ಇಂಟರ್ನೆಟ್‌ ಇಲ್ಲದ ಕೀಪ್ಯಾಡ್‌ ಫೋನಲ್ಲಿ ಯುಪಿಐ '123ಪೇ' ಸೇವೆ; ಫೋನ್‌ಪೇನಿಂದಚಾಲನೆ

Published : Sep 01, 2026, 05:51 AM IST
UPI

ಸಾರಾಂಶ

ಫೋನ್‌ಪೇ ಸಂಸ್ಥೆಯು ಇಂಟರ್ನೆಟ್‌ ಸಂಪರ್ಕವಿಲ್ಲದ ಕೀಪ್ಯಾಡ್‌ ಫೋನ್‌ಗಳಿಗಾಗಿ 'ಯುಪಿಐ 123ಪೇ' ಸೇವೆಯನ್ನು ಆರಂಭಿಸಿದೆ. ಈ ಸೌಲಭ್ಯದಿಂದ ದೇಶದ 20 ಕೋಟಿಗೂ ಅಧಿಕ ಫೀಚರ್ ಫೋನ್ ಬಳಕೆದಾರರು ಸುಲಭವಾಗಿ ಹಣಕಾಸು ವಹಿವಾಟು ನಡೆಸಬಹುದಾಗಿದೆ.

ನವದೆಹಲಿ: ದೇಶದ ಪ್ರಮುಖ ಫಿನ್‌ಟೆಕ್‌ ಸಂಸ್ಥೆಯಾದ ಫೋನ್‌ಪೇ, ಇಂಟರ್ನೆಟ್‌ ಸಂಪರ್ಕವಿಲ್ಲದೆಯೂ ಫೀಚರ್‌ ಫೋನ್‌ (ಕೀಪ್ಯಾಡ್‌ ಫೋನ್‌) ಬಳಕೆದಾರರು ಯುಪಿಐ ವಹಿವಾಟು ನಡೆಸಲು ನೆರವಾಗುವ ‘ಫೋನ್ ಪೇ ಯುಪಿಐ 123ಪೇ’ ಸೇವೆಯನ್ನು ಸೋಮವಾರ ಅಧಿಕೃತವಾಗಿ ಪ್ರಾರಂಭಿಸಿದೆ.

ಈ ನೂತನ ಸೇವೆಯೊಂದಿಗೆ, ದೇಶಾದ್ಯಂತ ಇರುವ ಸುಮಾರು 20 ಕೋಟಿಗೂ ಅಧಿಕ ಫೀಚರ್ ಫೋನ್ ಬಳಕೆದಾರರಿಗೆ ಯುಪಿಐ ಪಾವತಿ ಸೌಲಭ್ಯವನ್ನು ವಿಸ್ತರಿಸಿದ ಮೊದಲ ಪ್ರಮುಖ ಥರ್ಡ್ ಪಾರ್ಟಿ ಆ್ಯಪ್ ಪ್ರೊವೈಡರ್ ಎಂಬ ಹೆಗ್ಗಳಿಕೆಗೆ ಫೋನ್‌ಪೇ ಪಾತ್ರವಾಗಿದೆ.

ಕ್ಯೂಆರ್ ಕೋಡ್ ಸ್ಕ್ಯಾನ್

ಈ ಸೇವೆಯಿಂದ ಸೀಮಿತ 2ಜಿ ನೆಟ್ವರ್ಕ್‌ ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲೂ ಸುಲಭವಾಗಿ ಹಣಕಾಸು ವಹಿವಾಟು ನಡೆಸಬಹುದಾಗಿದೆ. ಈ ವೇದಿಕೆಯ ಮೂಲಕ ಬಳಕೆದಾರರು ಒಬ್ಬರಿಂದ ಇನ್ನೊಬ್ಬರಿಗೆ ಹಾಗೂ ವ್ಯಾಪಾರಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದು. ಕ್ಯಾಮೆರಾ ಸೌಲಭ್ಯವಿರುವ ಫೀಚರ್ ಫೋನ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವ ಸೌಲಭ್ಯವೂ ಇದೆ. ಇದರ ಜತೆಗೆ ಖಾತೆ ನಿರ್ವಹಣೆ, ಬ್ಯಾಲೆನ್ಸ್ ಪರಿಶೀಲನೆ ಹಾಗೂ ಹಳೆಯ ವಹಿವಾಟುಗಳ ವಿವರಗಳನ್ನು ವೀಕ್ಷಿಸಲು ಅವಕಾಶವನ್ನೂ ಕಲ್ಪಿಸಲಾಗಿದೆ.

ಫೋನ್ ಪೇ ಎಐ ಆಧರಿತ ವಾಯ್ಸ್ ಹೆಲ್ಪ್‌ಲೈನ್

ನೋಕಿಯಾ, ಎಚ್‌ಎಂಡಿ, ಲಾವಾ ಇಂಟರ್‌ನ್ಯಾಷನಲ್ ಮತ್ತು ಐಟೆಲ್ ಮೊಬೈಲ್ (ಟ್ರಾನ್ಸ್‌ಷನ್ ಹೋಲ್ಡಿಂಗ್ಸ್) ನಂತಹ ಹ್ಯಾಂಡ್‌ಸೆಟ್ ತಯಾರಕರೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದೆ. ಮೊದಲ ಬಾರಿಗೆ ಈ ಸೇವೆ ಬಳಸುವ ಗ್ರಾಹಕರಿಗೆ ನೆರವಾಗಲು ಫೋನ್ ಪೇ ಎಐ ಆಧರಿತ ವಾಯ್ಸ್ ಹೆಲ್ಪ್‌ಲೈನ್ ಪರಿಚಯಿಸಿದೆ. ಇದು ಸೇವೆಯನ್ನು ಹೇಗೆ ಸಕ್ರಿಯಗೊಳಿಸಬೇಕು ಎಂಬುದರ ಕುರಿತು ಹಂತ-ಹಂತದ ಮಾರ್ಗದರ್ಶನವನ್ನು ಇಂಗ್ಲಿಷ್ ಮತ್ತು 12 ಭಾರತೀಯ ಭಾಷೆಗಳಲ್ಲಿ ನೀಡುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ರಾಹುಲ್‌ ಗಾಂಧಿಗೆ ಉಲ್ಟಾ ಹೊಡೆದ ‘ಸ್ಥಳ ಶುದ್ಧೀಕರಣ’ವಿವಾದ: ಕೇಸು ದಾಖಲು
ಅಣ್ಣಾ ಹಜಾರೆ ಆರೋಗ್ಯ ದಿಢೀರ್ ಏರುಪೇರು: ಐಸಿಯುಗೆ ದಾಖಲು