ನಿರ್ಮಲಾ ಸೀತಾರಾಮನ್ ನಿವಾಸದಲ್ಲಿ ಕೇಂದ್ರ ಮಹಿಳಾ ಮಂತ್ರಿಗಳಿಗೆ ಚಹಾ ಕೂಟ!

Published : Jul 11, 2021, 08:32 PM ISTUpdated : Jul 11, 2021, 08:41 PM IST
ನಿರ್ಮಲಾ ಸೀತಾರಾಮನ್ ನಿವಾಸದಲ್ಲಿ ಕೇಂದ್ರ ಮಹಿಳಾ ಮಂತ್ರಿಗಳಿಗೆ ಚಹಾ ಕೂಟ!

ಸಾರಾಂಶ

ಕೇಂದ್ರ ಸಂಪುಟದಲ್ಲಿದ್ದಾರೆ 11 ಮಹಿಳಾ ಮಂತ್ರಿಗಳು ನಿರ್ಮಲಾ ಸೀತಾರಾಮನ್ ನಿವಾಸದಲ್ಲಿ ಚಹಾ ಕೂಟ ಕರ್ನಾಟಕ ಶೋಭಾ ಕರಂದ್ಲಾಜೆ ಸೇರಿ ಮಹಿಳಾ ಮಂತ್ರಿಗಳು ಭಾಗಿ

ನವದೆಹಲಿ(ಜು.11): ಕೇಂದ್ರ ಸಚಿವ ಸಂಪುಟ ಪುನಾರಚನೆ ಬಳಿಕ ಮೋದಿ ಕ್ಯಾಬಿನೆಟ್‌ನಲ್ಲಿ 11 ಮಹಿಳಾ ಮಂತ್ರಿಗಳಿದ್ದಾರೆ. ಇದೀಗ ಈ 11 ಮಹಿಳಾ ಮಂತ್ರಿಗಳು ಒಂದೆಡೆ ಸೇರಿದ್ದಾರೆ. ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಸಂಪುಟದ ಮಹಿಳಾ ಮಂತ್ರಿಗಳಿಗೆ ಚಹಾ ಕೂಟ ಏರ್ಪಡಿಸಿದ್ದರು.

ಮೋದಿ ಸಂಪುಟದಲ್ಲಿ 11 ಮಹಿಳಾ ಸಚಿವರು; ಹೊಸ ಅಧ್ಯಾಯ ಆರಂಭ!.

ಸ್ಮೃತಿ ಇರಾನಿ, ನೂತನವಾಗಿ ಕೇಂದ್ರ ಸಂಪುಟ ಸೇರಿಕೊಂಡ ಕರ್ನಾಟಕ ಶೋಭಾ ಕರಂದ್ಲಾಜೆ ಸೇರಿದಂತೆ 11 ಮಹಿಳಾ ಮಂತ್ರಿಗಳು ಈ ಚಹಾ ಕೂಟದಲ್ಲಿ ಪಾಲ್ಗೊಂಡಿದ್ದರು.  ಸೀತಾರಾಮನ್ ಅಧೀಕೃತ ನಿವಾಸದಲ್ಲಿ ನಡೆದ ಈ ಚಹಾ ಕೂಟ ಮಹಿಳಾ ಶಕ್ತಿ ಪ್ರದರ್ಶನದ ಜೊತೆ ಅತ್ಯಂತ ಸೌಹಾರ್ದಯುತ ಕೂಟ ಎಂದು ಕರೆಯಲಾಗುತ್ತಿದೆ. 

 

ಚಹಾಕೂಟದಲ್ಲಿ ಪಾಲ್ಗೊಂಡ ಮಹಿಳಾ ಮಂತ್ರಿಗಳು
ನಿರ್ಮಲಾ ಸೀತಾರಾಮನ್,
ಸ್ಮೃತಿ ಇರಾನಿ
ಮೀನಾಕ್ಷಿ ಲೇಖಿ
ಸಾಧ್ವಿ ನಿರಂಜನ್ ಜ್ಯೋತಿ
ಅನುಪ್ರಿಯಾ ಪಟೇಲ್
ರೇಣುಕಾ ಸಿಂಗ್
ಅನ್ನಪೂರ್ಣ ದೇವಿ
ಪ್ರತಿಮಾ ಭೌಮಿಕ್
ಭಾರತಿ ಪವಾರ್
ಶೋಭಾ ಕರಂದ್ಲಾಜೆ
ದರ್ಶನಾ ಜರ್ದೋಶ್

ಕಾಂಚೀವರಂ ಸಿಲ್ಕ್ To ಬನಾರಸ್: ಸೀರೆಯಲ್ಲಿ ಮಿಂಚಿದ ಸಚಿವೆಯರು

ಜುಲೈ 7 ರಂದು ಕೇಂದ್ರ ಸಂಪುಟ ಪುನಾರಚನೆ ಮಾಡಲಾಗಿತ್ತು. ಈ ವೇಳೆ 7 ಮಹಿಳಾ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ರೇಣುಕಾ ಸಿಂಗ್ ಮತ್ತು ಸಾಧ್ವಿ ನಿರಂಜನ್ ಜ್ಯೋತಿ ಎಂಬ ಇಬ್ಬರು ಮಂತ್ರಿಗಳು ಪ್ರಮಾಣ ವಚನಕ್ಕೆ ಗೈರಾಗಿದ್ದರು. ಇನ್ನು ನಿರ್ಮಲಾ ಸೀತಾರಾಮನ್ ಹಾಗೂ ಸ್ಮೃತಿ ಇರಾನಿ ಮೋದಿ ಕ್ಯಾಬಿನೆಟ್‌ನಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.  

 

ಪ್ರಮಾಣ ವಚನ ಸ್ವೀಕಾರಾ ಸಮಾರಂಭ ಬಳಿಕ ಮಹಿಳಾ ಮಂತ್ರಿಗಳು ಜೊತೆಯಾಗಿ ಹಾಗೂ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.  ಇದೀಗ ಮತ್ತೆ ಒಂದೆಡೆ ಸೇರೋ ಮೂಲಕ ಮಹಿಳಾ ಶಕ್ತಿ ಪ್ರದರ್ಶಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು