ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ  ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ

By Mahmad Rafik  |  First Published Aug 31, 2024, 2:03 PM IST

ಆನ್‌ಲೈನ್ ಆರ್ಡರ್ ಮಾಡಿದ ಆಹಾರ ಸರಿಯಾದ ಸಮಯಕ್ಕೆ ಬರದಿದ್ದರೆ ಕೆಲ ಗ್ರಾಹಕರು ಕೆಂಡಾಮಂಡಲರಾಗುತ್ತಾರೆ. ಈ ಯುವಕ ಸೈಕಲ್ ಮೇಲೆ ಬಂದಿದ್ದರಿಂದ ಆರ್ಡರ್ ತಲುಪಿಸುವಲ್ಲಿ ಕೊಂಚ ಲೇಟ್ ಆಗಿತ್ತು.


ನವದೆಹಲಿ: ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವವನೇ ನಿಜವಾದ ಮನುಷ್ಯ ಎಂಬುವುದು ಖ್ಯಾತ ಕವಿ ಮೈಥಿಲಿ ಶರಣ್‌ ಗುಪ್ತಾ ಅವರ ಮಾತು. ಇಂದು ಮಾನವೀಯತೆ ಮಾಯವಾಗಿದೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದ್ರೆ ಇಂದು ವೈರಲ್ ಆಗುತ್ತಿರೋ  ವಿಡಿಯೋದಲ್ಲಿ ಸೈಕಲ್ ಮೇಲೆ ಬಂದ ಫುಡ್ ಡೆಲಿವರಿ ಬಾಯ್ ಜೊತೆ ಗ್ರಾಹಕನ ನಡೆದುಕೊಂಡಿದ್ದರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಷ್ಟು ಮಾತ್ರ ವಲ್ಲದೇ ಡೆಲಿವರಿ ಬಾಯ್‌  ಮುಗ್ಧತೆ ಕಂಡು ನೆಟ್ಟಿಗರು ಒಂದು ಕ್ಷಣ ಭಾವುಕರಾಗಿದ್ದಾರೆ. ಈ ವಿಡಿಯೋವನ್ನು ಪದೇ ಪದೇ ನೋಡುತ್ತಿರುವ ಕಾರಣ, 1 ಕೋಟಿಗೂ ಅಧಿಕ ವ್ಯೂವ್‌ ಪಡೆದುಕೊಂಡಿದೆ. ನೆಟ್ಟಿಗರು ಸಹ ಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಈ ವಿಡಿಯೋ ನೋಡಿದ ನೆಟ್ಟಿಗರು, ಸಮಾಜದಲ್ಲಿ ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಆದ್ರೆ ಗ್ರಾಹಕ ವಿಡಿಯೋ ಶೇರ್ ಮಾಡುವ ಮುನ್ನ ಡೆಲಿವರಿ ಬಾಯ್ ಮುಖವನ್ನು ಬ್ಲರ್ ಮಾಡಬೇಕಿತ್ತು. ಮುಂದೆ ಈ ವಿಡಿಯೋ ಯುವಕನ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುವ ಸಾಧ್ಯತೆಗಳೂ ಇರುತ್ತವೆ ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಗ್ರಾಹಕ ಮಾಡಿದ ಸಣ್ಣ ಸಹಾಯದಿಂದ ಡೆಲಿವರಿ ಬಾಯ್‌ ಸಂತೋಷದಿಂದ  ಹಿಂದಿರುಗಿದ್ದಾನೆ. 

Latest Videos

undefined

ವೈರಲ್ ವಿಡಿಯೋದಲ್ಲಿ ಏನಿದೆ?
ಡೆಲಿವರಿ ಬಾಯ್  ಪಾರ್ಸೆಲ್ ತೆಗೆದುಕೊಂಡು ಗ್ರಾಹಕನ ಮನೆ ಮುಂದೆ ಬರುತ್ತಾನೆ. ಮೂರನೇ ಫ್ಲೋರ್ ಅಂತ ಹೇಗೆ ಗೊತ್ತಾಯ್ತು? ಆಪ್‌ನಲ್ಲಿ 5 ನಿಮಿಷ ಅಂತ ತೋರಿಸುತ್ತಿದ್ರೂ ಯಾಕೆ ಇಷ್ಟು ಲೇಟ್ ಆಗ್ತಿದೆ ಎಂದು ಕೋಪ ಬಂದಿತ್ತು. ನೀನು ಸೈಕಲ್ ಮೇಲೆ ಬಂದಿರೋದನ್ನು ನಾನು ನೋಡಿದೆ ಎಂದು ಗ್ರಾಹಕ ಹೇಳುತ್ತಾನೆ. ಎಷ್ಟು ದಿನದಿಂದ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವೆ ಎಂದು ಕೇಳುತ್ತಾನೆ. ಗ್ರಾಹಕನ ಪ್ರಶ್ನೆಗೆ ಉತ್ತರಿಸಿದ ಯುವಕ, ಆಪ್‌ನಲ್ಲಿ ಮೂರನೇ ಫ್ಲೋರ್ ಅಂತ ತೋರಿಸಿತು. ಕಳೆದ ಎರಡ್ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ ಎಂದು ಭಯದಿಂದಲೇ ಹೇಳುತ್ತಿರುತ್ತಾನೆ. ಪಾರ್ಸೆಲ್ ತಲುಪಿಸಲು ಲೇಟ್ ಆಗಿದ್ದಕ್ಕೆ ಎಲ್ಲಿ ಆರ್ಡರ್ ಕ್ಯಾನ್ಸಲ್ ಮಾಡ್ತಾರೆ, ಬೈತಾರೆ ಅಂತ ಡೆಲಿವರಿ ಬಾಯ್ ಭಯದಲ್ಲಿರುತ್ತಾನೆ. 

ಪ್ರೈವೇಟ್ ಫೋಟೋ ಲೀಕ್ ಮಾಡ್ತೀನಿ ಎಂದ ಗೆಳೆಯನ ವಿರುದ್ಧ ದೂರು ದಾಖಲಿಸಿದ ಖ್ಯಾತ ಯುಟ್ಯೂಬರ್

ಗ್ರಾಹಕ ಯಾಕೆ ಭಯಪಡ್ತಿದ್ದೀಯಾ? ಕುಡಿಯಲು ನೀರು ಬೇಕಾ ಎಂದು ಸಮಾಧಾನದಿಂದ ಕೇಳುತ್ತಾರೆ. ಯುವಕ ಬೇಡ ಎಂದು ಹೇಳಿ ಪಾರ್ಸೆಲ್ ಕೊಡುತ್ತಾನೆ. ಸೈಕಲ್ ಮೇಲೆ ಬಂದಿರುವ ಕಾರಣ ಡೆಲಿವರಿ ಬಾಯ್‌ಗೆ ಗ್ರಾಹಕ 500 ರೂಪಾಯಿ ಟಿಪ್ ಕೊಡುತ್ತಾರೆ. ಟಿಪ್ ಪಡೆದ ಯುವಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತ ಸಿಕ್ಕಿರೋದು ಎಂದು ಹೇಳುತ್ತಾನೆ. ಆಗ ಗ್ರಾಹಕ ಇವತ್ತಿನ ಕೆಲಸ ಆಯ್ತು ಅಲ್ಲವಾ ಎಂದಾಗ ಡೆಲಿವರಿ ಬಾಯ್ ಇನ್ನೂ ಡ್ಯೂಟಿ ಮಾಡಬೇಕು ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. 

ಪ್ರತೀಕ್ ಎಂಬವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರತೀಕ್ ಸಹ ಓರ್ವ ವ್ಲಾಗರ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರತೀಕ್ ಇನ್‌ಸ್ಟಾಗ್ರಾಂನಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆರು ದಿನಗಳ ಹಿಂದೆ ಈ ವಿಡಿಯೋವನ್ನು ಪ್ರತೀಕ್ ಹಂಚಿಕೊಂಡಿದ್ದಾರೆ. 

ತಾಜ್‌ಮಹಲ್ ಮುಂದೆ ರೀಲ್ಸ್ ಮಾಡಿ, ಭಾರತಕ್ಕೆ ಬರಬೇಡಿ ಅಂತ ಹೇಳಿದ್ಯಾಕೆ ವಿದೇಶಿ ಮಹಿಳೆ?

click me!