ತಿರುಪತಿ ಲಡ್ಡುಗೆ ಇನ್ಮುಂದೆ ಆಧಾರ್‌ ಧೃಡೀಕರಣ ಕಡ್ಡಾಯ: ಟಿಟಿಡಿ

By Kannadaprabha News  |  First Published Aug 31, 2024, 9:26 AM IST

ದರ್ಶನದ ಟೋಕನ್‌ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್‌ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ.


ತಿರುಮಲ (ಆ.31): ದರ್ಶನದ ಟೋಕನ್‌ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್‌ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ.

‘ಕೆಲ ಮಧ್ಯವರ್ತಿಗಳು ಲಡ್ಡುಗಳನ್ನು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದನ್ನು ತಡೆದು ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದ್ದು, ಟೋಕನ್‌ ಖರೀದಿಸದ ಭಕ್ತರು ತಮ್ಮ ಆಧಾರ್‌ ತೋರಿಸಿ 2 ಲಡ್ಡು ಪಡೆಯಬಹುದು. ಇದ್ಕಾಗಿ ಲಡ್ಡು ಕಾಂಪ್ಲೆಕ್ಸ್‌ನಲ್ಲಿ ವಿಷೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ’ ಎಂದು ಟಿಟಿಡಿ ಹೇಳಿದೆ. ದರ್ಶನದ ಟೋಕನ್‌ ಉಳ್ಳವರು ಮೊದಲಿನಂತೆ ತಮಗೆ ಸಿಗುವ ಒಂದು ಉಚಿತ ಲಡ್ಡುವಿನೊಂದಿಗೆ ಬೇಕಾದಷ್ಟು ಹೆಚ್ಚಿಗೆ ಲಡ್ಡುಗಳನ್ನು ಖರೀದಿಸಲು ಅವಕಾಶವಿದೆ.

Tap to resize

Latest Videos

ತಿರುಪತಿಗೆ ಲಡ್ಡುಗಾಗಿ ಮತ್ತೆ ನಂದಿನಿ ತುಪ್ಪ ಪೂರೈಕೆ ಶುರು: ಸಿಎಂ ಸಿದ್ದರಾಮಯ್ಯರಿಂದ ಚಾಲನೆ

ಊಹಾಪೋಹಕ್ಕೆ ಸ್ಪಷ್ಟನೆ:

ಈ ನಡುವೆ, ಆಧಾರ್‌ ತೋರಿಸಿದವರಿಗೆ ತಿಂಗಳಿಗೆ ಎರಡೇ ಲಡ್ಡು ಎಂಬ ಊಹಾಪೋಹ ಹರಡಿದೆ. ಆದರೆ ತಿಂಗಳಿಗೆ ಎರಡೇ ಲಡ್ಡು ಎಂದಿಲ್ಲ. ಒಂದು ಬಾರಿ ಆಧಾರ್‌ ತೋರಿಸಿದರೆ 2 ಲಡ್ಡು ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ಭಕ್ತರಿಗೆ ಲಡ್ಡೂ ಪ್ರಸಾದಗಳನ್ನು ಹೆಚ್ಚು ಪಾರದರ್ಶಕವಾಗಿ ಮಾರಾಟ ಮಾಡಲು ಟೋಕನ್ ರಹಿತ ಭಕ್ತರಿಗೆ ಆಧಾರ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಟಿಟಿಡಿ ಹೆಚ್ಚುವರಿ ಈ ಎಸ್‌ಇಎಚ್ ವೆಂಕೆ ಚೌದರಿ ಮಾಹಿತಿ ನೀಡಿದ್ದಾರೆ.

ಭಕ್ತಾದಿಗಳೇ ಎಚ್ಚರ.. ತಿರುಪತಿ ತಿಮ್ಮಪ್ಪನಿಗೂ ನೀರಿಲ್ಲ, ಮಿತವಾಗಿ ಬಳಸುವಂತೆ ಸೂಚನೆ!

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಭಾರತದಲ್ಲಿನ ಆಂಧ್ರದ ತಿರುಮಲ ಪಟ್ಟಣದಲ್ಲಿ ಇರುವ ಪ್ರಸಿದ್ಧ ಪುರಾತನ ಹಿಂದೂ ದೇವಾಲಯ. ಶ್ರೀನಿವಾಸ ಬಾಲಾಜಿ ಮತ್ತು ವೆಂಕಟಾಚಲಪತಿ ಎಂದು ಹೆಸರಿಸಲಾದ ಶ್ರೀ ವೆಂಕಟೇಶ್ವರನು 5,000 ವರ್ಷಗಳ ಹಿಂದೆ ಇಲ್ಲಿ ನೆಲೆಸಿದ್ದಾನೆ

click me!