ನವದೆಹಲಿ(ಜು.11): ಸಂಪುಟ ಪುನಾರಚನೆ ಬಳಿಕ ಕೇಂದ್ರ ಸರ್ಕಾರ ಆಡಳಿತಕ್ಕೆ ಮತ್ತಷ್ಟು ವೇಗ ನೀಡಲಾಗಿದೆ. ವಿಮಾನಯಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ರಾಜ್ಯದ ಜನತಗೆ ಸಿಹಿ ಸುದ್ದಿ ನೀಡಿದ್ದಾರೆ. ಜುಲೈ 16 ರಿಂದ 8 ಹೊಸ ವಿಮಾನ ಸೇವೆ ಘೋಷಿಸಿದ್ದಾರೆ.
ಸಂಪುಟ ಪುನಾರಚನೆ: ನಾರಾಯಾಣ ರಾಣೆ to ಸಿಂಧಿಯಾ, ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು!
ಉಡಾನ್ ಯೋಜನೆಯಡಿ 8 ಹೊಸ ವಿಮಾನ ಸೇವೆ ಆರಂಭಿಸಲಾಗುತ್ತಿದೆ. ಪ್ರಯಾಣಿಕರಿಗೆ ಸ್ಪೈಸ್‌ಜೆಟ್ ವಿಮಾನ ಸೇವೆ ನೀಡಲಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿಂಧಿಯಾ 8 ವಿಮಾನ ಸೇವೆ ಕುರಿತು ಮಾಹಿತಿ ನೀಡಿದ್ದಾರೆ.
- ಗ್ವಾಲಿಯರ್-ಮುಂಬೈ-ಗ್ವಾಲಿಯರ್
- ಗ್ವಾಲಿಯರ್-ಪುಣೆ-ಗ್ವಾಲಿಯರ್
- ಜಬಲ್ಪುರ್-ಸೂರತ್-ಜಬಲ್ಪುರ್
- ಅಹಮದಾಬಾದ್-ಗ್ವಾಲಿಯರ್-ಅಹಮದಾಬಾದ್
ಉಡಾನ್ ಯೋಜನೆಯಡಿ 100 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ ಎಂದು ಸಿಂಧಿಯಾ ಹೇಳಿದ್ದಾರೆ. ಸಣ್ಣ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವತ್ತ ಗಮನಹರಿಸಿರುವ ಈ ಯೋಜನೆಯಡಿ ಕನಿಷ್ಠ 1,000 ವಾಯು ಮಾರ್ಗಗಳನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿದೆ ಎಂದು ಅವರು ಹೇಳಿದರು.
ಈ ಯೋಜನೆಯಡಿ ಮಧ್ಯ ಪ್ರದೇಶದಕ್ಕೆ ಇದೀಗ 8 ವಿಮಾನ ಸೇವೆ ಆರಂಭಿಸಲಾಗುತ್ತಿದೆ . ಸಿಂಧಿಯಾ ಘೋಷಣೆಗೆ ಜನರು ಜೈಕಾರ ಹಾಕಿದ್ದಾರೆ.