ದು, ಜನರು ಮಾಹಿತಿಯನ್ನು ಕದಿಯಲಾಗುತ್ತಿದೆ. ಎಸ್ಸೆಮ್ಮೆಸ್‌ಗಳ ಮೂಲಕ ಈ ನಕಲಿ ಆಪ್‌ಗಳ ಲಿಂಕ್ ಷೇರ್ ಮಾಡಲಾಗುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಸಿಇಆರ್‌ಟಿ ಹೇಳಿದೆ.

ಬಳಕೆದಾರರ ಫೋನ್‌ಗಳಿಗೆ ನುಸುಳುತ್ತಿರುವ ಮತ್ತು ಬಳಕೆದಾರರ ಸೂಕ್ಷ್ಮ ಮಾಹಿತಿಗೆ ಅಕ್ರಮ ಪಡೆಯುತ್ತಿರುವ ನಕಲಿ ಕೋವಿನ್ ಅಪ್ಲಿಕೇಶನ್‌ನ ಬಗ್ಗೆ ಸಿಇಆರ್‌ಟಿ-ಇನ್ ಬಳಕೆದಾರರನ್ನು ಎಚ್ಚರಿಸಿದೆ. ಬಳಕೆದಾರರು ತಮ್ಮನ್ನು ಕೋವಿಡ್ ಲಸಿಕೆಗಾಗಿ ನೋಂದಾಯಿಸಿಕೊಳ್ಳಲು ಅಪ್ಲಿಕೇಶನ್‌ಗಳನ್ನು ಒದಗಿಸುತ್ತದೆ ಎಂದು ಹೇಳುವ ಎಸ್ಸೆಮ್ಮೆಸ್ ಹರಿದಾಡುತ್ತಿದೆ. ಜತೆಗೆ ಕಾಲಕಾಲಕ್ಕೆ ಈ ಎಸ್ಸೆಮ್ಮೆಸ್‌ನ ಭಾಷೆ ಕೂಡ ಬದಲಾಗುತ್ತಿರುತ್ತದೆ.

ಕಾಲಕಾಲಕ್ಕೆ SMS ನ ಭಾಷೆ ಬದಲಾಗುತ್ತದೆ ಎಂದು ವರದಿಯಾಗಿದೆ ಆದರೆ, ಈ ಎಸ್ಸೆಮ್ಮೆಸ್‌ನಲ್ಲಿ ಐದು APK ಲಿಂಕ್‌ಗಳಲ್ಲಿ ಒಂದನ್ನು ಹೊಂದಿದೆ ಎಂದು ಸಿಇಆರ್‌ಟಿ ಎಚ್ಚರಿಕೆ ನೀಡುತ್ತಿದೆ. ಪಸರಿಸುತ್ತಿರುವ ಎಸ್ಸೆಮ್ಮೆಸ್‌ನಲ್ಲಿ Covid-19.apk, vaci_regis.apk, myvaccine_v2.apk, cov-regis.apk ಮತ್ತು vccin-apply.apk ಈ ಎಪಿಕೆ ಫೈಲ್‌ಗಳಿವೆ. ಆದರೆ, ಇವೆಲ್ಲವೂ ಫೇಕ್ ಆಪ್‌ಗಳು ಬಳಕೆದಾರರು ಏನಾದರೂ ಇವನ್ನು ಬಳಸಿದರೆ ಅವರ ಮಾಹಿತಿಯನ್ನು ಇವು ಕದಿಯುತ್ತವೆ

ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ

ಆಂಡ್ರಾಯ್ಡ್ ಸಾಧನಗಳಲ್ಲಿ ಈ ವೈರಸ್‌ಪೀಡಿತ ಆಪ್‌ಗಳನ್ನು ಈ ಎಸ್ಸೆಮ್ಮೆಸ್ ಇನ್ಸ್‌ಟಾಲ್ ಮಾಡುತ್ತದೆ ಮತ್ತು  ಅಂಥದ್ದೇ ಮೆಸೆಜ್‌ಗಳನ್ನು ಸಂತ್ರಸ್ತ ಸಂಪರ್ಕ ಸಂಖ್ಯೆಗಳಿಗೆ ಮೆಸೆಜ್‌ ಮೂಲಕ ಕಳುಹಿಸುತ್ತವೆ. ಈ ಆಪ್‌ಗಳು ಕಾಂಟಾಕ್ಟ್ ಲಿಸ್ಟ್ ಅಕ್ಸೆಸ್ ಸೇರಿದಂತೆ ಅನಗತ್ಯ ಅನೇಕ ಅನುಮತಿಗಳನ್ನು ಕೇಳುತ್ತವೆ ಎಂದು ಸಿಇಆರ್-ಇನ್ ಹೇಳಿದೆ.

ಕೋವಿಡ್-19 ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಜನರು ಲಸಿಕೆಗೆ ಅಗತ್ಯವಾಗಿದೆ. ಹಾಗಾಗಿ,  ಬಹುತೇಕ ಲಸಿಕೆ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಸರ್ಕಾರದ ಅಧಿಕೃತ ಜಲತಾಣವಾಗಿರುವ ಕೋವಿನ್ ಮೂಲಕ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ, ಬಹುತೇಕರಿಗೆ ಲಸಿಕೆ ಸಿಗುತ್ತಿಲ್ಲ.

ಇಂಥ ಸಂದರ್ಭದಲ್ಲಿ ಈ ನಕಲಿ ಆಪ್‌ಗಳ ಹಾವಳಿಗೆ ಏನೂ ಅರಿಯದ ಜನರು ಬಲಿಯಾಗಬೇಕಾದ ಸಂದರ್ಭ ಎದುರಾಗುತ್ತಿದೆ. ಹೇಗಾದರೂ ಮಾಡಿ ಲಸಿಕೆ ಪಡೆಯಲೇಬೇಕು ಎಂದುಕೊಂಡಿರುವ ಜನರು, ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಬರುವ ಇಂಥ ಕಳ್ಳ ಎಸ್ಸೆಮ್ಮೆಸ್‌ಗಳ ಸಾಚಾತನವನ್ನು ಅರಿಯದೇ ಅವುಗಳ ಬಲೆ ಬಿದ್ದು ತಮ್ಮ ಖಾಸಗಿ ಮಾಹಿತಿಯನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಹಾಗಾಗಿ, ಈ ವಿಷಯದಲ್ಲಿ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ.

ವಾಕ್ ಇನ್ ಆಕ್ಸಿಜನ್ ಕೆಫೆ ಸ್ಥಾಪಿಸಿದ ದಿಲ್ಲಿಯ ಖಾಸಗಿ ಶಾಲೆ

ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆ ಬರುವ ಇಂಥ ಯಾವುದೇ ಎಸ್ಸೆಮ್ಮೆಸ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂದಲ ಅವುಗಳ ಸಾಚಾತನ ತಿಳಿದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರವೇನೂ ಎಸ್ಸೆಮ್ಮೆಸ್ ಕಳುಹಿಸುವುದಿಲ್ಲ. ಹಾಗಾಗಿ, ಇಂಥ ಯಾವುದೇ ಎಸ್ಸೆಮ್ಮೆಸ್‌ಗಳು ಬಂದಾಗ ಅವುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು ಮತ್ತು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಲು ಹೋಗಬಾರದು. ದುರಿತ ಕಾಲದಲ್ಲಿ ಜನರನ್ನು ಮೋಸಗೊಳಿಸುವ ಇಂಥ ಜಾಲಗಳು ಸಕ್ರಿಯವಾಗಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯ.