ಕೊರೋನಾ ಸೋಂಕು, ಸಾವು: ಸೆಪ್ಟೆಂಬ​ರ್‌ನ ಮೊದಲ 15 ದಿನ​ದಲ್ಲಿ ಭಾರತ ನಂ.1

By Kannadaprabha News  |  First Published Sep 18, 2020, 11:50 AM IST

- ಅಮೆ​ರಿ​ಕ, ಬ್ರೆಜಿಲ್‌ ಹಿಂದಿ​ಕ್ಕಿದ ಭಾರ​ತ ಕೊರೋನಾ ಸೋಂಕು, ಸಾವಿನಲ್ಲಿ ನಂ1. 
- ಸಾವಿನ ದರಕ್ಕೆ ಹೋಲಿ​ಸಿ​ದಾಗ ಭಾರತ 8ನೇ ಸ್ಥಾನ​ದ​ಲ್ಲಿದ್ದು, 1.25ರ ದರ​ದಲ್ಲಿ ವಿಶ್ವ​ದಲ್ಲಿ 8ನೇ ಸ್ಥಾನ​ದ​ಲ್ಲಿದೆ. 


ನವ​ದೆ​ಹ​ಲಿ (ಸೆ.18): ಭಾರ​ತವು ಇತ್ತೀ​ಚೆಗೆ ಬ್ರೆಜಿಲ್‌ ದೇಶ​ವನ್ನು ಹಿಂದಿಕ್ಕಿ ಕೊರೋನಾ ಕೇಸು​ಗ​ಳಲ್ಲಿ ವಿಶ್ವ​ದಲ್ಲೇ 2ನೇ ಸ್ಥಾನ ಸಂಪಾ​ದಿ​ಸಿತ್ತು. ಇದರ ಬೆನ್ನಲ್ಲೇ ಸೆಪ್ಟೆಂಬ​ರ್‌ನ ಮೊದಲ 15 ದಿನದ ಅವ​ಧಿ​ಯ​ಲ್ಲಿ ಕೊರೋನಾ ಕೇಸು ಹಾಗೂ ಸಾವಿನ ಪ್ರಕ​ರ​ಣ​ಗಳಲ್ಲಿ ಭಾರತ, ವಿಶ್ವ​ದಲ್ಲೇ ಮೊದಲ ಸ್ಥಾನ ಗಳಿ​ಸಿ​ದೆ.

ಸೆ.1ರಿಂದ 15ರ ಅವ​ಧಿ​ಯಲ್ಲಿ ಭಾರ​ತ​ದಲ್ಲಿ 13,08,991 ಕೊರೋನಾ ಪ್ರಕ​ರ​ಣ​ಗಳು ವರದಿ ಆಗಿವೆ. ವಿಶ್ವ​ದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿ​ತ​ರನ್ನು ಹೊಂದಿ​ರುವ ಅಮೆ​ರಿ​ಕ​ದಲ್ಲಿ 5,57,657 ಕೇಸು ಹಾಗೂ ಬ್ರೆಜಿ​ಲ್‌​ನಲ್ಲಿ 4,83,299 ಪ್ರಕ​ರ​ಣ​ಗಳು ದೃಢ​ಪ​ಟ್ಟಿ​ವೆ.

Latest Videos

undefined

ಇನ್ನು ಸಾವನ್ನು ಗಮ​ನಿ​ಸಿ​ದಾಗ ಭಾರ​ತ​ದಲ್ಲಿ ಈ 15 ದಿನ​ದಲ್ಲಿ 16,307 ಮಂದಿ ಕೊರೋ​ನಾಗೆ ಬಲಿ​ಯಾ​ಗಿ​ದ್ದಾರೆ. ಅಮೆ​ರಿ​ಕ​ದಲ್ಲಿ 11,461 ಹಾಗೂ ಬ್ರೆಜಿ​ಲ್‌​ನಲ್ಲಿ 11,178 ಸೋಂಕಿ​ತರು ಸಾವನ್ನಪ್ಪಿದ್ದಾ​ರೆ.ಆದರೆ ಸಾವಿನ ದರಕ್ಕೆ ಹೋಲಿ​ಸಿ​ದಾಗ ಭಾರತ 8ನೇ ಸ್ಥಾನ​ದ​ಲ್ಲಿದ್ದು, 1.25ರ ದರ​ದಲ್ಲಿ ವಿಶ್ವ​ದಲ್ಲಿ 8ನೇ ಸ್ಥಾನ​ದ​ಲ್ಲಿದೆ. ಮೆಕ್ಸಿಕೋ, ಕೊಲಂಬಿಯಾ ಹಾಗೂ ಪೆರು- ಸಾವಿನ ದರ​ದಲ್ಲಿ ಟಾಪ್‌-3 ಸ್ಥಾನ ಪಡೆ​ದಿ​ವೆ.

ಕರ್ನಾಟಕದಲ್ಲಿ ಭಾರೀ ಏರಿಕೆ ಕಂಡ ಕೊರೋನಾ: ನಿಜವಾಯ್ತು ಭವಿಷ್ಯ

ಕರ್ನಾಟಕದಲ್ಲಿ ಗುರುವಾರ 9,366 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 4.94 ಲಕ್ಷಕ್ಕೆ ಏರಿಕೆಯಾಗಿದೆ. ಬಹುತೇಕ ಶುಕ್ರವಾರ ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ ದಾಖಲೆಯ 3,799 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಬಳ್ಳಾರಿ 677, ಮೈಸೂರು 591, ತುಮಕೂರು 381, ದಕ್ಷಿಣ ಕನ್ನಡ 308, ಬೆಳಗಾವಿ 295, ದಾವಣಗೆರೆ 257, ಧಾರವಾಡ 247, ಬಾಗಲಕೋಟೆ 234, ರಾಯಚೂರು 227, ಶಿವಮೊಗ್ಗ 218, ಹಾಸನ 206, ಹಾವೇರಿ 188, ಕೊಪ್ಪಳ 180, ಕಲಬುರಗಿ 175, ಚಿತ್ರದುರ್ಗ 152, ಉತ್ತರ ಕನ್ನಡ 127, ಉಡುಪಿ 120, ಕೋಲಾರ 115, ಚಿಕ್ಕಮಗಳೂರು 112, ಚಾಮರಾಜನಗರ 108, ವಿಜಯಪುರ 107, ಚಿಕ್ಕಬಳ್ಳಾಪುರ 102, ಮಂಡ್ಯ 86, ಬೀದರ್‌ 80, ಗದಗ 69, ಬೆಂಗಳೂರು ಗ್ರಾಮಾಂತರ 66, ಯಾದಗಿರಿ 50, ಕೊಡಗು 47, ರಾಮನಗರ ಜಿಲ್ಲೆಯಲ್ಲಿ 42 ಹೊಸ ಪ್ರಕರಣ ವರದಿಯಾಗಿದೆ.



ದೆಹಲಿಯ 66 ಲಕ್ಷ ಜನರಿಗೆ ಸೋಂಕು!
ದೆಹಲಿಯ ಶೇ.33ರಷ್ಟುಜನರಲ್ಲಿ ಕರೋನಾ ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿದೆ ಎಂಬ ಸಂಗತಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಸಲಾದ ಸೆರೋಲಾಜಿಕಲ್‌ ಸಮೀಕ್ಷೆಯಿಂದ ತಿಳಿದುಬಂದಿದೆ. 17,000 ರಕ್ತದ ಮಾದರಿಗಳ ಪ್ರಾಥಮಿಕ ವಿಶ್ಲೇಷಣೆಯ ಬಳಿಕ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಅಂದರೆ ಸಮೀಕ್ಷೆಯ ಪ್ರಕಾರ ದೆಹಲಿಯ 2 ಕೋಟಿ ಜನರ ಪೈಕಿ 66 ಲಕ್ಷ ಮಂದಿ ಕೊರೋನಾ ವೈರಸ್‌ಗೆ ತುತ್ತಾಗಿದ್ದು, ಅದರಿಂದ ಚೇತರಿಸಿಕೊಂಡಿದ್ದಾರೆ. ಗಸ್ಟ್‌ ಮೊದಲ ವಾರದಲ್ಲಿ ನಡೆಸಿದ ಈ ಹಿಂದಿನ ಸೆರೋ ಸಮೀಕ್ಷೆಯ ವೇಳೆ ಶೇ. 29.1ರಷ್ಟುಜನರಲ್ಲಿ ಪ್ರತಿಕಾಯ ಶಕ್ತಿ ಉತ್ಪತ್ತಿ ಆಗಿರುವುದು ಕಂಡುಬಂದಿತ್ತು. ಇದೇ ವೇಳೆ ಪ್ರತಿಕಾಯ ಶಕ್ತಿ ಉತ್ಪತ್ತಿ ಆದ ಮಾತ್ರಕ್ಕೆ ಅದು ಕೊರೋನಾದಿಂದ ದೀರ್ಘಾವಧಿ ರಕ್ಷಣೆ ನೀಡಲಿದೆ ಎಂದು ಹೇಳಲಾಗದು. ಒಂದು ವೇಳೆ ಪ್ರತಿಕಾಯ ಶಕ್ತಿ ಕ್ಷೀಣಿಸಿದರೆ ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹತ್ತೆ ದಿನದಲ್ಲಿ 33 ಸಾವಿರ ಮಂದಿಗೆ ಕೊರೋನಾ: ಬೆಚ್ಚಿಬಿದ್ದ ಬೆಂಗಳೂರು

ನಿನ್ನೆ 98190 ಕೇಸು 1176 ಜನರ ಸಾವು
ನವದೆಹಲಿ: ಗುರುವಾರ ದೇಶಾದ್ಯಂತ 98190 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಪ್ರಮಾಣ 52.02 ಲಕ್ಷಕ್ಕೆ ತಲುಪಿದೆ. ಮತ್ತೊಂದೆಡೆ ನಿನ್ನೆ 1176 ಜನರು ಸಾವನ್ನಪ್ಪಿದ್ದು, ಈ ಮೂಲದ ಸೋಂಕು ಇದುವರೆಗೆ 84297 ಜನರನ್ನು ಬಲಿಪಡೆದಂತೆ ಆಗಿದೆ. ಇನ್ನು ಇದುವರೆಗೆ 40.95 ಲಕ್ಷ ಸೋಂಕಿತರು ಗುಣಮುಖರಾಗಿ ಹೊರಹೊಮ್ಮಿದ್ದಾರೆ.

3 ಕೋಟಿ ದಾಟಿದ ಸೋಂಕಿತರು
ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗುರುವಾರ 3 ಕೋಟಿ ದಾಟಿದೆ. ಜೊತೆಗೆ ಸಾವಿನ ಸಂಖ್ಯೆಯೂ 10 ಲಕ್ಷದ ಸಮೀಪಕ್ಕೆ ಆಗಮಿಸಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಅಮೆರಿಕ, ಭಾರತ, ಬ್ರೆಜಿಲ್‌ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.

click me!