
ಮೆರಿನ್ ಡ್ರೈವ್ ವೇಳೆ ಯುವತಿಯೊಬ್ಬಳು ತನ್ನ ತಂದೆಯ ವಯಸ್ಸಿನ ವ್ಯಕ್ತಿಯೊಬ್ಬ ತನ್ನನ್ನು ರಹಸ್ಯವಾಗಿ ಚಿತ್ರೀಕರಿಸಿದ್ದನ್ನು ಗಮನಿಸಿ ಆತನನ್ನು ಪ್ರಶ್ನೆ ಮಾಡಿದ್ದು ಆ ವಿಡಿಯೋ ಈಗ ವೈರಲ್ ಆಗಿದೆ. ಮುಂಬೈನ ಪ್ರಸಿದ್ಧ ಮೆರೈನ್ ಡ್ರೈವ್‌ನಲ್ಲಿ ಅನುಮತಿಯಿಲ್ಲದೆ ತನ್ನನ್ನು ರಹಸ್ಯವಾಗಿ ಚಿತ್ರೀಕರಿಸಿದ ವ್ಯಕ್ತಿಯನ್ನು ಮಹಿಳೆಯೊಬ್ಬರು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ತನ್ನ ತಂದೆಯ ವಯಸ್ಸಿನ ವ್ಯಕ್ತಿಯ ವರ್ತನೆಗೆ ಆಘಾತ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಮಹಿಳೆ ಮತ್ತು ಆಕೆಯ ಸ್ನೇಹಿತೆ ಮರೀನ್ ಡ್ರೈವ್‌ನಲ್ಲಿ ಸುಂದರ ದೃಶ್ಯವನ್ನು ಆನಂದಿಸುತ್ತಿದ್ದಾಗ ಮತ್ತೊಬ್ಬ ಪ್ರಯಾಣಿಕ ಅಲ್ಲಿದ್ದ ಮಹಿಳೆಯರ ಫೋಟೋಗಳು ಮತ್ತು ವೀಡಿಯೊಗಳನ್ನು ರಹಸ್ಯವಾಗಿ ತೆಗೆದುಕೊಳ್ಳುತ್ತಿರುವುದನ್ನು ಮತ್ತೊಬ್ಬರು ಗಮನಿಸಿದ್ದು, ಆ ಮಹಿಳೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಿಳೆ ಆ ವ್ಯಕ್ತಿಯ ಬಳಿ ಹೋಗಿ ಅವರ ಫೋನ್ ಅನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಸಪ್ತಪದಿಯ ಅರ್ಥವನ್ನು ನವವಧುವರರಿಗೆ ಸೊಗಸಾಗಿ ವಿವರಿಸಿದ ಪುರೋಹಿತರು: ವೀಡಿಯೋ ವೈರಲ್
ಮಹಿಳೆ ಆತನ ಫೋನ್ ಪರಿಶೀಲಿಸಿದಾಗ, ಅದರಲ್ಲಿ ತನ್ನ ಮತ್ತು ತನ್ನ ಸ್ನೇಹಿತೆಯ ಹಲವಾರು ಫೋಟೋಗಳು ಕಂಡು ಬಂದಿದ್ದು, ತಮ್ಮ ಅನುಮತಿಯಿಲ್ಲದೆ ಆತ ಆ ಫೋಟೋಗಳನ್ನು ತೆಗೆದಿರುವುದು ಗಮನಕ್ಕೆ ಬಂದಿದ್ದು, ಆ ಮಹಿಳೆ ಸಾರ್ವಜನಿಕವಾಗಿ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಆತ ತನ್ನನ್ನು ತಾನು ರಾಜೀವ್ ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ, ಆರಂಭದಲ್ಲಿ ನಾನು ಅದನ್ನು ತೆಗೆದುಕೊಂಡೆ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಆ ಮಹಿಳೆ ಅವನನ್ನು ನಿರಂತರವಾಗಿ ಪ್ರಶ್ನಿಸಿದಾಗ ಆತ ಕ್ಷಮೆಯಾಚಿಸಿ ತಾನು ತೆಗೆದ ಆ ಅಪರಿಚಿತರ ಫೋಟೋಗಳನ್ನು ಡಿಲೀಟ್ ಮಾಡಲು ಒಪ್ಪಿಕೊಂಡಿದ್ದಾನೆ. ನೀವು ನಮ್ಮ ತಂದೆಯ ವಯಸ್ಸಿನವರಾಗಿದ್ದಿರಿ, ನೀವು ಇದನ್ನು ಹೇಗೆ ಮಾಡಬಹುದು? ನೀವು ನನ್ನ ಫೋಟೋವನ್ನು ಹಿಂದಿನಿಂದ ಏಕೆ ತೆಗೆದಿದ್ದೀರಿ ಎಂದು ಆ ಮಹಿಳೆ ವೀಡಿಯೊದಲ್ಲಿ ಆತನನ್ನು ಪ್ರಶ್ನಿಸುವುದನ್ನು ಕೇಳಬಹುದು.
ಈ ವೀಡಿಯೋ ವೈರಲ್ ಆಗಿದ್ದು, ಅನೇಕರು ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿಯೂ ಮಹಿಳೆಯರು ಶಾಂತಿಯುತವಾಗಿ ತಮ್ಮಷ್ಟಕ್ಕೆ ತಾವು ಖುಷಿಯಾಗಿರಲು ಸಾಧ್ಯವಾಗದ ಪರಿಸ್ಥಿತಿ ಇದು. ನಮ್ಮನ್ನು ಕೇವಲ ವಸ್ತುಗಳಂತೆ ಪರಿಗಣಿಸುವ ಇಂತಹ ಕೃತ್ಯಗಳು ಅಸಹ್ಯಕರ ಎಂದು ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಇಂತಹ ಸಂದರ್ಭಗಳಲ್ಲಿ ಮೌನವಾಗಿರಬಾರದು ಮತ್ತು ಸಾರ್ವಜನಿಕವಾಗಿ ಮಾತನಾಡಬೇಕೆಂದು ಅವರು ಇತರ ಮಹಿಳೆಯರಿಗೆ ಕರೆ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವ್ಯಕ್ತಿಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಇಂತಹ ಕೃತ್ಯಕ್ಕೆ ವಯಸ್ಸಿನ ಮಿತಿ ಇಲ್ಲ. ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದ್ದು ಒಳ್ಳೆಯದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವಂತೆಯೇ, ಗೌಪ್ಯತೆಯನ್ನು ಉಲ್ಲಂಘಿಸುವ ಅಂತಹ ವ್ಯಕ್ತಿಗಳಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮೆರಿನ್ ಡ್ರೈವ್ ಅಲ್ಲ ಆಕಾಶಯಾನಕ್ಕೆ ಹೋದರೂ ಹೆಣ್ಣು ಮಕ್ಕಳನ್ನು ನೆಮ್ಮದಿಯಾಗಿ ಇರುವುದಕ್ಕೆ ಕೆಲ ಕಾಮುಕರು ಬಿಡುವುದಿಲ್ಲ ಎಂಬುದು ಮಾತ್ರ ಸತ್ಯ.
ಮೆರೈನ್ ಡ್ರೈವ್ ಭಾರತದ ದಕ್ಷಿಣ ಮುಂಬೈನಲ್ಲಿರುವ 3.6 ಕಿಲೋಮೀಟರ್ ಉದ್ದದ, ಸಿ-ಆಕಾರದ ಬೌಲೆವಾರ್ಡ್ ಆಗಿದ್ದು, ನಾರಿಮನ್ ಪಾಯಿಂಟ್‌ನಿಂದ ಗಿರ್ಗಾಂವ್ ಚೌಪಟ್ಟಿಯವರೆಗೆ ಅರೇಬಿಯನ್ ಸಮುದ್ರ ತೀರದಲ್ಲಿ ಸಾಗುತ್ತದೆ. ರಾತ್ರಿಯಲ್ಲಿ ಹೊಳೆಯುವ ಬೀದಿ ದೀಪಗಳ ಸರಮಾಲೆಯಿಂದಾಗಿ ರಾಣಿಯ ಹಾರ(Queen's Necklace) ಎಂದು ಕರೆಯಲ್ಪಡುವ ಇದು, ಸುತ್ತಾಡಲು ಜನಪ್ರಿಯವಾದ ಸುಂದರವಾದ ವಾಯುವಿಹಾರವನ್ನು ಮತ್ತು ಮುಖ್ಯವಾಗಿ, ಆರ್ಟ್ ಡೆಕೊ ವಸತಿ ಕಟ್ಟಡಗಳ ದೊಡ್ಡ ಸಂಗ್ರಹವನ್ನು ಹೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ