
ನವದೆಹಲಿ: ಲೋಕಸಭೆಯಲ್ಲಿ ಸರ್ಕಾರ ಹಾಗೂ ರಾಹುಲ್ ಗಾಂಧಿ ನಡುವೆ ತೀವ್ರ ಸಮರಕ್ಕೆ ಕಾರಣವಾಗಿದ್ದ ಇನ್ನೂ ಪ್ರಕಟವಾಗದ ಮಾಜಿ ಸೇನಾ ಮುಖ್ಯಸ್ಥರ ಆತ್ಮಚರಿತ್ರೆ ಬಗ್ಗೆ ಈಗ ಪೆಂಗ್ವಿನ್ ಪಬ್ಲಿಕೇಷನ್ ಸ್ಪಷ್ಟನೆ ನೀಡಿದೆ. ಆ ಪುಸ್ತಕ ಇನ್ನು ಪ್ರಕಟವಾಗಿಲ್ಲ ಎಂದು ಹೇಳಿದ್ದು, ಈ ಪುಸ್ತಕದ ಕಾಪಿಯನ್ನು ಪ್ರದರ್ಶನ ಮಾಡುವುದು ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಈ ಬಗ್ಗೆ ಸಂಸ್ಥೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಪೆಂಗ್ವಿನ್ ಪ್ರಕಾಶನವೂ ಸೋಶಿಯಲ್ ಮೀಡಿಯಾ ಎಕ್ಸ್ ಮೂಲಕ ಟ್ವಿಟ್ ಮಾಡಿದೆ. ಇದನ್ನು ಈಗ ಆ ಪುಸ್ತಕದ ಲೇಖಕರು ಆಗಿರುವ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಕೂಡ ತಮ್ಮ ಖಾತೆಯಿಂದ ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿದೆ.
ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ತಮ್ಮ ಆತ್ಮಚರಿತ್ರೆಯಾದ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪುಸ್ತಕ ಇನ್ನೂ ಪ್ರಕಟವಾಗಿಲ್ಲ, ಆದರೆ ಈ ಪುಸ್ತಕವನ್ನು ಸಂಸತ್‌ನ ಹೊರಗೆ ಪ್ರದರ್ಶಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಚೀನೀ ಟ್ಯಾಂಕ್‌ಗಳು ಭಾರತದ ಗಡಿಯತ್ತ ಸಮೀಪಿಸುತ್ತಿವೆ ಎಂದು ರಾಜನಾಥ್ ಸಿಂಗ್ ಮತ್ತು ಎನ್‌ಎಸ್‌ಎ ಅಜಿತ್ ದೋವಲ್ ಸೇರಿದಂತೆ ಇತರ ನಾಯಕರಿಗೆ ತಿಳಿಸಿದಾಗ, ಅವರಿಂದ ದೀರ್ಘಕಾಲದವರೆಗೆ ಯಾವುದೇ ನೇರ ಉತ್ತರ ಸಿಗಲಿಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥರು ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಾದ ನಂತರ ಪ್ರಧಾನಿಯವರು ನಿಮಗೆ ಸರಿ ಅನಿಸಿದ್ದನ್ನು ಮಾಡಿ ಎಂದು ಸಂದೇಶ ಕಳುಹಿಸಿದ್ದರು ಎಂದು ಅವರು ಬರೆದಿದ್ದಾರೆ. ಇದರರ್ಥ ನರೇಂದ್ರ ಮೋದಿ ಅವರು ತಮ್ಮ ಜವಾಬ್ದಾರಿಯನ್ನು ಪೂರೈಸಲಿಲ್ಲ, ಸೇನಾ ಮುಖ್ಯಸ್ಥರು ನಿರ್ಧರಿಸಲು ಸಾಧ್ಯವಾಗದ ಕಾರಣ ಅದನ್ನು ನಿಭಾಯಿಸಲು ಕೇಳಿದ್ದರು ಎಂದು ರಾಹುಲ್ ಸಂಸತ್‌ನಲ್ಲಿ ದೂರಿದ್ದರು ಹೇಳಿದರು.
ಇದನ್ನೂ ಓದಿ: ಮೆರೀನ್ ಡ್ರೈವ್‌ಗೆ ಹೋದ್ರು ನೆಮ್ಮದಿ ಇಲ್ಲ: ರಹಸ್ಯವಾಗಿ ಯುವತಿ ಫೋಟೋ ಕ್ಲಿಕ್ಕಿಸುತ್ತಿದ್ದ ತಂದೆಯ ವಯಸ್ಸಿನ ವ್ಯಕ್ತಿ
ಜೊತೆಗ ಪುಸ್ತಕವನ್ನು ಕೂಡ ಅವರು ಪ್ರದರ್ಶನ ಮಾಡಿದ್ದರು. ಹೀಗಾಗಿ ಇದು ಲೋಕಸಭೆಯಲ್ಲಿ ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಹೀಗಾಗಿ ನಂತರ ಈ ಪುಸ್ತಕವನ್ನು ಮುದ್ರಿಸುವ ಹಕ್ಕುಗಳನ್ನು ಪಡೆದಿರುವ ಪೆಂಗ್ವಿನ್ ಪಬ್ಲಿಕೇಷನ್ ಈಗ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇದನ್ನು ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಹಂಚಿಕೊಂಡಿದ್ದು, ತಮ್ಮ ಪುಸ್ತಕದ ಪ್ರಸ್ತುತ ಅಪ್‌ಡೇಟ್ ಹೀಗಿದೆ ಎಂದು ಬರೆದುಕೊಂಡಿದ್ದಾರೆ.
ಪೆಂಗ್ವಿನ್ ಪ್ರಕಾಶನದ ಸ್ಪಷ್ಟನೆ ಏನಿದೆ?
ಇತ್ತೀಚಿನ ಸಾರ್ವಜನಿಕ ಭಾಷಣ ಮತ್ತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆಯಾದ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಲು ಬಯಸುತ್ತದೆ. ಪುಸ್ತಕವು ಪ್ರಕಟಣೆಗೆ ಹೋಗಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಪುಸ್ತಕದ ಯಾವುದೇ ಪ್ರತಿಗಳನ್ನು ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ.
ಪ್ರಸ್ತುತ ಚಲಾವಣೆಯಲ್ಲಿರುವ ಪುಸ್ತಕದ ಯಾವುದೇ ಪ್ರತಿಗಳು, ಸಂಪೂರ್ಣ ಅಥವಾ ಭಾಗಶಃ, ಮುದ್ರಣ, ಡಿಜಿಟಲ್, ಪಿಡಿಎಫ್ ಅಥವಾ ಯಾವುದೇ ಇತರ ಸ್ವರೂಪದಲ್ಲಿ, ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ, ಯಾವುದೇ ವೇದಿಕೆಯಲ್ಲಿ ಇದ್ದರೆ ಅದು ಪೆಂಗ್ವಿನ್‌ನ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗುತ್ತದೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕು.
ಇದನ್ನೂ ಓದಿ: ಸಪ್ತಪದಿಯ ಅರ್ಥವನ್ನು ನವವಧುವರರಿಗೆ ಸೊಗಸಾಗಿ ವಿವರಿಸಿದ ಪುರೋಹಿತರು: ವೀಡಿಯೋ ವೈರಲ್
ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪುಸ್ತಕದ ಕಾನೂನುಬಾಹಿರ ಮತ್ತು ಅನಧಿಕೃತ ಪ್ರಸರಣದ ವಿರುದ್ಧ ಕಾನೂನಿನಲ್ಲಿ ಲಭ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತದೆ. ಪ್ರಕಾಶಕರ ನಿಲುವನ್ನು ದಾಖಲೆಯಲ್ಲಿ ಇರಿಸಲು ಈ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಪೆಂಗ್ವಿನ್ ಸಂಸ್ಥೆ ಟ್ವಿಟ್ ಮೂಲಕ ಹೇಳಿದೆ.
ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾದ ರಾಜನಾಥ್ ಸಿಂಗ್ ಮತ್ತು ಇತರರು ಗಾಲ್ವಾನ್ ಘರ್ಷಣೆ ಮತ್ತು ಇತರ ಭಾರತ-ಚೀನಾ ಗಡಿ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಮತ್ತು ಇತರ ನಾಯಕರು, ಪ್ರಕಟವಾಗದ ಪುಸ್ತಕದಿಂದ ವಿಚಾರ ಉಲ್ಲೇಖಿಸುವುದು ಸಂಸತ್ತಿನ ನಿಯಮಗಳಿಗೆ ವಿರುದ್ಧವಾಗಿದೆ ಮಾತ್ರವಲ್ಲದೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ