ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರಿ ಯಶಸ್ಸುಗಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ವಂದೇ ಭಾರತ್ ಸ್ಲೀಪರ್, ವಂದೇ ಮೆಟ್ರೋ ರೈಲುಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಅತ್ಯಾಧುನಿಕ ಸೌಲಭ್ಯ ಒಳಗೊಂಡ, ಆದರೆ ಟಿಕೆಟ್ ದರ ಕಡಿಮೆ ಇರುವ ವಂದೇ ಸಾಧಾರಣ್ ಎಂಬ ರೈಲು ಪರಿಚಯಿಸಲು ಮುಂದಾಗಿದೆ.
ಚೆನ್ನೈ: ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರಿ ಯಶಸ್ಸುಗಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ವಂದೇ ಭಾರತ್ ಸ್ಲೀಪರ್, ವಂದೇ ಮೆಟ್ರೋ ರೈಲುಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಅತ್ಯಾಧುನಿಕ ಸೌಲಭ್ಯ ಒಳಗೊಂಡ, ಆದರೆ ಟಿಕೆಟ್ ದರ ಕಡಿಮೆ ಇರುವ ವಂದೇ ಸಾಧಾರಣ್ ಎಂಬ ರೈಲು ಪರಿಚಯಿಸಲು ಮುಂದಾಗಿದೆ.
ಈಗಾಗಲೇ ರೈಲಿನ ಮಾದರಿ ಸಿದ್ದವಾಗುತ್ತಿದ್ದು, ಅದರ ಫೋಟೋಗಳು ಲೀಕ್ ಆಗಿವೆ. ಈ ರೈಲುಗಳು ಸಾಮಾನ್ಯ ಜನರ ಆರ್ಥಿಕ ಮಟ್ಟಕ್ಕೆ ಅನುಕೂಲವಾಗಿರಲಿದೆ. ಈ ರೈಲಿನಲ್ಲಿ 24 ಬೋಗಿಗಳು ಇರಲಿದ್ದು, ರೈಲಿನ ಕ್ಷಿಪ್ರ ಸಂಚಾರಕ್ಕೆ ಎರಡೂ ಬದಿ ಎಂಜಿನ್ ಇರಲಿದೆ. ಇದನ್ನು ಹೊರತಾಗಿ, ಪ್ರತಿ ಆಸನದಲ್ಲೂ ಚಾರ್ಜಿಂಗ್ ಸ್ಲಾಟ್ (Charging slat), ಸಿಸಿಟೀವಿ ಕ್ಯಾಮರಾ (CCTV camera), ಪ್ರಯಾಣಿಕರಿಗೆ ಮಾಹಿತಿ ಟೀವಿ, ಬಯೋ ಟಾಯ್ಲಟ್ (Bio Toilet)ಇದರಲಿದೆ. ಇವೆಲ್ಲಕ್ಕಿಂತ ವಿಶೇಷವೆಂದರೆ ಇದರಲ್ಲೂ ವಂದೇ ಭಾರತ್ ರೀತಿ ಸ್ವಯಂಚಾಲಿತ ಬಾಗಿಲುಗಳು ಇರಲಿದೆ.
ಖಲಿಸ್ತಾನ್ ಉಗ್ರ ಲಖ್ಬೀರ್ ಆಸ್ತಿ ಮುಟ್ಟುಗೋಲಿಗೆ ಎನ್‌ಐಎ ಕೋರ್ಟ್ ಆದೇಶ
ನವದೆಹಲಿ: ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಖಲಿಸ್ತಾನ್ ವಿಮೋಚನಾ ಸೇನೆಯ ಸ್ವಯಂ ಘೋಷಿತ ಮುಖ್ಯಸ್ಥ, ಅಮೃತಸರ ಹತ್ಯಾಕಾಂಡದ ರೂವಾರಿ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯ ಸೊದರಳಿಯ, ಲಖ್ಬೀರ್ ಸಿಂಗ್ ಸೇರಿದ ಆಸ್ತಿಯನ್ನು ಯುಎಪಿಎ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಎನ್‌ಐಎ ಕೋರ್ಟ್ ಆದೇಶಿಸಿದೆ. ಪಂಜಾಬ್ ಪ್ರಾಂತ್ಯದ ಗುರುಪುರ ಗ್ರಾಮದಲ್ಲಿ ಹೊಂದಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ,