41ನೇ ವಯಸ್ಸಿಗೇ ಹೃದಯಾಘಾತಕ್ಕೆ ಬಲಿಯಾದ 16 ಸಾವಿರಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಖ್ಯಾತ ಹೃದ್ರೋಗ ತಜ್ಞ

By BK Ashwin  |  First Published Jun 7, 2023, 4:46 PM IST

ಹೃದ್ರೋಗ ತಜ್ಞ ಗೌರವ್ ಗಾಂಧಿ ಅವರು ತಮ್ಮ 41 ನೇ ವಯಸ್ಸಿನಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಜಾಮ್‌ನಗರ (ಜೂನ್ 7, 2023): ಗುಜರಾತ್‌ನ ಖ್ಯಾತ ಹೃದ್ರೋಗ ತಜ್ಞ ಡಾ.ಗೌರವ್ ಗಾಂಧಿ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಾಮ್‌ನಗರದಲ್ಲಿ ಖ್ಯಾತ ವೈದ್ಯ ಎನಿಸಿಕೊಂಡಿದ್ದ ಅವರ ಸಾವಿಗೆ ಇಡೀ ನಗರವೇ ಆಘಾತ ವ್ಯಕ್ತಪಡಿಸಿದೆ. ಏಕೆಂದರೆ ಅವರು ಅಲ್ಲಿನ ಅತ್ಯುತ್ತಮ ಮತ್ತು ಕಿರಿಯ ಹೃದ್ರೋಗ ತಜ್ಞರಲ್ಲಿ ಒಬ್ಬರಾಗಿದ್ದರು.

ಹೌದು, ಹೃದ್ರೋಗ ತಜ್ಞ ಡಾ. ಗೌರವ್ ಗಾಂಧಿ ಅವರು ತಮ್ಮ 41 ನೇ ವಯಸ್ಸಿನಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆ ಅವರ ಸಾವಿನಿಂದ ವೈದ್ಯಕೀಯ ವಲಯವು ಆಘಾತಕ್ಕೊಳಗಾಗಿದೆ.

Latest Videos

undefined

ಇದನ್ನು ಓದಿ: ಹೃದಯ ಸ್ತಂಭನದಿಂದ 8ನೇ ತರಗತಿ ವಿದ್ಯಾರ್ಥಿ ಸಾವು: ಯುವ ವಯಸ್ಕರಲ್ಲೇ ಹೃದಯಾಘಾತ ಹೆಚ್ಚುತ್ತಿರೋದೇಕೆ?

ಎಂದಿನಂತೆ ತಮ್ಮ ಸಾಮಾನ್ಯ ದಿನ ಕಳೆದ ನಂತರ ಡಾ. ಗೌರವ್‌ ಗಾಂಧಿ ನಿದ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ದಿನದಂತೆ ಸೋಮವಾರ ರಾತ್ರಿಯೂ ಕೆಲವು ರೋಗಿಗಳನ್ನು ನೋಡಿದ ನಂತರ ಅವರು ತಮ್ಮ ಆಸ್ಪತ್ರೆಯ ತಮ್ಮ ಕೆಲಸ ಅಂತ್ಯಗೊಳಿಸಿ ನಂತರ ಅರಮನೆ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಮರಳಿದರು. 

ನಂತರ ಗೌರವ್‌ ಗಾಂಧಿಯವರು ರಾತ್ರಿ ಊಟಕ್ಕೆ ಸಾಮಾನ್ಯ ಆಹಾರವನ್ನು ಸೇವಿಸಿದರು ಮತ್ತು ಸ್ವಲ್ಪ ಸಮಯದ ನಂತರ ನಿದ್ರೆಗೆ ಹೋದರು. ಅವರ ವರ್ತನೆಯಲ್ಲಿ ಯಾವುದೇ ಅಸ್ವಸ್ಥತೆಯನ್ನು ನಾವು ಗಮನಿಸಲಿಲ್ಲ ಎಂದು ಅವರ ಕುಟುಂಬ ಹೇಳಿದೆ. ಅಲ್ಲದೆ, ಆ ರಾತ್ರಿ ಅವರು ಯಾವುದೇ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಲಿಲ್ಲ, ಹಾಗೂ ಅವರ ಆರೋಗ್ಯ ಕೂಡ ಸಾಮಾನ್ಯವಾಗಿಯೇ ಇತ್ತು ಎಂದೂ ಅವರು ಹೇಳಿದರು.

ಇದನ್ನೂ ಓದಿ: ಮೊಬೈಲ್‌ ಪ್ರಿಯರೇ ಎಚ್ಚರ: ವಾರಕ್ಕೆ ಅರ್ಧಗಂಟೆ ಫೋನ್‌ನಲ್ಲಿ ಮಾತಾಡಿದ್ರೂ ಬಿ.ಪಿ. ಹೆಚ್ಚಳ, ಅಕಾಲಿಕ ಮರಣ ಸಾಧ್ಯತೆ

ಆದರೆ, ಮರುದಿನ ಅವರು ಏಳಲಿಲ್ಲ. ಈ ಹಿನ್ನೆಲೆ ಬೆಳಿಗ್ಗೆ 6 ಗಂಟೆಯ ಸುಮಾರಿಗೆ, ಅವರು ಸಾಮಾನ್ಯ ಏಳುವ ಸಮಯಕ್ಕಿಂತ ಸ್ವಲ್ಪ ತಡವಾಗಿ, ಅವರ ಕುಟುಂಬ ಸದಸ್ಯರು ಅವರನ್ನು ಹಾಸಿಗೆಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿದುಬಂದಿದೆ.

ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಡಾ. ಗೌರವ್ ಗಾಂಧಿ ಅವರಿಗೆ 41 ವರ್ಷ ವಯಸ್ಸಾಗಿತ್ತು. ಡಾ. ಗೌರವ್‌ ಗಾಂಧಿಯವರು ತಮ್ಮ ವೈದ್ಯಕೀಯ ವೃತ್ತಿಜೀವನದಲ್ಲಿ 16,000 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.  

ಇದನ್ನೂ ಓದಿ: Shocking: ಗೆಳತಿ ಜತೆ ಮಾತಾಡುತ್ತಿದ್ದಂತೆ ಹೃದಯಾಘಾತಕ್ಕೆ ಬಲಿಯಾದ್ಲು 10ನೇ ಕ್ಲಾಸ್‌ ಬಾಲಕಿ..!

ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗ್ತಿರೋದೇಕೆ?
ಆರೋಗ್ಯ ತಜ್ಞರ ಪ್ರಕಾರ, ಭಾರತದಲ್ಲಿ ಯುವಜನರಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚುತ್ತಿವೆ. ಮುಂಬೈನ ಆಸ್ಪತ್ರೆಯೊಂದು ತನ್ನ ಎಮರ್ಜೆನ್ಸಿ ವಾರ್ಡ್‌ನಲ್ಲಿ ಕಳೆದ 2 ತಿಂಗಳಲ್ಲಿ ಹೃದಯಾಘಾತದ ಪ್ರಕರಣಗಳು ಶೇಕಡಾ 15-20 ರಷ್ಟು ಹೆಚ್ಚಾಗಿದೆ ಮತ್ತು ಹೆಚ್ಚಿನ ಪೀಡಿತ ರೋಗಿಗಳು 25 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ಎಂದು ಬೆಚ್ಚಿಬೀಳಿಸೋ ವರದಿ ಮಾಡಿದೆ.

ಜೀವನಶೈಲಿಯ ಪಾತ್ರ
ಅನೇಕ ವೈದ್ಯರು ಜೀವನಶೈಲಿಯ ಸಮಸ್ಯೆಗಳನ್ನು ಯುವ ಹೃದಯಾಘಾತದ ಪ್ರಕರಣಗಳಿಗೆ ಕಾರಣವಾಗುವ ಪ್ರಮುಖ ಅಂಶಗಳು ಎಂದು ಹೇಳುತ್ತಾರೆ. ಬದಲಾಗುತ್ತಿರುವ ಕಾಲದಲ್ಲಿ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ತೀವ್ರ ಬದಲಾವಣೆ ಕಂಡುಬಂದಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಯುವಕರು ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

click me!