ಸೀರೆಯುಟ್ಟ ಜಿಮ್‌ಗೆ ಆಗಮಿಸಿದ ಮಹಿಳೆಯರ ಗುಂಪು, ಜಿಮ್ ಅಭ್ಯಾಸದಲ್ಲಿ ತೊಡಗಿದೆ. ಆದರೆ ಈ ಮಹಿಳೆಯರು ಜಿಮ್ ಅಭ್ಯಾಸ ಮಾಡಲು ಬಂದಿಲ್ಲ, ಮೇನಕೆಯರ ರೀತಿ ಜಿಮ್ ಅಭ್ಯಾಸಕ್ಕೆ ಭಂಗ ತರುತ್ತಿದ್ದಾರೆ ಎಂದು ಕೆಲ ಸಮಸ್ಯೆಗಳನ್ನು ಗುರುತಿಸಿದ್ದಾರೆ.
ಆರೋಗ್ಯ ಕಾಪಾಡಿಕೊಳ್ಳಲು ಬಹುತೇಕರು ಜಿಮ್ ಅಭ್ಯಾಸ ಮಾಡುತ್ತಾರೆ. ಇದರ ನಡುವೆ ಮಹಿಳೆಯರು ಸೀರೆಯುಟ್ಟು ಜಿಮ್ ಅಭ್ಯಾಸ ಮಾಡಿ ಗಮನಸೆಳೆದಿದ್ದಾರೆ. ಸೀರೆಯುಟ್ಟ ಜಿಮ್ ಅಭ್ಯಾಸ ಮಾಡಬಾರದು ಅಥವಾ ಮಾಡಲು ಸಾಧ್ಯವಿಲ್ಲ ಎಂದೇನಿಲ್ಲ. ಆದರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಮಾತ್ರ ಭಾರಿ ಪ್ರತಿಕ್ರಿಯೆ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಮಹಿಳೆಯರ ಗುಂಪು ಸೀರೆಯುಟ್ಟು ಜಿಮ್‌ಗೆ ಆಗಮಿಸಿದೆ. ಬಳಿಕ ಅಭ್ಯಾಸದಲ್ಲಿ ತೊಡಗಿದೆ. ಸಂಸ್ಕಾರಿ ಮಹಿಳೆಯರ ಜಿಮ್ ಅಭ್ಯಾಸವನ್ನು ಹಲವರು ಕೊಂಡಾಡಿದ್ದಾರೆ. ಆದರೆ ಜಿಮ್ ಅಭ್ಯಾಸಕ್ಕೆ ಸೀರೆಯುಟ್ಟು ಆಗಮಿಸುವ ಭರದಲ್ಲಿ ಸಂಸ್ಕಾರಿ ಮಹಿಳೆಯರು ಬ್ಲೌಸ್ ಹಾಕಲು ಮರೆತಿದ್ದಾರೆ. ಇದು ಇತರರ ಜಿಮ್ ಅಭ್ಯಾಸ ಭಂಗ ತರಲು ಮಾಡಿದ ಕೆಲಸ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಸಂಸ್ಕಾರಿ ಮಹಿಳೆಯರ ಜಿಮ್ ಅಭ್ಯಾಸ ಇದೀಗ ಚರ್ಚೆಗೆ ಕಾರಣವಾಗಿದೆ. ಜಿಮ್‌ನಲ್ಲಿ ಸೀರೆಯುಟ್ಟ ಅಭ್ಯಾಸ ಮಾಡುವುದು ಕೊಂಚ ಕಷ್ಟ. ಸೀರೆಯುಟ್ಟು ಜಿಮ್ ಸಲಕರಣೆಗಳನ್ನು ಉಪಯೋಗಿಸುವುದು ಕಷ್ಟ. ಆದರೆ ಎಚ್ಚರ ವಹಿಸಿ ಜಿಮ್ ಅಭ್ಯಾಸ ಅಸಾಧ್ಯ ಎಂದೇನಿಲ್ಲ. ಇಲ್ಲಿ ಮಹಿಳೆಯರು ಸೀರೆಯುಟ್ಟ ಜಿಮ್‌ಗೆ ಅಭ್ಯಾಸಕ್ಕಿಂತ ಹೆಚ್ಚು ವಿಡಿಯೋ ಮಾಡಲು ಆಗಮಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಶೀರ್ಷಾಸನ, ಸರ್ವಾಂಗಾಸನ ಎಲ್ಲಾ ಮುಗೀತು, ಈಕೆ ತೋರಿಸ್ತಾಳೆ ಸ್ನೇಕ್ ಯೋಗಾಸನ!
ಜಿಮ್‌ಗೆ ಬರುವ ಭರದಲ್ಲಿ ಮಹಿಳೆಯರು ಬ್ಲೌಸ್ ಧರಿಸಿಲ್ಲ. ಸಂಸ್ಕಾರಿಯಾಗಿ ಜಿಮ್ ಅಭ್ಯಾಸ ಮಾಡುವುದಾದರೆ ಬ್ಲೌಸ್ ತೊಟ್ಟು ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದರ ನಡುವೆ ಹಲವರು ಮಹಿಳೆಯರ ಸೀರೆಯುಟ್ಟ ಜಿಮ್ ನಡೆಯನ್ನು ಪ್ರಶಂಸಿದ್ದಾರೆ. ಜಿಮ್ ಅಭ್ಯಾಸ ಹೇಗೆ ಮಾಡಿದರೇನು? ಮಹಿಳೆಯರು ಪ್ರಚಾರಕ್ಕೆ ಮಾಡಿದ್ದರು ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
कितनी संस्कारी महिला है, जिम मे भी साडी पहन के गई है...
लेकिन जल्दबाजी मे ब्लाउज पहनना भूल गई।
😜😜😜😜😜😜😜😜 pic.twitter.com/kOlBknuXk9
ಜಿಮ್‌ನಲ್ಲಿ ಪ್ರತಿಯೊಬ್ಬರು ಅವರವ ಅಭ್ಯಾಸ, ಆರೋಗ್ಯ, ದೇಹದ ಕುರಿತು ಗಮನವಿದ್ದರೆ ಸಾಕು. ಇತರೆಡೆಗೆ ಗಮನಹರಿಸುವುದು ನಿಲ್ಲಿಸಿದರೆ ಎಲ್ಲವೂ ಸರಿಯಾಗಲಿದೆ ಎಂದು ಕಮೆಂಟ್ ಮಾಡಿದ್ದಾರೆ. ಪರ ವಿರೋಧಗಳು ಒಂದಡೆಯಾದರೆ ಈ ವಿಡಿಯೋ ಭಾರಿ ವೈರಲ್ ಆಗಿದೆ. ಪ್ರತಿ ನಿತ್ಯ ಜಿಮ್ ಅಭ್ಯಾಸ ಮಾಡುವ ಈ ಮಹಿಳೆಯರು, ವಿಡಿಯೋಗಾಗಿ ಸೀರೆಯುಟ್ಟು ಜಿಮ್ ಅಭ್ಯಾಸ ಮಾಡಿದ್ದಾರೆ. ಈಗಾಗಲೇ ಸೀರೆಯುಟ್ಟು ಜಿಮ್ ಅಭ್ಯಾಸ ಮಾಡಿದ ಮಹಿಳೆಯರ ಹಲವು ವಿಡಿಯೋಗಳು ವೈರಲ್ ಆಗಿದೆ. ಈ ಪೈಕಿ ಈ ವಿಡಿಯೋ ಇದೀಗ ತೀವ್ರ ಕುತೂಹಲ ಜೊತೆಗೆ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆ ಪಡೆದಿದೆ.
ಪ್ರತಿ ದಿನ ಆಹಾರ ನೀಡಿ ಆರೈಕೆ ಮಾಡುತ್ತಿದ್ದ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಹೆಬ್ಬಾವು!