ವೋಟ್‌ಬ್ಯಾಂಕ್‌ ಸಲುವಾಗಿ ಪ್ಯಾಲೆಸ್ತೇನ್‌ ಪರ ನಿಂತ ಕಾಂಗ್ರೆಸ್‌, 'ಹಮಾಸ್‌ ಭಯೋತ್ಪಾದಕರಲ್ಲ' ಎಂದ ತರೂರ್‌!

By Santosh Naik  |  First Published Oct 12, 2023, 1:35 PM IST

ಹಮಾಸ್‌ ಮೇಲೆ ಭಯೋತ್ಪಾದಕ ಸಂಘಟನೆಯ ಲೇಬಲ್‌ ಹಚ್ಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಹೇಳಿಕೆಗೆ ಇಸ್ರೇಲ್‌ನ ಮಾಜಿ ರಾಯಭಾರಿ ಆಘಾತ ವ್ಯಕಗ್ತಪಡಿಸಿದ್ದಾರೆ. ಇದರ ಬೆನ್ನಲ್ಲಿಯೇ ಶಶಿ ತರೂರ್‌ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
 


ನವದೆಹಲಿ (ಅ.12): ಹಿಂದು ವೋಟ್‌ಬ್ಯಾಂಕ್‌ ತಮಗೆ ಮತ ಹಾಕೋದಿಲ್ಲ ಎನ್ನುವ ಸಣ್ಣ ಸೂಚನೆ ಸಿಕ್ಕ ಬೆನ್ನಲ್ಲಿಯೇ ಮುಸ್ಲಿಂ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್‌ ಪಕ್ಷ ಹಾಗೂ ಅದರ ನಾಯಕರುಗಳು ಇತ್ತೀಚೆಗೆ ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ನಡೆಸಿದ ಭೀಬತ್ಸ ಕೃತ್ಯವನ್ನು ಖಂಡಿಸುವ ಕೆಲಸ ಮಾಡಲಿಲ್ಲ. ಹಮಾಸ್‌ ಉಗ್ರರು ಮಾಡಿದ್ದು ತಪ್ಪು ತನ್ನುವ ಸಣ್ಣ ಮಾತು ಆ ಪಕ್ಷದಿಂದ ಬರಲಿಲ್ಲ. ಅದರ ಬದಲಿಗೆ ಪ್ಯಾಲೆಸ್ತೇನ್‌ ಪರವಾದ ನಿರ್ಣಯವನ್ನು ಕಾಂಗ್ರೆಸ್‌ ತೆಗೆದುಕೊಂಡಿತ್ತು. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಹಮಾಸ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಸ್ಪಷ್ಟನೆ ನೀಡಿದ ಅವರು, ಹಮಾಸ್‌ನ ಬಗ್ಗೆ ಭಾರತದ ನಿಲುವೇನು ಅನ್ನೋದರ ಬಗ್ಗೆ ಅದು ನನ್ನ ಹೇಳಿಕೆಯಾಗಿತ್ತು. ಆದರೆ, ಇಸ್ರೇಲ್‌ನ ಮೇಲೆ ಹಮಾಸ್‌ ಮಾಡಿದ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಅವರು ನೀಡಿರುವ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು, ಹಮಾಸ್‌ನಂಥ ಉಗ್ರ ಸಂಘಟನೆಯ ಬೆಂಬಲಕ್ಕೆ ನಿಂತಿರುವುದು ತಲೆತಗ್ಗಿಸುವ ವಿಚಾರ ಎಂದುಹೇಳಿದ್ದಾರೆ.

ಭಾರತದಲ್ಲಿರುವ ಇಸ್ರೇಲ್‌ನ ಮಾಜಿ ರಾಯಭಾರಿ ಡೇನಿಯಲ್ ಕಾರ್ಮನ್, ಈ ಹೇಳಿಕೆಯ ಬಗ್ಗೆ ಶಶಿ ತರೂರ್‌ ಅವರಿಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಹಮಾಸ್ ಅನ್ನು ಭಾರತ ಎಂದಿಗೂ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿಲ್ಲ ಎಂಬ ಭಾರತದ ಅಧಿಕೃತ ನಿಲುವನ್ನು ಮಾತ್ರ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. "ಹಮಾಸ್‌ ಎನ್ನುವುದು ಭಯೋತ್ಪಾದಕ ಸಂಘಟನೆ ಎನ್ನುವ ಲೇಬಲ್‌ಅನ್ನು ಭಾರತ ಈವರೆಗೂ ನೀಡಿಲ್ಲ. ಇತರ ದೇಶಗಳು ನೀಡಿರಬಹುದು. ಆದರೆ, ನಿಸ್ಸಂದೇಹವಾಗಿ ಹಮಾಸ್ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದೆ, ಅದನ್ನು ನಾನು ಸಂಪೂರ್ಣವಾಗಿ ಖಂಡಿಸಿದ್ದೇನೆ," ಎಂದು ತರೂರ್ ಅವರು ಕಾರ್ಮನ್‌ಗೆ ಉತ್ತರಿಸಿದ್ದು, ಇಸ್ರೇಲ್‌ನ ಶಾಂತಿ ಮತ್ತು ಸುರಕ್ಷತೆಗಾಗಿ ಮನವಿ ಮಾಡಿದ್ದಾರೆ.

"ಗಂಭೀರವಾಗಿ ಹೇಳಿ ಇದು ನಿಮಗೆ ಸಾಧ್ಯವಿಲ್ಲವೇ? ನನ್ನ ಜನರ ವಿರುದ್ಧ ದಶಕಗಳ ಭಯೋತ್ಪಾದನೆಯ ನಂತರ, ಪ್ಯಾಲೆಸ್ತೀನ್ ಪ್ರಾಧಿಕಾರಕ್ಕೆ ಸವಾಲು ಹಾಕುವ ಮೂಲಕ, ವಿಶೇಷವಾಗಿ ಈ ವಾರದ ಸಾವಿರಕ್ಕೂ ಹೆಚ್ಚು ಶಾಂತಿಯುತ ಮಾನವರ ಘೋರ ಹತ್ಯೆಯ ನಂತರ, ಹಮಾಸ್ ಅನ್ನು ಭಯೋತ್ಪಾದಕರು ಎಂದು ನೀವು ಹೆಸರಿಸಲು ಸಾಧ್ಯವಿಲ್ಲವೇ? ನಾನೂ ಆಘಾತಕ್ಕೊಳಗಾಗಿದ್ದೇನೆ," ಎಂದು ರಾಜ್‌ದೀಪ್‌ ಸರ್ದೇಸಾಯಿ ಅವರಿಗೆ ಕಾರ್ಯಕ್ರಮದಲ್ಲಿ ಶಶಿ ತರೂರ್‌ ನೀಡಿದ್ದ ಹೇಳಿಕೆಯ ಕ್ಲಿಪ್‌ಗೆ ಕಾರ್ಮನ್ ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

ಇದರ ನಡುವೆ ಕಾಂಗ್ರೆಸ್‌ ಪಕ್ಷ ಕೂಡ ಪ್ಯಾಲೆಸ್ತೇನ್‌ ಪರ ನಿಲುವು ತೆಗೆದುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರ ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧದಲ್ಲಿ ನೇರವಾಗಿ ಇಸ್ರೇಲ್‌ಗೆ ಬೆಂಬಲ ನೀಡಿದೆ. ಆದರೆ, ದೇಶದಲ್ಲಿ ಮುಸ್ಲಿಂ ಮತಗಳ ಓಲೈಕೆಯ ದೃಷ್ಟಿಯಿಂದ ಕಾಂಗ್ರೆಸ್‌ ಈಗಲು ಹಮಾಸ್‌ನ ಕೃತ್ಯವನ್ನು ಖಂಡಿಸದೆ ಪ್ಯಾಲೇಸ್ತೇನ್‌ ಪರ ನಿಂತಿದ್ದೇಕೆ ಎನ್ನುವ ಚರ್ಚೆಗಳು ಆರಂಭವಾಗಿದೆ.

ದೇಶದಲ್ಲಿ ಹಿಂದುಗಳ ಓಲೈಕೆ ಮಾಡೋದು ಇನ್ನು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಕಾಂಗ್ರೆಸ್‌ ಪಕ್ಷ, ತನ್ನಲ್ಲಿರುವ ಕೆಲವೊಂದು ಹಿಂದೂಗಳ ಖಚಿತ ಮತಗಳೊಂದಿಗೆ ಸಂಪೂರ್ಣವಾಗಿ ಮುಸ್ಲಿಂ ಓಲೈಕೆ ನೀತಿಗೆ ಮುಂದಾಗಿದೆ. ಅದೇ ಕಾರಣಕ್ಕೆ ಕಳೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮುಸ್ಲಿಂ ಮತಗಳು ಬಂದಿದ್ದವು. ಸಂಪೂರ್ಣವಾಗಿ ಮುಸ್ಲಿಂ ಮತಗಳನ್ನು ತನ್ನಲ್ಲಿಯೇ ಹಿಡಿದುಕೊಳ್ಳುವ ವೋಟ್‌ಬ್ಯಾಂಕ್‌ ಲೆಕ್ಕಾಚಾರದಲ್ಲಿ ಸಂಪೂರ್ಣವಾಗಿ ಅವರ ಪರವಾಗಿಯೇ ನಿಂತುಕೊಂಡಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದಲ್ಲೂ ಇತ್ತೀಚಿನ ಕೆಲ ಘಟನೆಗಳು ಸಾಕ್ಷಿಯಾಗಿದೆ.

'ಏಳು ತಿಂಗಳ ಯುದ್ಧ..' ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆ ನಿಜವಾದ ನಾಸ್ಟ್ರಾಡಾಮಸ್‌ ಭವಿಷ್ಯ!

ಇಸ್ರೇಲ್ ಜನರ ಮೇಲಿನ ಕ್ರೂರ ದಾಳಿಯನ್ನು ಕಾಂಗ್ರೆಸ್ ಭಾನುವಾರ ಖಂಡಿಸಿದೆ ಮತ್ತು ಪ್ಯಾಲೆಸ್ತೀನ್ ಜನರ ನ್ಯಾಯಸಮ್ಮತ ಆಕಾಂಕ್ಷೆಗಳನ್ನು ಸಂವಾದಗಳ ಮೂಲಕ ಈಡೇರಿಸಬೇಕು ಎಂದು ಪಕ್ಷ ಯಾವಾಗಲೂ ನಂಬುತ್ತದೆ ಎಂದು ಹೇಳಿದೆ. ಒಂದು ದಿನದ ನಂತರ, ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿತು ಮತ್ತು ಪ್ಯಾಲೇಸ್ಟಿನಿಯನ್ ಜನರಿಗೆ ಭೂಮಿ, ಸ್ವ-ಸರ್ಕಾರ ಮತ್ತು ಘನತೆ ಮತ್ತು ಗೌರವದಿಂದ ಬದುಕುವ ಹಕ್ಕುಗಳನ್ನು ಯಾವಾಗಲೂ ಬೆಂಬಲಿಸುತ್ತದೆ ಎಂದು ಹೇಳಿದೆ.

40 ಪುಟ್ಟ ಮಕ್ಕಳ ಶಿರಚ್ಛೇದ ಮಾಡಿದ ಹಮಾಸ್‌ ಉಗ್ರರು, ಶವ ಕಂಡು ಕಣ್ಣೀರಿಟ್ಟ ಇಸ್ರೇಲ್‌ ಯೋಧರು!

Seriously, ,can you not?After decades of terror against my people,challenging the very Palestinian Authority,especially after this week’s savage slaughter of over a thousand peaceful human beings,can you not label Hamas as terrorists?Frankly,I am shocked. https://t.co/G1crdOtRsz

— 🇮🇱Daniel Carmon🇮🇱 (@danielocarmon)
click me!