
ತನ್ನ ಖಾಸಗಿ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಸ್ವಿಮ್ ಸೂಟ್ ಫೋಟೋಗಳನ್ನು ಹಾಕಿದ್ದಕ್ಕೆ "ಆಕ್ಷೇಪಾರ್ಹ ಪೋಸ್ಟ್‌ಗಳು" ಎಂದು ವರ್ಗೀಕರಿಸಿ ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ವಿಶ್ವವಿದ್ಯಾಲಯ ತನಗೆ ರಾಜೀನಾಮೆ ನಿಡುವಂತೆ ಕೇಳಲಾಯಿತು ಎಂದು ಮಾಜಿ ಸಹಾಯಕ ಪ್ರಾಧ್ಯಾಪಕಿ ಆರೋಪಿಸಿದ್ದಾರೆ. "ಆಕ್ಷೇಪಾರ್ಹ" ಎಂದು ಹೇಳಲಾದ ಫೋಟೋಗಳು ಬಿಕಿನಿ, ಶಾರ್ಟ್ಸ್ ಮತ್ತು ಜಿಮ್ ಬಟ್ಟೆಗಳಲ್ಲಿ ಮಾಜಿ ಪ್ರಾಧ್ಯಾಪಕಿಯ ಫೋಟೋಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.
ಅವುಗಳನ್ನು "ಇನ್‌ಸ್ಟಾಗ್ರಾಮ್ ಸ್ಟೋರೀಸ್" ಆಗಿ ಕೇವಲ ಸ್ನೇಹಿತರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳಲಾಗಿತ್ತು. ಸಾಮಾಜಿಕ ಮಾಧ್ಯಮ ವೈಶಿಷ್ಟ್ಯವು ಬಳಕೆದಾರರಿಗೆ 24 ಗಂಟೆಗಳ ನಂತರ ಕಣ್ಮರೆಯಾಗುವ ಪೋಸ್ಟ್‌ಗಳನ್ನು ಮಾಡಲು ಮತ್ತು ಪ್ರೇಕ್ಷಕರನ್ನು ನಿರ್ಬಂಧಿಸಲು ಅನುಮತಿಸುತ್ತದೆ ಎಂದು ಶಿಕ್ಷಕಿ ಹೇಳಿಕೊಂಡಿದ್ದಾರೆ. ಇನ್ನು, ಈ ಘಟನೆ ನಡೆದು ಹಲವು ತಿಂಗಳುಗಳು ಕಲೆದರೂ ನಾನಿನ್ನೂ ಭಯದಲ್ಲೇ ಬದುಕುತ್ತಿದ್ದೇನೆ ಎಂದೂ ಮಾಜಿ ಸಹಾಯಕ ಪ್ರಾಧ್ಯಾಪಕಿ ಹೇಳಿಕೊಂಡಿದ್ದಾರೆ. ಅಲ್ಲದೆ, ಸದ್ಯ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲದ ಆಕೆಗೆ ಕೆಲ ತಿಂಗಳುಗಳಿಂದ ಯಾವುದೇ ಕೆಲಸವಿಲ್ಲದೆ ಮನೆಯಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ.
ಪಿಂಕ್ ಬಿಕಿನಿಯಲ್ಲಿ ಮಿಂಚಿದ ಶಿವಲಿಂಗ ಬ್ಯೂಟಿ; ವೇದಿಕಾ ಹಾಟ್ ಲುಕ್ ವೈರಲ್
ಈ ಘಟನೆ ತನ್ನ ಇಡೀ ಕುಟುಂಬದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿಕೊಂಡ ಮಹಿಳೆ, ಈ ಹಿನ್ನೆಲೆ ವಿಶ್ವವಿದ್ಯಾಲಯದ ವಿರುದ್ಧ ರೂ. 99 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಶಿಕ್ಷಕಿಯ ಅಸಭ್ಯ ಫೋಟೋಗಳನ್ನು ತನ್ನ ಪುತ್ರ ನೋಡುತ್ತಿದ್ದ ಎಂದು ತಂದೆ ದೂರು ನೀಡಿದ ಬಳಿಕ ವಿವಿ ತನ್ನನ್ನು ಕೆಲಸ ಬಿಡುವಂತೆ ಒತ್ತಾಯಿಸಿತು ಎಂದು ಮಹಿಳೆ ತಿಳಿಸಿದ್ದಾರೆ. ಇನ್ನು, ಆ ಫೊಟೋಗಳನ್ನು ಸ್ಟೋರೀಸ್ ಅನ್ನಾಗಿ ಅಪ್ಲೋಡ್ ಮಾಡಿದ್ದೆ. ಅದು 24 ಗಂಟೆಗಳ ಬಳಿಕ ಮಾಯವಾಗುತ್ತದೆ. ಆದರೆ, ಆ ಫೋಟೋಗಳು ಹೇಗೆ ಈಕ್ ಆದವು ಎಂದು ನನಗೆ ಗೊತ್ತಿಲ್ಲ. ಯಾರೋ ಸ್ಕ್ರೀನ್‌ಶಾಟ್ ತೆಗೆದುಕೊಂಡು ಆ ಫೋಟೋಗಳನ್ನು ವೈರಲ್ ಮಾಡಿರಬೇಕು ಎಂದು ಶಿಕ್ಷಕಿ ಆರೋಪಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ನಾನು ವಿಶ್ವವಿದ್ಯಾಲಯಕ್ಕೆ ತಿಳಿಸಿದರೂ, ಅವರು ನನ್ನನ್ನು ನಂಬಲಿಲ್ಲ. ಹಾಗೂ, ನಾನು ಪ್ರೊಫೆಸರ್ ಆಗಿ ವಿವಿ ಸೇರುವ ಮೊದಲೇ ಆ ಫೋಟೋಗಳನ್ನು ಹಾಕಿದ್ದೆ . ಆ ವಿದ್ಯಾರ್ಥಿಗೆ ಫೋಟೋ ಹೇಗೆ ಸಿಕ್ಕಿತು ಎಂಬ ಬಗ್ಗೆ ಅವರು ಪ್ತತೆ ಹಚ್ಚಬೇಕಿತ್ತು. ಆದರೆ, ನನ್ನ ವಿರುದ್ಧವೇ ಕ್ರಮ ಕೈಗೊಂಡಿತು’’ ಎಂದು ಮಾಜಿ ಪ್ರೊಫೆಸರ್ ಹೇಳಿಕೊಂಡಿದ್ದಾರೆ.
ಕಾರ್ ಮೇಲೆ ನಿಂತು ಪೋಸ್ ಕೊಡ್ಬೇಕಾ; ಪಾಪರಾಜಿಗಳಿಗೆ ತರಾಟೆ ತೆಗೆದುಕೊಂಡ ಉರ್ಫಿ
ಅಕ್ಟೋಬರ್ 2021 ರಂದು ನನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಆದರೆ, ತನ್ನ ಹೆಸರನ್ನು ಬಹಿರಂಗಪಡಿಸದಿರಲು ಮಹಿಲೆ ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ. ವಿವಿಗೆ ನಾನು ಆಗಸ್ಟ್ ತಿಂಗಳಲ್ಲಿ ಸೇರಿದ್ದೆ. ಸ್ವಿಮ್‌ಸೂಟ್‌ನಲ್ಲಿರುವ ಫೊಟೋಗಳನ್ನು ಅದಕ್ಕೂ ಮುನ್ನವೇ ಅಪ್ಲೋಡ್ ಮಾಡಿದ್ದೆ. ಅದು ಕಾನೂನು ಪ್ರಕಾರ ತಪ್ಪಲ್ಲ ಎಂದೂ ಮಹಿಳೆ ತಿಳಿಸಿದ್ದಾರೆ.
ಪೋಷಕರಿಂದ ದೂರು ಬಂದ ಬಳಿಕ ವಿಶ್ವವಿದ್ಯಾಲಯ ಸಮಿತಿಯನ್ನು ನೇಮಕ ಮಾಡಿತು ಮತ್ತು ಈ ವಿಚಾರದ ತನಿಖೆ ನಡೆಸಿತು. ಆ ಸಮಿತಿ ಎದುರು ನಾನು ಹಾಜರಾಗುವಂತೆ ನನಗೆ ತಿಳಿಸಲಾಗಿತ್ತು. ಅವರು ನನ್ನ ಫೋಟೋಗಳನ್ನು ತೋರಿಸಿದರು, ಅವರು ನನ್ನ ಪರ್ಮಿಷನ್ ಇಲ್ಲದರೆ ಅದರ ಪ್ರಿಂಟ್‌ಔಟ್‌ಗಳನ್ನು ತೆಗೆದುಕೊಂಡಿದ್ದರು. ಅಲ್ಲದೆ, ಈ ಫೊಟೋಗಳು ನಿಮ್ಮದೇ ಹಾಗೂ ಇಂತಹ ಫೋಟೋಗಳು ವಿದ್ಯಾರ್ಥಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ನನಗೆ ಗೊತ್ತೇ ಎಂದೂ ಆ ಸಮಿತಿಯವರು ಕೇಳಿದರು ಎಂದೂ ಮಹಿಳೆ ಹೇಳಿಕೊಂಡಿದ್ದಾರೆ.
ಹಾಗೂ, ಅಕ್ಟೋಬರ್ 7 ರಂದು ರಾಜೀನಾಮೆ ನೀಡಲು ಸೂಚಿಸಿದರು. ಅಕ್ಟೋಬರ್ 8 ರಂದು ಉಪ ಕುಲಪತಿ ಜತೆಗೆ ಮುಖಾಮುಖಿಯಾಗಿ ಭೇಟಿ ಮಾಡಿದೆ. ಅವರು ಎಫ್‌ಐಆರ್ ಹಾಕುವುದಾಗಿ ಬೆದರಿಕೆ ಹಾಕಿದರು. ಈ ಹಿನ್ನೆಲೆ ನಾನು ರಾಜೀನಾಮೆ ನೀಡಬೇಕಾಯಿತು ಎಂದು ಶಿಕ್ಷಕಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ