ಮೂಲಸೌಕರ್ಯಕ್ಕೆ ನಮೋ ಬಂಪರ್‌: ಮೋದಿ ಪ್ರಗತಿಗೆ ಆಕ್ಸ್‌ಫರ್ಡ್ ವಿವಿ ಪ್ರಶಂಸೆ

By Kannadaprabha News  |  First Published Dec 3, 2024, 4:27 AM IST

9  ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಾರಂಭವಾದಾಗಿನಿಂದ, ಪ್ರಗತಿ ವೇದಿಕೆಯು ಭಾರತದ ಮೂಲ ಸೌಕರ್ಯ ಅಭಿವೃದ್ಧಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದೆ. ಜೂನ್ 2023ರ ವೇಳೆಗೆ, 17.05 ಲಕ್ಷ ಕೋಟಿ ರು. ಮೌಲ್ಯದ 340 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಬಿಡುಗಡೆ ಮಾಡಿದ ಅಧ್ಯಯನವು ಹೇಳಿದೆ.


ನವದೆಹಲಿ(ಡಿ.03): ಭಾರತದ ಮೂಲಸೌಕರ್ಯ ಯೋಜನೆಗಳ ತಡೆರಹಿತ ಅನುಷ್ಠಾನಕ್ಕಾಗಿ 9 ವರ್ಷ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ 'ಪ್ರಗತಿ' ಆನ್‌ಲೈನ್ ವೇದಿಕೆಯ ದೇಶದ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಇದರ ಮೂಲಕ 205 ಶತಕೋಟಿ ಡಾಲರ್ (17.05 ಲಕ್ಷ ಕೋಟಿ ರು.) 340 ಪ್ರಮುಖ ಮೂಲ ಸೌಕರ್ಯ ಯೋಜನೆಗಳು ಅನುಷ್ಠಾನಗೊಂಡಿದೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಗೇಟ್ಸ್ ಫೌಂಡೇಶನ್ ನಡೆಸಿದ ಅಧ್ಯಯನವು ಶ್ಲಾಘಿಸಿದೆ. 

9  ವರ್ಷಗಳ ಹಿಂದೆ ಪ್ರಾರಂಭವಾದಾಗಿನಿಂದ, ಪ್ರಗತಿ ವೇದಿಕೆಯು ಭಾರತದ ಮೂಲ ಸೌಕರ್ಯ ಅಭಿವೃದ್ಧಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದೆ. ಜೂನ್ 2023ರ ವೇಳೆಗೆ, 17.05 ಲಕ್ಷ ಕೋಟಿ ರು. ಮೌಲ್ಯದ 340 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ' ಎಂದು ಸೋಮವಾರ ಬಿಡುಗಡೆ ಮಾಡಿದ ಅಧ್ಯಯನವು ಹೇಳಿದೆ.

Latest Videos

undefined

ಕೋವಿಡ್ ನಂತರ ಉಸಿರಾಟದ ತೊಂದರೆ ಹೆಚ್ಚುತ್ತಿದೆ! ಹೊಸ ಅಧ್ಯಯನ ಏನು ಹೇಳುತ್ತೆ?

ವಿಶೇಷ ಎಂದರೆ ಈ 340 ಯೋಜನೆಗಳ ಪೈಕಿ 8 ಯೋಜನೆಗಳನ್ನು (ರೈಲು, ರಸ್ತೆ, ವಿದ್ಯುತ್, ವಾಯುಯಾನ) ಪ್ರಮುಖವಾಗಿ ವರದಿಯಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ ಬೆಂಗಳೂರು ಮೆಟ್ರೋ ಯೋಜನೆಯೂ ಒಂದು ಎಂಬುದು ವಿಶೇಷ. ಉಳಿದವು ಜಮ್ಮು -ಉಧಂಪುರ-ಶ್ರೀನಗರ ಬಾರಾಮುಲ್ಲಾ ರೈಲು ಸಂಪರ್ಕ, ನವಿ ಮುಂಬೈ ವಿಮಾನ ನಿಲ್ದಾಣ, ಅಸಾಂ ಸೇತುವೆ, ವಾರಾಣಸಿ- ಔರಂಗಾಬಾದ್ ಸೇತುವೆ.. ಇತ್ಯಾದಿ. 

ಮೋದಿಗೆ ವರದಿ ಶ್ಲಾಘನೆ: 

ವರದಿಯಲ್ಲಿ ಪ್ರಗತಿಯ ಪರಿಣಾಮಗಳನ್ನು ವಿಶ್ಲೇಷಿಸಲಾಗಿದ್ದು, '12 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ನಂತರ, ಮೋದಿಯವರು ಮೂಲಸೌಕರ್ಯ ಯೋಜನೆಗಳು ಹೇಗೆ ಜಾರಿಗೊಳ್ಳುತ್ತವೆ ಎಂಬ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದಿದರು.

ಅನೇಕ 'ಪ್ರಗತಿ ಯೋಜನೆ'ಗಳ ಯಶಸ್ಸನ್ನು ನೇರವಾಗಿ ಒಂದುಸಣ್ಣವಿಡಿಯೋಕಾನ್ನರೆನ್ಸಿಂಗ್ ಕೊಠಡಿಯಿಂದ ಕಂಡುಹಿಡಿಯಬಹುದು. ಪ್ರಧಾನಮಂತ್ರಿಗಳಸೌತ್ ಬ್ಲಾಕ್ ಕಛೇರಿಯಲ್ಲಿ, ಪ್ರತಿ ತಿಂಗಳ ಕೊನೆಯ ಬುಧವಾರ ಮೋದಿ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸುತ್ತಾರೆ. ಕ್ಯಾಬಿನೆಟ್ ಕಾರ್ಯದರ್ಶಿ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳು ವೀಡಿಯೊ ಕಾನ್ವರೆನ್ಸ್‌ನಲ್ಲಿ ಸೇರಿಕೊಳ್ಳುತ್ತಾರೆ. ಸಾಮಾನ್ಯವಾಗಿ 90 ನಿಮಿಷಗಳ ಕಾಲ ನಡೆಯುವ ಈ ವಿಡಿಯೋ ಕಾನ್ಸರೆನ್ಸ್‌ನಲ್ಲಿ ಮೋದಿ ಎಲ್ಲ ಕಾಮಗಾರಿಗಳ ಅವಲೋಕನ ನಡೆಸುತ್ತಾರೆ' ಎಂದು ವರದಿ ಹೇಳಿದೆ. 

ಬೆಂಗಳೂರು ಮೆಟ್ರೋ ಬಗ್ಗೆ ಆಕ್ಸ್‌ಫರ್ಡ್ ವಿವಿ ಶ್ಲಾಘನೆ: 

'ಪ್ರಗತಿ' ಮೂಲಕ ಅನುಷ್ಠಾನಗೊಂಡ ಕಾಮಗಾರಿಗಳಲ್ಲಿ ಬೆಂಗಳೂರು ಮೆಟ್ರೋ ಮಹತ್ವದ ಸಾಧನೆ ಎಂದು ಆಕ್ಸ್‌ಫರ್ಡ್ ವಿವಿ ಶ್ಲಾಘಿಸಿದೆ. 

'ಬೆಂಗಳೂರು ಮೆಟ್ರೋ ಮೊದಲ ಹಂತವು 2017 ರಲ್ಲಿ ಕಾರ್ಯರೂಪಕ್ಕೆ ಬಂದಿತು, ಎರಡನೇ ಹಂತವು 2026 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೂರನೇ ಹಂತವು 2028ರ ವೇಳೆಗೆ ಕಾರ್ಯನಿರ್ವಹಿಸಬಹುದು ಮತ್ತು ಎರಡು ಹೊಸ ಎತ್ತರದ ಮಾರ್ಗಗಳನ್ನು ಒಳಗೊಂಡಿರುತ್ತದೆ. ಯೋಜನೆಯ ರೈಲು ಕಾರಿಡಾರ್‌ಗಳು ನಗರದ ಮೂಲಕ ಹಾದು ಹೋಗುತ್ತವೆ. ಇವುಗಳಿಗೆ ಸಾಕಷ್ಟು ಭೂಮಿ ಬೇಕು. ಹೀಗಾಗಿ ಭೂಸ್ವಾಧೀನ ಕಷ್ಟಕರವಾದ ಕೆಲಸವಾಗಿತ್ತು. 2017ರಲ್ಲಿ ಕಾರ್ಯಾರಂಭವಾದಾಗಿನಿಂದ, ಹಂತ 1ರ 42 ಕಿಮೀ ವ್ಯಾಪ್ತಿಯ 40 ನಿಲ್ದಾಣಗಳು ನಗರದ ಸಾರಿಗೆ ವ್ಯವಸ್ಥೆಗೆ ಚೇತೋಹಾರಿಯಾಗಿವೆ. ಇದರಿಂದ ಸಂಚಾರ ದಟ್ಟಣೆಯಲ್ಲಿ ತೀವ್ರ ಇಳಿಕೆ ಆಗಿದೆ, ಗಾಳಿಯ ಗುಣಮಟ್ಟ ಹೆಚ್ಚಿದೆ. ಇದು ವಿಶ್ವಾಸಾರ್ಹ ಸಾರಿಗೆ ವಿಧಾನವಾಗಿದೆ' ಎಂದು ವದಿಯಲ್ಲಿ ಕೊಂಡಾಡಲಾಗಿದೆ.

ಏನಿದು ಪ್ರಗತಿ? 

ಪ್ರಗತಿ (https://pragati.nic.in/en/) ಎಂಬ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಅನ್ನು 2015ರಲ್ಲಿ ರೂಪಿಸಲಾಗಿತ್ತು. ಇದರಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸಿ ಮೂಲಸೌಕರ್ಯ ಯೋಜನೆಗಳ ಜಾರಿಗೆ ಇದ್ದ ಅಡೆತಡೆಗಳನ್ನು ಪರಸ್ಪರ ಸಂವಹನದ ಮೂಲಕಬೇಗ ಇತ್ಯರ್ಥಪಡಿ ಸಿಕೊಳ್ಳುತ್ತವೆ. ಇದರಿಂದ ಯೋಜನೆಗಳ ಜಾರಿ ತ್ವರಿತವಾಗಿ ಆಗುತ್ತದೆ.

ಏಷ್ಯಾ ವಿಶ್ವವಿದ್ಯಾಲಯಿಂದ ಹೊರದಬ್ಬಿದ ದಲಿತ ವಿದ್ಯಾರ್ಥಿ ವಿದ್ಯಾಭ್ಯಾಸಕ್ಕೆ ಆಕ್ಸ್‌ಫರ್ಡ್‌ ಸ್ಕಾಲರ್‌ಶಿಪ್!

ಪ್ರಗತಿ ಗುರುತಿಸಿದ್ದಕ್ಕೆ ಸಂತಸ 

'ಪ್ರಗತಿ'ಯು ತಂತ್ರ ಜ್ಞಾನ ಮತ್ತು ಆಡಳಿತದ ಅದ್ಭುತ ಸಂಯೋಜನೆ ಯನ್ನು ಪ್ರತಿನಿಧಿಸುತ್ತದೆ. ಯೋಜನೆ ಅನುಷ್ಠಾನದ ಅಡ್ಡಿ ಗಳನ್ನು ತೆರವು ಮಾಡಿ, ಸರಿಯಾದ ಸಮಯಕ್ಕೆ ಅವನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸುತ್ತದೆ. ಇದು ಜನರಿಗೆ ಹೆಚ್ಚು ಪ್ರಯೋಜನವನ್ನು ನೀಡಿದೆ. ಆಕ್ಸ್‌ಫರ್ಡ್ ಮತ್ತು ಗೇಟ್ ಫೌಂಡೇಶನ್‌ಗಳು ಪ್ರಗತಿಯ ಪರಿಣಾಮ ಗುರುತಿಸಿರುವುದಕ್ಕೆ ನನಗೆ ಸಂತೋಷವಾಗಿದೆ. 

ಮೋದಿ ಬಗ್ಗೆ ಏಕೆ ಮೆಚ್ಚುಗೆ? 

• 9 ವರ್ಷಗಳ ಹಿಂದೆ ಮೋದಿ ಸರ್ಕಾರ ದಿಂದ 'ಪ್ರಗತಿ' ಆನ್‌ಲೈನ್ ವೇದಿಕೆ ಶುರು 
• ಇದರ ಮೂಲಕ ಈವರೆಗೆ ದೇಶದಲ್ಲಿ 340 ಮೂಲಸೌಕಯ್ಯ ಯೋಜನೆ ಜಾರಿ 
• ಯೋಜನೆ ವ್ಯಾಪ್ತಿಯಲ್ಲಿ ಜಾರಿಯಾದ ಕಾಮಗಾರಿ ಮೊತ್ತ 17 ಲಕ್ಷ ಕೋಟಿ ರು. 
• ಬೆಂಗಳೂರು ಮೆಟ್ರೋ, ಜಮ್ಮು - ಬಾರಾಮುಲ್ಲಾ ರೈಲು, ನವಿ ಮುಂಬೈ ವಿಮಾನ ನಿಲ್ದಾಣ ಪ್ರಮುಖ ಂಗಳು - ಯೋಜನೆ ಘೋಷಣೆ ಬಳಿಕ ಅದರ ಜಾರಿಯ ಪ್ರತಿ ಹಂತದಲ್ಲೂ ಸ್ವತಃ ಪ್ರಧಾನಿ ಮೋದಿ ಅವರಿಂದಲೇ ನಿಗಾ 
• ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ, ಗೇಟ್ಸ್ ಫೌಂಡೇಶನ್ ಅಧ್ಯಯನ ವರದಿ ಶ್ಲಾಘನೆ

click me!