ರಾಜ​ಧರ್ಮ ಪಾಲಿಸಿ, ಇಂಧನ ಬೆಲೆ ಇಳಿಸಿ: ಕೇಂದ್ರಕ್ಕೆ ಸೋನಿಯಾ ಪತ್ರ!

Published : Feb 22, 2021, 07:40 AM ISTUpdated : Feb 22, 2021, 02:06 PM IST
ರಾಜ​ಧರ್ಮ ಪಾಲಿಸಿ, ಇಂಧನ ಬೆಲೆ ಇಳಿಸಿ: ಕೇಂದ್ರಕ್ಕೆ ಸೋನಿಯಾ ಪತ್ರ!

ಸಾರಾಂಶ

ರಾಜ​ಧರ್ಮ ಪಾಲಿಸಿ, ಇಂಧನ ಬೆಲೆ ಇಳಿಸಿ ಕೇಂದ್ರಕ್ಕೆ ಸೋನಿಯಾ ಪತ್ರ| 3 ಪುಟ​ಗಳ ಪತ್ರ​ದಲ್ಲಿ ದೇಶದ ಜನರ ಸಂಕಷ್ಟ ಅನಾ​ವ​ರ​ಣ| ಆರ್ಥಿ​ಕತೆ ಕುಸಿತ, ಉದ್ಯೋಗ ನಷ್ಟ, ವೇತನ ಕಡಿ​ತದ ಬಗ್ಗೆ ಉಲ್ಲೇ​ಖ

ನವ​ದೆ​ಹ​ಲಿ(ಫೆ.22): ದೇಶಾ​ದ್ಯಂತ ಜನ ಸಾಮಾ​ನ್ಯರ ಸಂಕ​ಷ್ಟಕ್ಕೆ ಕಾರ​ಣ​ವಾ​ಗಿ​ರುವ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌​ಪಿಜಿ ದರ ಇಳಿ​ಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ​ಧರ್ಮ ಪಾಲನೆ ಮಾಡ​ಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒತ್ತಾ​ಯಿ​ಸಿ​ದ್ದಾರೆ.

ತನ್ಮೂ​ಲಕ ಆರ್ಥಿ​ಕ​ತೆಯ ಮಹಾ​ಕು​ಸಿತ, ನಿರು​ದ್ಯೋ​ಗ​ದಿಂದ ತತ್ತ​ರಿ​ಸಿ​ರುವ ಮಧ್ಯ​ಮ​ವರ್ಗ, ಕೂಲಿ ಕಾರ್ಮಿ​ಕರು, ರೈತರು ಮತ್ತು ಬಡ​ವ​ರ ನೆರ​ವಿಗೆ ನಿಲ್ಲ​ಬೇಕು ಎಂದು ಕೇಂದ್ರ ಸರ್ಕಾ​ರಕ್ಕೆ ಪತ್ರ ಮುಖೇನ ಒತ್ತಾ​ಯಿ​ಸಿ​ದ್ದಾರೆ.

'ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಈ ಕ್ಷಣದಿಂದ ಅಧಿಕಾರ'

ಈ ಸಂಬಂಧ ಭಾನು​ವಾರ ಪ್ರಧಾನಿ ನರೇಂದ್ರ ಮೋದಿ ಅವ​ರಿಗೆ 3 ಪುಟ​ಗಳ ಪತ್ರ ಬರೆ​ದಿ​ರುವ ಸೋನಿಯಾ ಅವರು, ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌​ಪಿಜಿ ದರವು ಅನಿ​ಯಂತ್ರಿ​ತ​ವಾಗಿ ಏರಿ​ಕೆ​ಯಾ​ಗು​ತ್ತಿದೆ. ಆದರೆ ದೇಶದ ಜಿಡಿಪಿ ಮಾತ್ರ ಪಾತಾ​ಳಕ್ಕೆ ಕುಸಿ​ಯು​ತ್ತಿದೆ ಎಂಬುದು ಮಾತ್ರವೇ ವಾಸ್ತವ. ದರ ಏರಿ​ಕೆಯ ಹೊಡೆ​ತ​ದಿಂದ ದೇಶದ ಜನತೆ ಅತೀವ ಸಂಕಷ್ಟಮತ್ತು ಕಳ​ವ​ಳಕ್ಕೆ ಸಿಲು​ಕಿ​ದ್ದಾರೆ.

ಒಂದೆಡೆ ಉದ್ಯೋ​ಗ​ಗಳು, ವೇತನ ಕಡಿತ ಮತ್ತು ಕುಟುಂಬದ ಆದಾ​ಯವು ವ್ಯವ​ಸ್ಥಿ​ತ​ವಾಗಿ ಕುಸಿ​ಯು​ತ್ತಿವೆ. ಮಧ್ಯಮ ವರ್ಗ ಮತ್ತು ಹಿಂದು​ಳಿದ ವರ್ಗ​ಗ​ಳ ಜೀವ​ನ ನಿರ್ವ​ಹ​ಣೆ​ಯೂ ದುಸ್ತ​ರ​ವಾ​ಗಿ​ದೆ. ಇಂಥ ಸಂದ​ರ್ಭ​ದಲ್ಲಿ ಜನ​ರಿಗೆ ನೆರ​ವಾ​ಗ​ಬೇ​ಕಿದ್ದ ಸರ್ಕಾರ ತನ್ನ ಲಾಭ​ಕ್ಕಾಗಿ ಜನರ ಮೇಲೆ ಮತ್ತಷ್ಟುಹೊರೆ​ ಹಾಕು​ತ್ತಿ​ರು​ವುದು ಮಾತ್ರ ಬೇಸ​ರದ ಸಂಗತಿ ಎಂದು ಉಲ್ಲೇಖಿ​ಸಿ​ದ್ದಾರೆ.

ರಾಷ್ಟ್ರೀಯತೆಯ ಸರ್ಟಿಫಿಕೇಟ್ ಹಂಚುವವರ ಮುಖವಾಡ ಕಳಚಿದೆ: ಸೋನಿಯಾ ಕಿಡಿ!

ದೇಶಾ​ದ್ಯಂತ ಪೆಟ್ರೋಲ್‌ ದರ 100ರ ಗಡಿ ವ್ಯಾಪ್ತಿಗೆ ತಲು​ಪಿರುವ ಬೆನ್ನಲ್ಲೇ, ಸೋನಿಯಾ ಅವರ ಈ ಪತ್ರವು ಮಹತ್ವ ಪಡೆ​ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!