ಗಣೇಶ ಹಬ್ಬಕ್ಕೆ ಊರಿಗೆ ಬೇಟಿ ನೀಡಲು ಪ್ಲಾನ್ ಮಾಡಿದ್ದೀರಾ? ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಶಾಕ್

Published : Sep 01, 2026, 11:18 AM IST
air india indigo spicejet flights

ಸಾರಾಂಶ

ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿದೆ. ಇದಕ್ಕೂ ಮೊದಲೇ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಶಾಕ್ ಎದುರಾಗಿದೆ. ಇದೀಗ ಎಟಿಎಸ್ ವಿಮಾನ ಟಿಕೆಟ್ ಪ್ರಯಾಣ ದರ ಏರಿಕೆಗೆ ಮುಂದಾಗಿದೆ.

ನವದೆಹಲಿ (ಸೆ.01) ಗಣೇಶ ಹಬ್ಬ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಸಾಲು ಸಾಲು ರಜೆಗಳ ಕಾರಣ ಊರಿಗೆ ತೆರಳುವವರ ಸಂಖ್ಯೆ ಹೆಚ್ಚು. ಹೀಗಾಗಿ ಭಾರತೀಯ ರೈಲ್ವೇ, ಸಾರಿಗೆ ಸಂಸ್ಥೆಗಳು ಹೆಚ್ಚುವರಿ ರೈಲು,ಬಸ್ ವ್ಯವಸ್ಥೆ ಮಾಡುತ್ತದೆ. ವಿಶೇಷ ವಾಹನಗಳ ವ್ಯವಸ್ಥೆಗಳು ಈಗಾಗಲೇ ಚಾಲನೆಗೊಂಡಿದೆ. ಇದೇ ವೇಳೆ ವಿಮಾನ ಪ್ರಯಾಣ ಕೂಡ ಹೆಚ್ಚು. ಆದರೆ ಹಬ್ಬಕ್ಕೂ ಮೊದಲೇ ವಿಮಾನ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ. ವಿಮಾನಯಾನ ಇಂಧನ ದರ ಹೆಚ್ಚಳದ ಪರಿಣಾಮ ಇದೀಗ ಅನಿವಾರ್ಯವಾಗಿ ವಿಮಾನ ಸಂಸ್ಥೆಗಳು ಟಿಕೆಟ್ ದರ ಏರಿಕೆಗೆ ಮುಂದಾಗಿದೆ.

ಎಟಿಎಸ್ ಬೆಲೆ ಏರಿಕೆ

ವಿಮಾನಕ್ಕೆ ಬಳಸು ಎವಿಯೇಶನ್ ಟರ್ಬೈನ್ ಫ್ಯೂಯೆಲ್ ಬೆಲೆ ಏರಿಕೆಯಾಗಿದೆ. ಶೇಕಡಾ 5.46ರಷ್ಟು ಹೆಚ್ಚಳವಾಗಿದೆ. ಪರಿಣಾಮ 115 ರೂಪಾಯಿ ಇದ್ದ ಬೆಲೆ ಇದೀಗ 121.28 ರೂಪಾಯಿಗೆ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ಇದೇ ಎಟಿಎಸ್ ಬೆಲೆ 110 ರೂಪಾಯಿಂದ 115 ರೂಪಾಯಿಗೆ ಏರಿಕೆಯಾಗಿತ್ತು. ಕಳೆದೆರಡು ತಿಂಗಳಿನಿಂದ ಸತತವಾಗಿ ಬೆಲೆ ಏರಿಕೆಯಾಗುತ್ತಿದೆ. ಆದರೂ ಜುಲೈ ತಿಂಗಳಲ್ಲಿ ವಿಮಾನ ಪ್ರಯಾಣ ದರ ಏರಿಕೆಯಾಗಿರಲಿಲ್ಲ. ಇದೀಗ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ಏರಿಕೆಗೆ ಮುಂದಾಗಿದೆ.

ವಿಮಾನ ಇಂಧನ ಬೆಲೆ ಏರಿಕೆ ಸೇರಿದಂತೆ ಹಲವು ಖರ್ಚು ವೆಚ್ಚಗಳಿಂದ ವಿಮಾಯಾನ ಸಂಸ್ಥೆಗಳ ವೆಚ್ಚ ಶೇಕಡಾ 35 ರಿಂದ 40ರಷ್ಟು ಹೆಚ್ಚಳವಾಗಿದೆ. ಇದರ ಪರಿಣಾಮ ಟಿಕೆಟ್ ಬೆಲೆಗಳು ಏರಿಕೆಯಾಗಲಿದೆ. ಶೀಘ್ರದಲ್ಲೇ ಅಧಿಕೃತವಾಗಿ ವಿಮಾನ ಪ್ರಯಾಣ ದರ ಏರಿಕೆ ಘೋಷಣೆಯಾಗಲಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಕಡಿಮೆ ದರ ಹಾಗೂ ಅತೀ ಕಡಿಮೆ ಸಮಯದಲ್ಲಿ ಪ್ರಯಾಣದ ಅನೂಕೂಲತೆ ಹೊಂದಿದ್ದ ಡೊಮೆಸ್ಟಿಕ್ ವಿಮಾನ ಪ್ರಯಾಣ ಇನ್ನು ದುಬಾರಿಯಾಗಲಿದೆ.

ಕಚ್ಚಾ ತೈಲ ಬೆಲೆ ಏರಿಕೆ

ಅಮೆರಿಕ ಹಾಗೂ ಇರಾನ್ ನಡುವೆ ಮತ್ತೆ ಮನಸ್ತಾಪಗಳು, ಸಂಘರ್ಷಗಳು ತೀವ್ರಗೊಳ್ಳುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಸದ್ಯ ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 91 ಅಮೆರಿಕನ್ ಡಾಲರ್‌ನಲ್ಲಿ ಟ್ರೇಡ್ ಆಗುತ್ತಿದೆ. ಹಣದುಬ್ಬರ ಸಮಸ್ಯೆಗಳು ಭಾರತ ಜನಸಾಮಾನ್ಯರ ಮೇಲೆ ತೀವ್ರ ಹೊಡೆತ ನೀಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕದ ಶಾಶ್ವತ ನಿವಾಸಿಯಾಗಲು ಭಾರತೀಯರು 179 ವರ್ಷ ಕಾಯಬೇಕು, ಗ್ರೀನ್ ಕಾರ್ಡ್ ಸಿಗೋದು ಈ ಜನ್ಮದಲ್ಲಂತೂ ಸಾಧ್ಯವಿಲ್ಲ!
ಜೊಮ್ಯಾಟೋದ ಈ ಡೆಲಿವರಿ ಗರ್ಲ್ ಮಾಡಿದ ಆ ಸಾದನೆ ಏನು ಗೊತ್ತಾ? ಸಿಇಒ ಸೇರಿ ಇಡೀ ದೇಶವೇ ಶಹಬ್ಬಾಸ್ ಅಂದಿದ್ದೇಕೆ?