ರೈಲು ಆಯ್ತು, ವಿಮಾನ ಸಂಚಾರವೂ ಆರಂಭ: ಯಾವಾಗಿಂದ?

By Suvarna NewsFirst Published May 12, 2020, 5:20 PM IST
Highlights

ರೈಲು ಆಯ್ತು, 17ರಿಂದ ಹಂತ ಹಂತವಾಗಿ ವಿಮಾನ ಸಂಚಾರ ಆರಂಭ ಸಂಭವ| ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಅಧಿಕಾರಿಗಳಿಂದ ಅಂತಿಮ ಸಿದ್ಧತೆ ಪರಿಶೀಲನೆ

ನವದೆಹಲಿ(ಮೇ.12): -ದೇಶಾದ್ಯಂತ ಮಂಗಳವಾರದಿಂದ ರೈಲ್ವೆ ಸೇವೆ ಆರಂಭಗೊಳ್ಳುತ್ತಿರುವ ಬೆನ್ನಲ್ಲೇ, ಮೇ 17ರ ಬಳಿಕ ಹಂತ ಹಂತವಾಗಿ ವಿಮಾನಯಾನ ಸೇವೆಯನ್ನು ಕೂಡ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ ಹಾಗೂ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಅಧಿಕಾರಿಗಳು ಸೋಮವಾರ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಅಂತಿಮ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಮೊದಲ ಹಂತದಲ್ಲಿ ಶೇ.25ರಷ್ಟುವಿಮಾನಗಳು ಮಾತ್ರ ಹಾರಾಟ ನಡೆಸಲಿವೆ. ಎರಡು ಗಂಟೆಯಷ್ಟುಪ್ರಯಾಣ ಅವಧಿಯ ಯಾವುದೇ ವಿಮಾನಗಳಲ್ಲಿಯೂ ಆಹಾರ ಪೂರೈಕೆ ಇರುವುದಿಲ್ಲ.

ಪ್ರಯಾಣಿಕರಿಗೆ ನಿಯಮಿತ ರೈಲು ಓಡಾಟ; ಇಲ್ಲಿದೆ ಟ್ರೈನ್ ವೇಳಾಪಟ್ಟಿ ವಿವರ!

ಜೊತೆಗೆ ಪ್ರತಿಯೊಬ್ಬ ಪ್ರಯಾಣಿಕರಿಗೂ ಆರೋಗ್ಯ ಸೇತು ಆ್ಯಪ್‌ ಬಳಕೆಯನ್ನು ಕಡ್ಡಾಯಗೊಳಿಸಲಾಗುತ್ತದೆ. ಸಾಕಷ್ಟುವಿಮಾನಗಳ ಬಳಕೆ ಇರುವ ದೆಹಲಿ, ಮುಂಬೈ ಮತ್ತು ಬೆಂಗಳೂರು ಮಾರ್ಗಗಳ ವಿಮಾನಗಳು ಮೊದಲ ಹಂತದಲ್ಲಿ ಆರಂಭಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

ಕೊರೋನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಣೆ ಮಾಡಿದ ದಿನದಿಂದ ರೈಲು ಮತ್ತು ವಿಮಾನಯಾನ ಸೇವೆ ಸ್ಥಗಿತಗೊಂಡಿತ್ತು.

click me!