ಕೊರಮಂಡಲ್ ಬಳಿಕ ಮತ್ತೊಂದು ರೈಲು ದುರಂತ, ನಾಲ್ವರು ಕಾರ್ಮಿಕರ ಸಾವು, ಹಲವರು ಗಂಭೀರ!

By Suvarna NewsFirst Published Jun 7, 2023, 7:40 PM IST
Highlights

ಒಡಿಶಾದಲ್ಲೇ ಮತ್ತೊಂದು ರೈಲು ದುರಂತ ನಡೆದಿದೆ. ಈ ಅಪಘಾತದಲ್ಲಿ ಹಳಿ ದುರಸ್ತಿ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಒಡಿಶಾ(ಜೂ.07): ಬಾಲಾಸೋರ್ ತ್ರಿವಳಿ ರೈಲು ದುರಂತ ಘಟನೆ ನಡೆದ 5 ದಿನದ ಅಂತರದಲ್ಲಿ ಇದೀಗ ಒಡಿಶಾದಲ್ಲಿ ಮತ್ತೊಂದು ರೈಲು ಅಪಘಾತಕ್ಕೀಡಾಗಿದೆ. ರೈಲು ಹಳಿ ದುರಸ್ತಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಒಡಿಶಾದಲ್ಲಿ ಜಾಜ್‌ಪುರ್ ಕಿಯೋಂಜರ್ ರೋಡ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

 ಜಾಜ್‌ಪುರ-ಕಿಯೋಂಜಾರ್ ರಸ್ತೆ ನಿಲ್ದಾಣದ ಬಳಿಕ ಕಾರ್ಮಿಕರು ರೈಲು ಹಳಿ ದುರಸ್ತಿ ಕಾರ್ಯ ಮಾಡಿದ್ದಾರೆ. ಈ ವೇಳೆ ಚಂಡಮಾರುತ ಕಾರಣ ದಿಡೀರ್ ಮಳೆ ಸುರಿದಿದೆ. ಗಾಳಿ ಸಹಿತ ಮಳೆಯಿಂದ ರಕ್ಷಣೆ ಪಡೆಯಲು ಕಾರ್ಮಿಕರು ನಿಂತಿದ್ದ ಗೂಡ್ಸ್ ರೈಲಿನ ಕಳೆಗಡೆ ಆಶ್ರಯ ಪಡೆದಿದ್ದಾರೆ. ಕೆಲ ಹೊತ್ತಲ್ಲೇ ಗೂಡ್ಸ್ ರೈಲು ಹಿಮ್ಮುಖವಾಗಿ ಚಲಿಸಿದೆ. ಇದರ ಪರಿಣಾಮ ಆಶ್ರಯ ಪಡೆದಿದ್ದ ಕಾರ್ಮಿಕರು ಜೀವ ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಸಂಧಿಯಲ್ಲಿ ಸಿಲುಕಿ ನಾಲ್ವರು ಪ್ರಾಣ ಕಳೆದುಕೊಂಡರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಲನ್ನು ಕಟಕ್‌ನ ಎಸ್‌ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಲು ಹಳಿ ಮೇಲೆ ಟೈರ್‌ ಇಟ್ಟ ಕಿಡಿಗೇಡಿಗಳು: ತಮಿಳುನಾಡಲ್ಲಿ ತಪ್ಪಿದ ಮತ್ತೊಂದು ಭೀಕರ ರೈಲು ದುರಂತ!

ಕಳೆದ ನಾಲ್ಕು ದಿನಗಳಿಂದ ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲು ಎಂಜಿನ್ ಬೇರ್ಪಡಿಸಲಾಗಿತ್ತು. ಇದರಿಂದ ರೈಲು ಇದಕ್ಕಿದ್ದಂತೆ ಹಿಂದಕ್ಕೆ ಚಲಿಸಿದೆ. ಇತ್ತ ರೈಲಿನ ಕೆಳಗೆ ಆಶ್ರಯ ಪಡೆದಿದ್ದ ಕಾರ್ಮಿಕರು ಓಡಿ ಜೀವ ಉಳಿಸಿಕೊಳ್ಳಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ದುರಂತ ನಡೆದಿದೆ ಎಂದು ಈಸ್ಟ್ ಕೋಸ್ಟ್ ರೈಲ್ವೇ ಅಧಿಕಾರಿ ಬಿಸ್ವಜಿತ್ ಸಾಹು ಹೇಳಿದ್ದಾರೆ.

ಮಂಗಳವಾರ ದೆಹಲಿ- ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಚಲಿಸುತ್ತಿದ್ದ ಕೆಲ ಹೊತ್ತು ಮುನ್ನ ಇಲ್ಲಿನ ಬೊಕಾರೊದ ಸಂಥಾಲ್ದಿ ರೈಲ್ವೆ ಕ್ರಾಸಿಂಗ್‌ನಲ್ಲಿ ಗೇಟ್‌ ಹಾಕ​ಲಾ​ಗು​ತ್ತಿತ್ತು. ಆಗ ರಸ್ತೆ ದಾಟುತ್ತಿದ್ದ ಟ್ರ್ಯಾಕ್ಟರ್‌ವೊಂದು ರೈಲ್ವೆ ಗೇಟ್‌ಗೆ ಡಿಕ್ಕಿ ಹೊಡೆದು ಒಳ​ನುಗ್ಗಿ ಹಳಿ ಮೇಲೇ ನಿಂ​ತು​ಬಿ​ಟ್ಟಿ​ದೆ. ಅಷ್ಟ​ರಲ್ಲಿ ರೈಲು ಕೂಡ ಬಂದಿ​ದೆ. ರೈಲ್ವೆ ಗೇಟ್‌ ಮತ್ತು ಹಳಿ ಮಧ್ಯೆ ಟ್ರ್ಯಾಕ್ಟರ್‌ ಸಿಲುಕಿರುವುದನ್ನು ಕಂಡ ಕೂಡಲೇ ರೈಲು ಚಾಲಕ ಬ್ರೇಕ್‌ ಹಾಕಿ ರೈಲನ್ನು ನಿಲ್ಲಿಸಿದ್ದರಿಂದ ಸಂಭವನೀಯ ಅಪಘಾತ ತಪ್ಪಿದೆ. ಆದರೂ ಟ್ರಾಕ್ಟರ್‌ ಟ್ರೇಲ​ರ್‌ನ ಹಿಂಭಾ​ಗವು ರೈಲು ಬೋಗಿಗೆ ತರ​ಚಿದೆ.

ಬಾಲಸೋರ್ ರೈಲು ದುರಂತ: ನೂರಾರು ಜನರ ಪ್ರಾಣ ರಕ್ಷಿಸಿದ ಸ್ಥಳೀಯರು: ಜೀವ ಉಳಿಸಿದ ಸಹಸ್ರಾರು ರಕ್ತದಾನಿಗಳು

ಬಳಿಕ ಟ್ರಾಕ್ಟರ್‌ ಅನ್ನು ಸರಿ​ಸ​ಲಾ​ಗಿ​ದ್ದು, ರೈಲು 45 ನಿಮಿಷ ತಡವಾಗಿ ​ಸಂಚಾರ ಆರಂಭಿ​ಸಿ​ದೆ. ಒಂದು ವೇಳೆ ರೈಲು ವೇಗವಾಗಿ ಚಲಿಸುತ್ತಿದ್ದು, ಬ್ರೇಕ್‌ ಹಾಕದೆ ಹೋದಲ್ಲಿ ಭಾರೀ ಅನಾಹುತ ಸಂಭವಿಸುತ್ತಿತ್ತು. ಟ್ರ್ಯಾಕ್ಟರ್‌ ಅನ್ನು ವಶಕ್ಕೆ ಪಡೆಯಲಾಗಿದ್ದು ಎಫ್‌ಐಆರ್‌ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನು ನಿರ್ಲಕ್ಷ್ಯ ತೋರಿದ ರಸ್ತೆಯ ಗೇಟ್‌ಮ್ಯಾನ್‌ ಅನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!