ವಿಮಾನ ನಿಲ್ದಾಣದ ತಪಾಸಣೆ ವೇಳೆ ಸರ್ಪ್ರೈಸ್ ಕೊಟ್ಟ ಕೊಳಲು ವಾದಕ, ವಿಡಿಯೋ 44 ಮಿಲಿಯನ್ ಹಿಟ್ಸ್

Published : May 05, 2025, 06:32 PM IST
ವಿಮಾನ ನಿಲ್ದಾಣದ ತಪಾಸಣೆ ವೇಳೆ ಸರ್ಪ್ರೈಸ್ ಕೊಟ್ಟ ಕೊಳಲು ವಾದಕ, ವಿಡಿಯೋ 44 ಮಿಲಿಯನ್ ಹಿಟ್ಸ್

ಸಾರಾಂಶ

ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ವೇಳೆ ಕೊಳಲು ವಾದಕ ನೀಡಿದ ಸರ್ಪ್ರೈಸ್‌ಗೆ ಎಲ್ಲರೂ ಮಂತ್ರಮುಗ್ದರಾಗಿದ್ದಾರೆ. ಈತನ ಅದ್ಭುತ ಪ್ರತಿಭೆಗೆ ಜನ ಮರಳಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಕೊಳಲಿನಲ್ಲಿ ಮೋಡಿ ಮಾಡಿದ ಇವರ ವೀಡಿಯೋ 44 ಮಿಲಿಯನ್ ಅಧಿಕ ಹಿಟ್ಸ್ ಪಡೆದಿದೆ. 

ರಾಯ್‌ಪುರ(ಮೇ.05) ರಾಯ್‌ಪುರದ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ಬ್ಯಾಗ್‌ ಚೆಕ್ಕಿಂಗ್‌ ನಡೆಯುತ್ತಿತ್ತು.  ವಿಮಾನ ನಿಲ್ದಾಣದ ಸೆಕ್ಯೂರಿಟಿ ಚೆಕ್‌ಇನ್‌ಗಾಗಿ ಸರದಿ ಸಾಲಿನಲ್ಲಿ ನಿಂತರ ಪೈಕಿ ಒಬ್ಬ ಕೊಳಲು ವಾದಕ. ಸಕ್ಯೂರಿಟಿ ಅಧಿಕಾರಿಗಳು ಎಲ್ಲರ ಬ್ಯಾಗ್ ಚೆಕ್ ಮಾಡುತ್ತಾ, ಕೊನೆಗೆ ಕೊಳಲು ವಾದಕನ ಬ್ಯಾಗ್ ಕೂಡ ತಪಾಸಣೆ ಮಾಡಿದ್ದಾರೆ. ನೋಡಿದರೆ ಬ್ಯಾಂಗ್‌ನಲ್ಲಿ ಒಂದಷ್ಟು ಕೊಳಲುಗಳಿತ್ತು. ಭದ್ರತಾ ತಪಾಸಣೆ ಕಾರಣದಿಂದ ಬ್ಯಾಗ್‌ನಿಂದ ಅಧಿಕಾರಿಗಳು ಕೊಳಲುಗಳನ್ನು ಹೊರತೆಗೆಯುತ್ತಾರೆ. ಬಳಿಕ ವಿಮಾನ ನಿಲ್ದಾಣದ ಈ ಭದ್ರತಾ ತಪಾಸಣೆ ಸ್ಥಳದಲ್ಲಿ ನಡೆದಿದ್ದು ಮ್ಯಾಜಿಕ್. ಅಂಥದ್ದೊಂದು ಅದ್ಭುತ ಕ್ಷಣಕ್ಕೆ ರಾಯ್‌ಪುರ್ ಏರ್‌ಪೋರ್ಟ್‌ ಸಾಕ್ಷಿಯಾಗಿದೆ.  ಆ ವೀಡಿಯೋ ವೈರಲ್ ಆಗಿದ್ದು 44 ಮಿಲಿಯನ್  ಹಿಟ್ಸ್ ಕಂಡಿದೆ.  ಆ ವೀಡಿಯೋ ನೋಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಅದ್ಬುತವಾಗಿದೆ.

ಭದ್ರತಾ ಅಧಿಕಾರಿಗಳು ಎಲ್ಲರ ಬ್ಯಾಗ್ ರೀತಿಯಲ್ಲಿ ಕೊಳಲು ವಾದಕನ ಬ್ಯಾಗ್ ಕೂಡ ತಪಾಸಣೆ ಮಾಡಿದ್ದಾರೆ.  ನೋಡಿದರೆ ಅ ಬ್ಯಾಗ್‌ನಲ್ಲಿ ಒಂದಿಷ್ಟು ಕೊಳಲುಗಳಿವೆ, ಮುಂದೆ ಅಲ್ಲೊಂದು ಮ್ಯಾಜಿಕ್ ನಡೆಯುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ, 

ಏರ್‌ಪೋರ್ಟ್‌ನಲ್ಲಿ ನಡೆಯಿತು ಲೈವ್‌ ಕಾನ್ಸರ್ಟ್
ರಾಜಾಸ್ಥಾನದ ಮೂಲದ ಕೊಳಲು ವಾದಕ ತೇರಿ ಮಿಟ್ಟಿ ಎಂಬ ಬಾಲಿವುಡ್‌ ಹಾಡನ್ನು ಕೊಳಲಿನಲ್ಲಿ ಸೊಗಸಾಗಿ ನುಡಿಸಿದ್ದು ಅವರು ಕೊಳಲು ನುಡಿಸುತ್ತಿದ್ದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು,  ಆ ಏರ್‌ಪೋರ್ಟ್‌ನಲ್ಲಿದ್ದ ಪ್ರಯಾಣಿಕರು ಮಂತ್ರಮುಗ್ಧರಾಗಿ  ಆ ಸಂಗಿತ ಆಲಿಸಿದ್ದಾರೆ. ಅಚಾನಕ್ಕಾಗಿ ಏರ್‌ಪೋರ್ಟ್‌ನಲ್ಲಿ ಲೈವ್‌ ಮ್ಯೂಸಿಕ್ ಕಾನ್ಸರ್ಟ್‌ ಕೇಳಿ ಎಲ್ಲರೂ ಖುಷಿಯಾಗಿದ್ದಾರೆ. ಈ ವೀಡಿಯೋವನ್ನು ಮೆಹಬೂಬ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿದ್ದೇ ತಡ,  ಆ ಕೊಲಲು ವಾದಕನ ಪ್ರತಿಭೆಗೆ ನೆಟ್ಟಿಗರು ಕೂಡ ಮರುಳಾಗಿದ್ದರೆ, ಈ ವೀಡಿಯೋ 44 ಮಿಲಿಯನ್‌ಗೂ ಅಧಿಕ ವ್ಯೂವ್ಸ್ ಪಡೆದಿದೆ.

 

 

ಹಿರಿಯ ದಂಪತಿಗಾಗಿ ಹೊರಟ್ಟಿದ್ದ ರೈಲು ನಿಲ್ಲಿಸಿದ ಗಾರ್ಡ್, ಮೆಚ್ಚುಗೆ ಪಡೆದ ಹೃದಯಸ್ವರ್ಶಿ ವಿಡಿಯೋ

ಕೊಳಲು ವಾದಕನ ಪ್ರತಿಭೆಗೆ ಭೇಷ್‌ ಎಂದ ನೆಟ್ಟಿಗರು
ವೀಡಿಯೋದಲ್ಲಿ  ಏರ್‌ಪೋರ್ಟ್‌ನ ಭದ್ರತಾ ಸಿಬ್ಬಂದಿ ಲಗೇಜ್‌ ಚೆಕ್ ಮಾಡುವಾಗ ನನ್ನ ಬ್ಯಾಗ್‌ನಲ್ಲಿರುವ ಕೊಳಲುಗಳನ್ನು ನೋಡಿ ನಮಗೋಸ್ಕರ ಒಂದು ಹಾಡು ನುಡಿಸಬಹುದೇ ಎಂದು ಕೇಳಿದರು, ಅವರ ಸಂಗೀತ ಪ್ರೇಮ ನೋಡಿ ಒಂದು ಹಾಡು ಕೊಳಲಿನಲ್ಲಿ ನುಡಿಸಿದೆ ಎಂಬುವುದಾಗಿ ಹೇಳಿದ್ದಾರೆ, ಹಾಡಿನ ಮೂಲಕ ಸಂಗೀತ ಪ್ರಿಯರನ್ನು ಹೀಗೆ ಕನೆಕ್ಟ್ ಆಗಿರುವುದಕ್ಕೆ ನನಗೆ ಖುಷಿಯಾಗಿದೆ ಎಂಬುವುದಾಗಿ ಹೇಳಿದ್ದಾರೆ.

ಮತ್ತೊಂದು ವೀಡಿಯೋದಲ್ಲಿ ಆಫೀಸರ್ ಹಾಡಿರುವ  ಹಾಡು ಕೂಡ ಗಮನ ಸೆಳೆದಿದೆ
ಈ ಸಂಗೀತ ಟೀಂ ನೋಡಿದ ರಾಯ್‌ಪುರ್ ಏರ್‌ಪೋರ್ಟ್‌ನ ಆಫೀಸರ್‌ರೊಬ್ಬರು ಕೂಡ  ಹಾಡನ್ನು ಹಾಡುವ ಮೂಲಕ  ಈ ಟೀಂಗೆ ಪ್ರೋತ್ಸಾಹ ನೀಡಿದ್ದಾರೆ. ಸಂಗೀತ ಎಂಬುವುದೇ ಹಾಗೆ ಅದಕ್ಕೆ ಭಾಷೆಯಿಲ್ಲ,  ಸಂಗೀತದ  ಮುಲಕ ನಮ್ಮ ಭಾವನೆಗಳನ್ನು ಬೇರೆಯವರಿಗೆ ವ್ಯಕ್ತ ಪಡಿಸಬಹುದು. ಒಂದೊಳ್ಳೆಯ ಸಂಗೀತಕ್ಕೆ ನಮ್ಮೆಲ್ಲಾ  ನೋವು ಮರೆಸುವ ಶಕ್ತಿ ಇದೆ, ಇವರ ಗಾಯನ ಕೇಳುತ್ತಿದ್ದಾಗ ಶ್ರೀಕೃಷ್ಣ ಆಶೀರ್ವಾದ ಈ ವ್ಯಕ್ತಿ ಮೆಲಿದೆ ಎಂದು ಹೇಳಬಹುದು, ಅಷ್ಟೊಂದು ಸುಂದರವಾಗಿ ಕೊಳಲು ನುಡಿಸುವ ಮೂಲಕ ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

RCB ಗುಡ್ ಲಕ್‌ಗಾಗಿ 10 ರೂ ಕಾಣಿಕೆ ಹಾಕಿ, ಕ್ಯೂಆರ್ ಕೋಡ್ ಪ್ರಾಂಕ್‌ನಿಂದ ಭಾರಿ ಮೊತ್ತ ಸಂಗ್ರಹ


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್