ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆರೋಗ್ಯ ಏರುಪೇರು, ಆಸ್ಪತ್ರೆ ದಾಖಲು!

By Suvarna NewsFirst Published Mar 14, 2024, 3:26 PM IST
Highlights

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆರೋಗ್ಯ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಚೆಸ್ಟ್ ಇನ್‌ಫೆಕ್ಷನ್ ಹಾಗೂ ಜ್ವರದಿಂದ ಬಳಲುತ್ತಿರುವ ಪ್ರತಿಭಾ ಪಾಟೀಲ್ ಅವರನ್ನು ಭಾರತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 

ಪುಣೆ(ಮಾ.14) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ  ಪ್ರತಿಭಾ ಸಿಂಗ್ ಪಾಟೀಲ್ ಪಾತ್ರರಾಗಿದ್ದಾರೆ. ಯುಪಿಎ ಅವಧಿಯಲ್ಲಿ ಭಾರತದ 12ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವ ಪ್ರತಿಭಾ ಸಿಂಗ್ ಪಾಟೀಲ್ ಆರೋಗ್ಯ ಏರುಪೇರಾಗಿದೆ. ಇದೀಗ ಮಾಜಿ ರಾಷ್ಟ್ರಪತಿಯನ್ನು ಪುಣೆಯ ಭಾರತೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಪ್ರತಿಭಾ ಪಾಟೀಲ್ ಇಂದು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಜ್ವರದಿಂದ ಇದೀಗ ಚೆಸ್ಟ್ ಇನ್‌ಫೆಕ್ಷನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪ್ರತಿಭಾ ಪಾಟೀಲ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

ಜ್ವರದಿಂದ ಅಸ್ವಸ್ಥಗೊಂಡ ಪ್ರತಿಭಾ ಪಾಟೀಲ್ ಅವರನ್ನು ಪುಣೆಯ ಭಾರತೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ವೈದ್ಯರ ತಂಡ ಪ್ರತಿಭಾ ಪಾಟೀಲ್ ಅವರ ಆರೋಗ್ಯದ ಮೇಲೆ ನಿಘಾಹಿಸಿದೆ. ಪ್ರತಿಭಾ ಪಾಟೀಲ್ ಶೀಘ್ರ ಗುಣಮುಖರಾಗಲು ಹಲವು ನಾಯಕರು ಪಾರ್ಥಿಸಿದ್ದಾರೆ. ಪ್ರತಿಭಾ ಪಾಟೀಲ್ ಆರೋಗ್ಯ ಸ್ಥಿರವಾಗಿದೆ. ನಿಧಾನವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಕರವಸ್ತ್ರ ಹೆಕ್ಕಿಕೊಟ್ಟ ಪ್ರಧಾನಿ ಮೋದಿ!

ಪ್ರತಿಭಾ ಸಿಂಗ್ ಪಾಟೀಲ್ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಅನ್ನೋ ಹಿರಿಮೆಗೆ ಪಾತ್ರರಾಗಿದ್ದಾರೆ. 2007ರಿಂದ 2012ರ ವರೆಗೆ ಪ್ರತಿಭಾ ಪಾಟೀಲ್ ಭಾರತದ 12ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ಪಟ್ಟ ಅಲಂಕರಿಸುವ ಮುನ್ನ 2004ರಿಂದ 2007ರ ವರೆಗೆ ರಾಜಸ್ಥಾನದ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. 

1991ರಿಂದ 1996ರ ವರೆಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕಿಯಾಗಿ 1962ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿ ದಾಖಲೆ ಬರೆದಿದ್ದರು. 27ನೇ ವಯಸ್ಸಿಗೆ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ 60ರ ದಶಕದ ಕಿರಿಯ ಶಾಸಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಪ್ರತಿಭಾ ಸಿಂಗ್ ಪಾಟೀಲ್ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದರೆ, ಹಾಲಿ ರಾಷ್ಟ್ರಪತಿ ದೌರ್ಪದಿ ಮುರ್ಮು ಆದಿವಾಸಿ ಸಮುದಾಯದಿಂದ ರಾಷ್ಟ್ರಪತಿ ಸ್ಥಾನಕ್ಕೇರಿದ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

 

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಪತಿ ದೇವಿಸಿಂಗ್ ನಿಧನ, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ!

2023ರ ಫೆಬ್ರವರಿ ತಿಂಗಳಲ್ಲಿ ಪ್ರತಿಭಾ ಸಿಂಗ್ ಪಾಟೀಲ್ ಅವರ ಪತಿ ದೇವಿಸಿಂಗ್ ರಣಸಿಂಗ್ ಶೇಖಾವತ್ ನಿಧನರಾಗಿದ್ದರು. ಕಿಡ್ನಿ ಸಮಸ್ಯೆ, ಅಧಿಕ ರಕ್ತದೊತ್ತಡ ಹಾಗೂ ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ವರ್ಷ ಆಸ್ಪತ್ರೆ ದಾಖಲಾಗಿದ್ದರು.

click me!