ರಾಮ್ ರಹೀಂಗೆ ಕ್ಷಮಾದಾನ ನೀಡಿದ್ದಕ್ಕೆ ಮಾಜಿ ಡಿಸಿಎಂ ಸುಖ್‌ಬೀರ್‌ಗೆ ಸಿಖ್ ನ್ಯಾಯ ಮಂಡಳಿ ಶೌಚಾಲಯ ಶುಚಿಗೊಳಿಸುವ ಶಿಕ್ಷೆ ವಿಧಿಸಿದೆ.
ಅಮೃತಸರ: ಸಿಬ್ಬರ ಪವಿತ್ರ ಧರ್ಮಗ್ರಂಥವನ್ನು ಅವಮಾನಿಸಿದ್ದ ಅತ್ಯಾಚಾರ ದೋಷಿ, ವಿವಾದಿತ ಡೇರಾ ಸಚ್ಚಾ ಸೌದಾ ಪಂಥದ ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್‌ನನ್ನು ಬೆಂಬಲಿಸಿ 'ಕ್ಷಮಾದಾನ' ನೀಡಿದ್ದಕ್ಕೆ ಪಂಜಾಬ್‌ನ ಮಾಜಿ ಡಿಸಿಎಂ ಸುಖಬೀರ್ ಬಾದಲ್ ಅವರಿಗೆ ಸಿಬ್ಬರ ಪರಮೋಚ್ಚ ಧಾರ್ಮಿಕ ನ್ಯಾಯ ಮಂಡಳಿ 'ಅಕಾಲ್ ತಖ್', ಶೌಚಾಲಯ ಶುಚಿಗೊಳಿಸುವ ಶಿಕ್ಷೆ ವಿಧಿಸಿದೆ. ಮಂಗಳವಾರವೇ ಅಂದರೆ ಇಂದೇ ಶಿಕ್ಷೆ ಅನುಭವಿಸುವಂತೆ ಸೂಚಿಸಿದೆ.
2015ರಲ್ಲಿ ಬಾದಲ್ ಡಿಸಿಎಂ ಆಗಿದ್ದಾಗ ರಾಮ್ ರಹೀಂಗೆ ಕ್ಷಮಾದಾನ ಮಾಡಿದ್ದರು. ಹೀಗಾಗಿ ಆ.30ರಂದು ಬಾದಲ್‌ರನ್ನು ಧರ್ಮದ್ರೋಹಿ ಎಂದು ತಖ್ ಘೋಷಿಸಿತ್ತು. ಇದಾದ ನಂತರ ಬಾದಲ್ ಕ್ಷಮೆ ಯಾಚಿಸಿದ್ದರು. ಬಳಿಕ ಬಾದಲ್ ಹಾಗೂ ಸಂಪುಟದ ಎಲ್ಲ ಸಚಿವರಿಗೆ ಶಿಕ್ಷೆ ವಿಧಿಸಿದೆ. ಬಾದಲ್‌ಗೆ ಕಾಲು ನೋವಿರುವ ಕಾರಣ ಕೊಂಚ ಸುಲಭ ಶಿಕ್ಷೆ ನೀಡಿದ್ದಾಗಿ ಅದು ಹೇಳಿದೆ.
ಇದರನ್ವಯ ಡಿ.3ರಂದು ಮಧ್ಯಾಹ್ನ 12 ಗಂಟೆಗೆ 1 ತಾಸು ಬಾದಲ್ ಮತ್ತು ಸಂಪುಟದ ಮಾಜಿ ಸಚಿವರು ಸೇವಕರ ಉಡುಪು ಧರಿಸಿ ಅಮೃತಸರದ ಸ್ವರ್ಣಮಂದಿರದ ಶೌಚಾಲಯ ಶುಚಿಗೊಳಿಬೇಕು. ಮಂದಿರಕ್ಕೆ ಆಗಮಿಸುವ ಭಕ್ತರ ಚಪ್ಪಲಿ ಪಾಲಿಶ್ ಮಾಡಬೇಕು. ಲಂಗರ್ (ಭೋಜನ ಶಾಲೆ)ಯಲ್ಲಿ ಊಟ ಬಡಿಸಿ ಪಾತ್ರೆ ತೊಳೆಯಬೇಕು ಮತ್ತು ಇನ್ನೂ 3 ಗುರುದ್ವಾರಗಳಲ್ಲಿ ಸೇವೆ ಮಾಡಬೇಕು ಎಂದು ಆದೇಶಿಸಿದೆ. ಜೊತೆಗೆ ಪಕ್ಷದ ಹುದ್ದೆಗೆ ಬಾದಲ್ ರಾಜೀನಾಮೆ ಅಂಗೀಕರಿಸಿ ಅಧ್ಯಕ್ಷ ಹುದ್ದೆಗೆ 6 ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ಶಿರೋಮಣಿ ಅಕಾಲಿ ದಳಕ್ಕೆ ಸೂಚಿಸಿದೆ. ಇದರ ಜೊತೆಗೆ ಬಾದಲ್ ತಂದೆ ಮಾಜಿ ಸಿಎಂ ಪ್ರಕಾಶ್ ಬಾದಲ್ ಅವರಿಗೆ ನೀಡಿದ್ದ 'ಫಖ್-ಎ-ಕ್ವಾಮ್' (ಧರ್ಮದ ಹೆಮ್ಮೆ) ಎಂಬ ಧಾರ್ಮಿಕ ಬಿರುದಾವಳಿಯನ್ನೂ ಹಿಂಪಡೆದಿದೆ ಸಿಖ್ ನ್ಯಾಯ ಮಂಡಳಿ ಹಿಂಪಡೆದಿದೆ.
ಸಿಖ್ಖರಲ್ಲಿ ಇಂಥ ಶಿಕ್ಷೆ ಸಾಮಾನ್ಯವಂತೆ
ಅಕಾಲ್ ತಖ್ತ್ ಎಂಬುದು ಸಿಖ್ಖರ ಉನ್ನತ ನ್ಯಾಯ ಸಂಸ್ಥೆ. ಧರ್ಮ ನಿಂದನೆ, ಕರ್ತವ್ಯ ಲೋಪದಂತಹ ಪ್ರಕರಣಗಳಲ್ಲಿ ಅದರ ಮುಖ್ಯಸ್ಥ ಜಾಠೇದಾರ್ ತೀರ್ಪು ನೀಡುತ್ತಾರೆ. ಸಿಖ್ಖರಲ್ಲಿ ಇಂಥ ಶಿಕ್ಷೆ ಸಾಮಾನ್ಯ.
ಇದನ್ನೂ ಓದಿ: ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿ ..? : ಕೇಸರಿ ಹೈಕಮಾಂಡ್ ಜೊತೆ ಎಸ್‌ಎಡಿ ಮುಖ್ಯಸ್ಥ ಮಾತು..?
ಇದನ್ನೂ ಓದಿ:ಜರ್ಮನಿಯಲ್ಲಿ ವಿಮಾನದಲ್ಲಿ ಕುಡಿದು ತೂರಾಡಿದರೇ ಪಂಜಾಬ್ ಸಿಎಂ Bhagwant Mann..?