ಒಡಿಶಾ ರೈಲು ದುರಂತ ಮಾಸುವ ಮುನ್ನವೇ ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್ ಅಪಘಾತ: ನಾಲ್ವರು ಸಾವು

Published : Oct 11, 2023, 11:51 PM ISTUpdated : Oct 12, 2023, 11:40 AM IST
ಒಡಿಶಾ ರೈಲು ದುರಂತ ಮಾಸುವ ಮುನ್ನವೇ ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್ ಅಪಘಾತ: ನಾಲ್ವರು ಸಾವು

ಸಾರಾಂಶ

ಒಡಿಶಾದ ಬಾಲಾಸೋರ್ ರೈಲು ದುರಂತ ನೋವು ಇನ್ನು ಮಾಸಿಲ್ಲ. ಇದೀಗ ಬಿಹಾರದಲ್ಲಿ ಈಶಾನ್ಯ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದಾರೆ. 3 ಬೋಗಿಗಳು ಹಳಿ ತಪ್ಪಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. 

ಪಾಟ್ನಾ(ಅ.11) ಭಾರತೀಯ ರೈಲು ಇತಿಹಾಸದಲ್ಲಿ ನಡೆದ ಅತ್ಯಂತ ಘನಘೋರ ಒಡಿಶಾ ರೈಲು ದುರಂತ ನಡೆದ ನಾಲ್ಕೇ ತಿಂಗಳಿಗೆ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಬಿಹಾರದ ರಘುನಾಥ್ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಈ ದುರಂತದಲ್ಲಿ ನಾಲ್ವರು ಸಾವನ್ನಪ್ಪಿ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದೆಹಲಿಯ ಆನಂದ್ ವಿಹಾರ್‌ನಿಂದ ಹೊರಟ ರೈಲು ರುಘನಾಥ್ ರೈಲು ನಿಲ್ದಾಣದ ಬಳಿಕ ಹಳಿ ತಪ್ಪಿದೆ. ಮೂರು ಬೋಗಿಗಳು ಸಂಪೂರ್ಣವಾಗಿ ಪಲ್ಟಿಯಾಗಿ ಕೆಲ ದೂರ ಎಳೆದೊಯ್ದಿದೆ. ಸ್ಥಳೀಯರು, ಪೊಲೀಸರು, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. 

ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಿಂದ ಅಸ್ಸಾಂನ ಕಾಮಾಕ್ಯ ರೈಲು ನಿಲ್ದಾಣಕ್ಕೆ ಹೊರಟ ಈ ರೈಲು ಅಪಘಾತಕ್ಕೀಡಾಗಿದೆ. ವೈದ್ಯಕೀಯ ತಂಡ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ನೆರವಿನಿಂದ ಬೋಗಿಯೊಳಗೆ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. 

ರೈಲು ಇಲಾಖೆ ಸಹಾಯವಾಣಿ ತೆರೆದಿದೆ.
ಪಾಟ್ನ ಜಂಕ್ಷನ್: 9771449971
ದಾನಾಪುರ್: 8905697493
ಅರಾ: 8306182542

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್