One nation, One election: ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ಮಾಡಿರುವ 8 ಶಿಫಾರಸುಗಳಿವು

By Santosh NaikFirst Published Mar 14, 2024, 2:10 PM IST
Highlights

ಕೋವಿಂದ್ ಸಮಿತಿಯು 18,626 ಪುಟಗಳನ್ನು ಒಳಗೊಂಡ ವರದಿಯನ್ನು ಗುರುವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತು.

ನವದೆಹಲಿ (ಮಾ.14):  ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಗುರುವಾರ ದೇಶಾದ್ಯಂತ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ (ಒಂದು ರಾಷ್ಟ್ರ ಒಂದು ಚುನಾವಣೆ ಎಂದೇ ಪ್ರಖ್ಯಾತವಾಗಿ ಕರೆಯಲಾಗುತ್ತಿದೆ) ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತು ತನ್ನ ವರದಿಯನ್ನು ಸಲ್ಲಿಸಿದೆ. ಸಮಿತಿಯು 18,626 ಪುಟಗಳನ್ನು ಒಳಗೊಂಡ ವರದಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದೆ. ಅಂದಾಜು 191 ದಿನಗಳ ಕಾಲ ವಿವಿಧ ವಿಭಾಗಗಳ ವ್ಯಕ್ತಿಗಳು, ತಜ್ಞರು ಹಾಗೂ ಸಂಶೋಧನಾ ವ್ಯಕ್ತಿಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ಬಳಿಕ ವರದಿಯನ್ನು ಸಿದ್ಧ ಮಾಡಲಾಗಿದೆ. 2023ರ ಸೆಪ್ಟೆಂಬರ್‌ 2 ರಂದು ಈ ಸಮಿತಿಯನ್ನು ಸ್ಥಾಪಿಸಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್ ಮತ್ತು ಇತರರ ಸಮ್ಮುಖದಲ್ಲಿ ಸಮಿತಿಯು ವರದಿಯನ್ನು ಸಲ್ಲಿಸಿತು.

ಇತ್ತೀಚೆಗೆ ಉನ್ನತ ಮಟ್ಟದ ಸಮಿತಿಯು ಬಿಜೆಪಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸಿಪಿಐ, ಸಿಪಿಐ(ಎಂ), ಎಐಎಂಐಎಂ, ಆರ್‌ಪಿಐ, ಅಪ್ನಾ ದಳ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಸಂವಾದ ನಡೆಸಿತು. ಈ ಪಕ್ಷಗಳ ಪ್ರತಿನಿಧಿಗಳೂ ತಮ್ಮ ಸಲಹೆಗಳನ್ನು ಲಿಖಿತವಾಗಿ ಸಮಿತಿಗೆ ಹಸ್ತಾಂತರಿಸಿದರು.

'ಒಂದು ರಾಷ್ಟ್ರ, ಒಂದು ಚುನಾವಣೆ': ಕೋವಿಂದ್ ಸಮಿತಿಯ ವರದಿಯಿಂದ ಪ್ರಮುಖ 8 ಅಂಶಗಳು
1. ಮೊದಲ ಹಂತದಲ್ಲಿ ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ, ಎರಡನೇ ಹಂತದಲ್ಲಿ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬಹುದು.
2. ಒಂದು ವೇಳೆ ಅವಿಶ್ವಾಸ ಗೊತ್ತುವಳಿ, ಅತಂತ್ರ ಸರ್ಕಾರವಾದಲ್ಲಿ, 5 ವರ್ಷಗಳ ಉಳಿದ ಅವಧಿಗೆ ಹೊಸದಾಗಿ ಚುನಾವಣೆ ನಡೆಸಬಹುದು.
3. ಮೊದಲ ಏಕಕಾಲಿಕ ಚುನಾವಣೆಗೆ, ಎಲ್ಲಾ ರಾಜ್ಯಗಳ ಅಸೆಂಬ್ಲಿಗಳ ಅಧಿಕಾರಾವಧಿಯು ನಂತರದ ಲೋಕಸಭೆ ಚುನಾವಣೆಯವರೆಗೆ ಕೊನೆಗೊಳ್ಳಬಹುದು.
4. ಕೋವಿಂದ್ ಸಮಿತಿಯು ಏಕಕಾಲದಲ್ಲಿ ಚುನಾವಣೆ ನಡೆಸಲು ಬೇಕಾಗುವ ಇವಿಎಂಗಳು, ಮಾನವಶಕ್ತಿ ಮತ್ತು ಭದ್ರತಾ ಪಡೆಗಳಿಗೆ ಮುಂಚಿತವಾಗಿ ಯೋಜನೆ ಮಾಡಬೇಕು ಎಂದು ಶಿಫಾರಸು ಮಾಡಿದೆ.
5. ಒಂದೇ ಚುನಾವಣೆಗಳು ಮತದಾರರ ಪಾರದರ್ಶಕತೆ, ಒಳಗೊಳ್ಳುವಿಕೆ, ಸುಲಭ ಮತ್ತು ವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸುತ್ತವೆ.
6. ಅಭಿವೃದ್ಧಿ ಪ್ರಕ್ರಿಯೆ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ಏಕಕಾಲಿಕ ಮತದಾನಗಳು, ಪ್ರಜಾಪ್ರಭುತ್ವದ ತಳಹದಿಯ ಆಳವನ್ನು ಹೆಚ್ಚಿಸುತ್ತವೆ.
7. ಏಕಕಾಲಿಕ ಚುನಾವಣೆಗಳು 'ಇಂಡಿಯಾ, ಇದು ಭಾರತ'ದ ಆಶಯಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ.
8. ಮಹತ್ವಾಕಾಂಕ್ಷೆಯ ಭಾರತದ ಅನ್ವೇಷಣೆಗೆ ಅನುಗುಣವಾಗಿ ಆಡಳಿತದ ವಾಸ್ತುಶಿಲ್ಪವನ್ನು ಸುಧಾರಿಸಲು ಸರ್ಕಾರದ ಎಲ್ಲಾ ಮೂರು ಹಂತಗಳಿಗೆ ಸಿಂಕ್ರೊನೈಸ್ ಮಾಡಲು ಏಕಕಾಲಿಕ ಚುನಾವಣೆಗಳು ನೆರವಾಗಲಿದೆ.

ಒಂದು ದೇಶ ಒಂದು ಚುನಾವಣೆ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಣೆ? ಜನರಿಂದ ಸಲಹೆ ಆಹ್ವಾನ

ಒಂದು ದೇಶ ಒಂದು ಚುನಾವಣೆಗೆ ಬಿರುಸಿನ ಚಟುವಟಿಕೆ: ದೇಶಕ್ಕೊಂದೇ ಚುನಾವಣೆ ಕಾನೂನು ಜಾರಿ ಹೇಗೆ..?

click me!