ಮಾನ್ಸೂನ್ ಅಧಿವೇಶನ: ಒಂದು ಸಲಕ್ಕೆ ಒಂದೇ ಸದನದ ಕಲಾಪ?

By Kannadaprabha NewsFirst Published Jul 24, 2020, 5:59 PM IST
Highlights

ಈ ವರ್ಷ ಸಂಸತ್ತಿನ ಮಾನ್ಸೂನ್‌ ಅಧಿವೇಶನ ನಡೆಸೋದು ಹೇಗೆ ಎಂಬ ಚಿಂತೆ ಕೇಂದ್ರ ಸರ್ಕಾರಕ್ಕೆ ಶುರುವಾಗಿದೆ. ಹೀಗಾಗಿ ಸರ್ಕಾರದ ಮನವಿ ಮೇರೆಗೆ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ನಡುವೆ 5 ಬಾರಿ ಸಭೆ ನಡೆದಿವೆ. 

ನವದೆಹಲಿ (ಜು. 24): ಈ ವರ್ಷ ಸಂಸತ್ತಿನ ಮಾನ್ಸೂನ್‌ ಅಧಿವೇಶನ ನಡೆಸೋದು ಹೇಗೆ ಎಂಬ ಚಿಂತೆ ಕೇಂದ್ರ ಸರ್ಕಾರಕ್ಕೆ ಶುರುವಾಗಿದೆ. ಹೀಗಾಗಿ ಸರ್ಕಾರದ ಮನವಿ ಮೇರೆಗೆ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ನಡುವೆ 5 ಬಾರಿ ಸಭೆ ನಡೆದಿವೆ.

ಒಂದೇ ಸಲಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪ ನಡೆಸುವುದಕ್ಕಿಂತ ಒಂದು ಸಲಕ್ಕೆ ಒಂದು ಮನೆಯ ಅಧಿವೇಶನ ನಡೆಸಿ ಎರಡೂ ಹೌಸ್‌ಗಳನ್ನು ಬಳಸಲು ಯೋಚಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸದನದ ಜೊತೆಗೆ ಗ್ಯಾಲರಿ ಕೂಡ ಬಳಸಿದರೆ ಲೋಕಸಭೆಯಲ್ಲಿ 290 ಹಾಗೂ ರಾಜ್ಯ ಸಭೆಯಲ್ಲಿ 170 ಜನರನ್ನು ಕೂರಿಸಬಹುದಂತೆ.

ಕಾಲು ನೋವಿದ್ರೂ ಲಡಾಕ್, ಅಮರ್‌ನಾಥ್‌ಗೆ ಹೋಗಿ ಬಂದ ರಾಜನಾಥ್‌ ಸಿಂಗ್..!

ರಾಜ್ಯಸಭೆಯಲ್ಲಿ ಹೇಗೋ ಕಲಾಪ ನಡೆಸಬಹುದು, ಆದರೆ ಲೋಕಸಭೆಯಲ್ಲಿ ಉಳಿದ 80 ಸಂಸದರು ಮತ್ತು ಅಧಿಕಾರಿಗಳನ್ನು ಕೂರಿಸುವುದೇ ತಲೆನೋವು. ಆಗ ಏಕಕಾಲಕ್ಕೆ ಲೋಕಸಭಾ ಸೆಂಟ್ರಲ… ಹಾಲ… ಮತ್ತು ರಾಜ್ಯಸಭೆ ಬಳಸಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ಆಗುತ್ತಿದ್ದು, ಇದಕ್ಕಾಗಿ ತಾಂತ್ರಿಕ ಪರಿಣತರ ಜೊತೆ ಕೂಡ ಮಾತುಕತೆ ನಡೆದಿದೆ. ನಿಯಮಗಳ ಪ್ರಕಾರ ಸೆಪ್ಟೆಂಬರ್‌ 22ರೊಳಗೆ ಅಧಿವೇಶನ ಕರೆಯುವುದು ಅನಿವಾರ್ಯ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!