ರಾಹುಲ್‌ ಗಾಂಧಿ ದ್ವಿಪೌರತ್ವದ ಬಗ್ಗೆ ವರದಿ ನೀಡದ ಕೇಂದ್ರ, 2 ವಾರ ಕಾಲಾವಕಾಶ ಕೊಟ್ಟ ಅಲಹಾಬಾದ್‌ ಕೋರ್ಟ್‌!

Published : May 05, 2025, 05:38 PM ISTUpdated : May 05, 2025, 09:30 PM IST
ರಾಹುಲ್‌ ಗಾಂಧಿ ದ್ವಿಪೌರತ್ವದ ಬಗ್ಗೆ ವರದಿ ನೀಡದ ಕೇಂದ್ರ, 2 ವಾರ ಕಾಲಾವಕಾಶ ಕೊಟ್ಟ ಅಲಹಾಬಾದ್‌ ಕೋರ್ಟ್‌!

ಸಾರಾಂಶ

ರಾಹುಲ್ ಗಾಂಧಿಯವರ ದ್ವಿಪೌರತ್ವದ ಕುರಿತಾದ ಅರ್ಜಿ ವಿಚಾರಣೆ ಮಾಡಿದ ಲಕ್ನೋ ಹೈಕೋರ್ಟ್ ಸರ್ಕಾರಕ್ಕೆ ವರದಿ  ನೀಡಲು 2 ವಾರ ಗಡುವು ಕೊಟ್ಟಿದೆ. ಕರ್ನಾಟಕ ಬಿಜೆಪಿ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದೀಗ ಸರ್ಕಾರ ಈ ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಸ್ಪಷ್ಟಪಡಿಸಲು 2 ವಾರ ಗಡುವು ಕೊಟ್ಟಿದೆ.

ನವದೆಹಲಿ (ಮೇ.5): ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ದ್ವಿಪೌರತ್ವ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಸೋಮವಾರ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಅರ್ಜಿಯನ್ನು ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಸಲ್ಲಿಸಿದ್ದರು. ರಾಹುಲ್ ಗಾಂಧಿ ಭಾರತ ಮತ್ತು ಬ್ರಿಟನ್ ಎರಡೂ ದೇಶಗಳ ನಾಗರಿಕರಾಗಿದ್ದಾರೆ ಮತ್ತು ಈ ಆಧಾರದ ಮೇಲೆ ಅವರು ಸಂವಿಧಾನದ 84 (A) ನೇ ವಿಧಿಯನ್ವಯ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿತ್ತು.

ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ವರದಿ ಕೋರಿತ್ತು. ಸರ್ಕಾರದ ವರದಿ ಸಲ್ಲಿಕೆ ಮಾಡದ ಕಾರಣ, ಈ ಪ್ರಕರಣಕ್ಕೆ ಯಾವುದೇ ಕಾನೂನುಬದ್ಧ ಆಧಾರಗಳಿಲ್ಲ ಎಂದು ಹೇಳಿತ್ತು. ಇದೀಗ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಎರಡು ವಾರಗಳಲ್ಲಿ ನಿರ್ಧಾರ ತೆಗೆದುಕೊಂಡು ಅರ್ಜಿದಾರರಿಗೆ ತಿಳಿಸುವಂತೆ ನ್ಯಾಯಾಲಯ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇನ್ನು ಮೊದಲ ವಿಚಾರಣೆಯಲ್ಲಿ ಗೃಹ ಸಚಿವಾಲಯದ ವರದಿಯಿಂದ ನ್ಯಾಯಾಲಯವು ಅಸಮಾಧಾನಗೊಂಡು, 10 ದಿನಗಳಲ್ಲಿ ಪರಿಷ್ಕೃತ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು. 

ಸ್ವಾಮಿ ಕೂಡ ಪ್ರಶ್ನಿಸಿದ್ದರು, ಗೃಹ ಸಚಿವಾಲಯ ನೋಟಿಸ್ ನೀಡಿತ್ತು

ಈ ಪ್ರಕರಣ 2019 ರಲ್ಲಿ ಆರಂಭವಾಯಿತು. ರಾಜ್ಯಸಭಾ ಸದಸ್ಯರಾಗಿದ್ದ ಡಾ. ಸುಬ್ರಮಣಿಯನ್ ಸ್ವಾಮಿ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದರು. ರಾಹುಲ್ ಗಾಂಧಿ 2003 ರಲ್ಲಿ ಬ್ರಿಟನ್‌ನಲ್ಲಿ ನೋಂದಾಯಿತ Backops Limited ಕಂಪನಿಯ ನಿರ್ದೇಶಕ ಮತ್ತು ಕಾರ್ಯದರ್ಶಿಯಾಗಿದ್ದರು ಮತ್ತು ಕಂಪನಿಯ ದಾಖಲೆಗಳಲ್ಲಿ ಅವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿದ್ದರು.

ಕಂಪನಿ ದಾಖಲೆಗಳ ಆಧಾರದ ಮೇಲೆ ಆರೋಪ: ಕಂಪನಿಯ ವಾರ್ಷಿಕ ವರದಿಗಳು (10 ಅಕ್ಟೋಬರ್ 2005 ಮತ್ತು 31 ಅಕ್ಟೋಬರ್ 2006 ರಂದು ಸಲ್ಲಿಸಲಾಗಿದೆ) ರಾಹುಲ್ ಗಾಂಧಿಯವರ ಜನ್ಮ ದಿನಾಂಕ 19 ಜೂನ್ 1970 ಎಂದು ದಾಖಲಿಸಲಾಗಿದೆ ಮತ್ತು ಅವರ ನಾಗರಿಕತೆಯನ್ನು ಬ್ರಿಟಿಷ್ ಎಂದು ಉಲ್ಲೇಖಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಫೆಬ್ರವರಿ 17, 2009 ರಂದು ಸಲ್ಲಿಸಲಾದ ಕಂಪನಿಯ ವಿಸರ್ಜನಾ ಅರ್ಜಿಯಲ್ಲಿಯೂ ಇದೇ ಮಾಹಿತಿಯನ್ನು ದಾಖಲಿಸಲಾಗಿದೆ.

ಸರ್ಕಾರದ ಮೌನದಿಂದ ವಿವಾದ: 2019 ರಲ್ಲಿ ಗೃಹ ಸಚಿವಾಲಯವು ರಾಹುಲ್ ಗಾಂಧಿಗೆ ಈ ಬಗ್ಗೆ ನೋಟಿಸ್ ನೀಡಿತ್ತು. ಆದರೆ ನಂತರ ಸರ್ಕಾರದಿಂದ ಯಾವುದೇ ಸ್ಪಷ್ಟ ಸಾರ್ವಜನಿಕ ವಿವರಣೆ ಬಂದಿರಲಿಲ್ಲ. ರಾಹುಲ್ ಗಾಂಧಿ ಭಾರತೀಯ ನಾಗರಿಕರೇ ಅಥವಾ ಇಲ್ಲವೇ ಎಂದು ಸರ್ಕಾರ ನೇರವಾಗಿ ಹೇಳುತ್ತಿಲ್ಲ ಎಂದು ನ್ಯಾಯಾಲಯವು ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು
ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧ ಬಲಿ