ಕೊರೋನಾ ವೈರಸ್ ನಿಯಂತ್ರಣಕ್ಕೆ ಹಲವು ದೇಶಗಳು ಲಸಿಕೆ ಸಂಶೋಧನೆ ನಡೆಸುತ್ತಿದೆ. ಭಾರತ ಕೂಡ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ಭಾರತದ ಮೊದಲ ಕೊರೋನಾ ಔಷದ, ಕೊವಾಕ್ಸಿನ್ ಲಸಿಕೆಯನ್ನು ದೆಹಲಿಯ ಐವರು ಸೋಂಕಿತರ ಮೇಲೆ ಪ್ರಯೋಗ ಮಾಡಲಾಗುತ್ತಿದೆ
ನವದೆಹಲಿ(ಜು.24): ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಆಶಾಕಿರಣವಾಗಿರುವ ಭಾರತದ ಮೊದಲ ಲಸಿಕೆ ಕೊವಾಕ್ಸಿನ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಐವರಿಗೆ ನೀಡಲು ನಿರ್ಧರಿಸಲಾಗಿದೆ. ಸ್ವಯಂ ಪ್ರೇರಿತರಾಗಿ ಮುಂದೆ ಬಂದ 5 ಮಂದಿಗೆ ಲಸಿಕೆ ಪ್ರಯೋಗ ಮಾಡಲು ಸಿದ್ಧತೆ ನಡೆದಿದೆ.. ಭಾರತ್ ಬಯೋಟೆಕ್ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಜಂಟಿಯಾಗಿ ಈ ಲಸಿಕೆ ಸಂಶೋಧನೆ ಮಾಡಿದೆ.
30 ಸೆಕೆಂಡ್‌ನಲ್ಲಿ ಕೊರೋನಾ ಪರೀಕ್ಷೆ; ಭಾರತ-ಇಸ್ರೇಲ್ ಜಂಟಿಯಾಗಿ ಕಿಟ್ ಅಭಿವೃದ್ದಿ!
undefined
ಮೊದಲ ಹಂತದ ಪ್ರಯೋಗಕ್ಕೆ 100 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಯೋಗ ಮಾಡಿದವರ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಹಂತದ ಹಂತದ ವರದಿ ತರಿಸಿ ಅಧ್ಯಯನ ನಡೆಯಲಿದೆ. ಒಟ್ಟು 50 ವಿದಧ ಟೆಸ್ಟ್ ಮಾಡಲಿದ್ದೇವೆ. ಈ ಮೂಲಕ ಒಟ್ಟು 3,500 ಮಂದಿ ಮೇಲೆ ಲಸಿಕೆ ಪ್ರಯೋಗ ಮಾಡಲಿದ್ದೇವೆ ಎಂದು ದೆಹಲಿ ಏಮ್ಸ್ ಆಸ್ಪತ್ರೆಯ ಡಾಕ್ಟರ್ ಸಂಜಯ್ ರೊಯ್ ಹೇಳಿದ್ದಾರೆ.
ನಾಲ್ಕೇ ದಿನದಲ್ಲಿ ಕೊರೋನಾ ಮಂಗಮಾಯ! 'ಧೈರ್ಯವಿದ್ದಷ್ಟು ಬೇಗ ಗುಣಮುಖ
ICMR ಭಾರತದ 12 ಮೆಡಿಕಲ್ ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಈ ಸಂಸ್ಥೆಗಳಲ್ಲಿ ಕೊವ್ಯಾಕ್ಸಿನ್ ಪ್ರಯೋಗ ನಡೆಯಲಿದೆ. ಭಾರತದ ಮೊದಲ ಕೊರೋನಾ ಲಸಿಕೆ ಕೊವಾಕ್ಸಿನ್ ಭರವಸೆ ಮೂಡಿಸಿದ್ದು, ಶೀಘ್ರದಲ್ಲೇ ಪರೀಕ್ಷೆ ಯಶಸ್ವಿಯಾಗಲಿದೆ ಎಂದು ಸಂಜಯ್ ರೊಯ್ ಹೇಳಿದ್ದಾರೆ.