ಪುಲ್ವಾಮ ಮಾದರಿಯಲ್ಲಿ ಮತ್ತೊಂದು ದಾಳಿ ಸಂಚು: ಹೈವೇ ಪಕ್ಕದಲ್ಲಿ 52 ಕೆಜಿ ಸ್ಫೋಟಕ

By Suvarna NewsFirst Published Sep 18, 2020, 12:43 PM IST
Highlights

ದಕ್ಷಿಣ ಕಾಶ್ಮೀರದ ಆವಂತಿಪುರದಲ್ಲಿ ಭದ್ರತಾ ಪಡೆಗಳು ಪುಲ್ವಾಮ ಮಾದರಿಯಂತಹ ದಾಳಿಗೆ ನಡೆಸಲಾಗಿದ್ದ ಸಂಚನ್ನು ವಿಫಲಗೊಳಿಸಿವೆ.

ಶ್ರೀನಗರ(ಸೆ.18): 40 CRPF ಯೋಧರು ಹತಾತ್ಮರಾದ ಪುಲ್ವಾಮ ದಾಳಿಯಂತಹ ಮತ್ತೊಂದು ದಾಳಿಗೆ ಸಂಚು ನಡೆದಿದೆ. ಹೈವೇ ಪಕ್ಕದಲ್ಲಿ52 ಕೆಜಿ ಸ್ಫೋಟಕ ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ.

ದಕ್ಷಿಣ ಕಾಶ್ಮೀರದ ಆವಂತಿಪುರದಲ್ಲಿ ಭದ್ರತಾ ಪಡೆಗಳು ಪುಲ್ವಾಮ ಮಾದರಿಯಂತಹ ದಾಳಿಗೆ ನಡೆಸಲಾಗಿದ್ದ ಸಂಚನ್ನು ವಿಫಲಗೊಳಿಸಿವೆ. ಹೈವೇ ಪಕ್ಕದಲ್ಲಿ ಮಣ್ಣಿನಡಿಯಲ್ಲಿ ಹುದುಗಿಡಲಾಗಿದ್ದ ಸುಮಾರು 52 ಕೆಜಿ ಗೆಲಾಟಿನ್ ಸ್ಟಿಕ್ಸ್ ಮತ್ತು ಸ್ಫೋಟಕಗಳನ್ನು ಭದ್ರತಾ ಪಡೆಗಳು ಪತ್ತೆ ಮಾಡಿವೆ.

ಪುಲ್ವಾಮ ದಾಳಿಕೋರಗೆ ಆಶ್ರಯ ಕೊಟ್ಟಿದ್ದವ ಅರೆಸ್ಟ್‌

ಪುಲ್ವಾಮ ಜಿಲ್ಲೆಯ ಆವಂತಿಪುರದ ಗಡಿಖಲ್ ಅರಣ್ಯ ಪ್ರದೇಶಗಳಲ್ಲಿ ಅಡಗಿಕೊಂಡಿದ್ದ ಜೈಷ್-ಇ-ಮಹಮ್ಮದ್ ಉಗ್ರರನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. 250 ಲೀಟರ್ ಪ್ಲಾಸ್ಟಿಕ್ ನೀರಿನ ಟ್ಯಾಂಕ್‌ಗಳಲ್ಲಿ ಸ್ಫೋಟಕ ಮರೆ ಮಾಚಲಾಗಿತ್ತು.

ಪುಲ್ವಾಮಾ ದಾಳಿ ನಡೆದ ಸ್ಥಳದಿಂದ ಕೇವಲ 9 ಕಿ.ಮೀ ದೂರದ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾಗ ಈ ಸ್ಫೋಟಕ ಪದಾರ್ಥಗಳು ಪತ್ತೆಯಾಗಿವೆ. ಒಂದು ಟ್ಯಾಂಕ್‌ನಲ್ಲಿ ತೀವ್ರ ಪ್ರಭಾವದ 416 ಗೆಲಟಿನ್ ಸ್ಟಿಕ್‌ಗಳಿದ್ದವು.

ಮತ್ತೆ ಪುಲ್ವಾಮ ರೀತಿ ದಾಳಿ: ಭಾರತಕ್ಕೆ ಪಾಕ್ ಬೆದರಿಕೆ!

ಇನ್ನೊಂದರಲ್ಲಿ 50 ಅಸ್ಫೋಟಕಗಳಿದ್ದವು. ಅವುಗಳನ್ನು ದೂರ ಸಾಗಿಸುವುದು ಅಪಾಯ ಎಂದು ಅರಿತ ನಂತರ ಸ್ಫೋಟಕಗಳನ್ನು ಬಾಂಬ್ ನಿಷ್ಕ್ರಿಯ ತಂಡ ಸ್ಥಳದಲ್ಲೇ ನಿಷ್ಕ್ರಿಯಗೊಳಿಸಿದೆ. ಹೊಸದಾಗಿ ಗುಂಡಿ ತೋಡಿ ಸ್ಫೋಟಕ ತುಂಬಿಸಲಾಗಿರುವುದು ತಿಳಿದು ಬಂದಿದೆ ಎಂದು ಸಿಆರ್‌ಪಿಎಫ್ ಹಾಗೂ ರಾಷ್ಟ್ರೀಯ ರೈಫಲ್ಸ್ ತಂಡ ತಿಳಿಸಿದೆ

ಪುಲ್ವಾಮಾ ಹೆದ್ದಾರಿಯಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬೆಂಗಾವಲು ವಾಹನಕ್ಕೆ ಸ್ಫೋಟಕ ತುಂಬಿದ ಕಾರ್‌ವೊಂದನ್ನು ಗುದ್ದಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾಗಿದ್ದರು

click me!