ಪ್ಯಾಂಗಾಂಗ್‌ನಿಂದಲೂ ಹಿಂದೆ ಸರಿದ ಚೀನಾ ಸೇನೆ!

By Kannadaprabha NewsFirst Published Jul 11, 2020, 8:00 AM IST
Highlights

 ಭಾರತದ ಒತ್ತಡ, ಪ್ಯಾಂಗಾಂಗ್‌ನಿಂದಲೂ ಚೀನಾ ಸೇನೆ ಹಿಂತೆಗೆತ ಶುರು| ಆದರೆ ಬೆಟ್ಟದ ಮೇಲೆ ಈಗಲೂ ಉಪಸ್ಥಿತಿ

ನವದೆಹಲಿ(ಜು.11): ಭಾರತದ ಒತ್ತಡದ ನಂತರ ಪೂರ್ವ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯ ವಿವಾದಿತ ಸ್ಥಳಗಳಿಂದ ಹಿಂದೆ ಸರಿಯಲು ಆರಂಭಿಸಿದ್ದ ಚೀನಾ ಸೇನೆ ಇದೀಗ ನಾಲ್ಕನೇ ವಿವಾದಿತ ಸ್ಥಳವಾದ ಪ್ಯಾಂಗಾಂಗ್‌ ಸರೋವರದಿಂದಲೂ ಹಿಂದೆಗೆದಿದೆ.

ಕಂಪನಿ ಟೀ ಶರ್ಟ್ ಸುಟ್ಟು ಹಾಕಿದ ಝೊಮೇಟೋ ಸಿಬ್ಬಂದಿ..! ಗ್ರಾಹಕರಿಗೆ ಹೇಳಿದ್ದಿಷ್ಟು

ಶುಕ್ರವಾರದ ವೇಳೆಗೆ ಪ್ಯಾಂಗಾಂಗ್‌ ತ್ಸೋ ದಂಡೆಯ 4ನೇ ಫಿಂಗರ್‌ ಪ್ರದೇಶದಿಂದ ಚೀನಾ ಹಿಂದಕ್ಕೆ ಸರಿದಿದೆ. ಆದರೆ, 5ನೇ ಫಿಂಗರ್‌ ಪ್ರದೇಶದಲ್ಲಿ ಬೆಟ್ಟದ ಮೇಲೆ ತನ್ನ ಸೈನಿಕರು ಹಾಗೂ ವಾಹನಗಳನ್ನು ಈಗಲೂ ಹಾಗೇ ಇರಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಇತರ ಮೂರು ವಿವಾದಿತ ಪ್ರದೇಶಗಳಾಗಿರುವ ಗಲ್ವಾನ್‌ ಕಣಿವೆ, ಗೋಗ್ರಾ ಹಾಗೂ ಹಾಟ್‌ ಸ್ಟ್ರಿಂಗ್‌ ಪ್ರದೇಶಗಳಿಂದ ಚೀನಾ ಸೇನೆ ಸಂಪೂರ್ಣ ಹಿಂದಕ್ಕೆ ಸರಿದಿದೆ. ಪ್ಯಾಂಗಾಂಗ್‌ ತ್ಸೋದ ಎಲ್ಲಾ ಫಿಂಗರ್‌ ಪ್ರದೇಶಗಳಿಂದ ಹಿಂದಕ್ಕೆ ಸರಿದರೆ ಚೀನಾ ಸೇನೆ ಪೂರ್ಣ ಪ್ರಮಾಣದಲ್ಲಿ ವಿವಾದಿತ ಸ್ಥಳಗಳಿಂದ ಹಿಂದಕ್ಕೆ ಸರಿದಂತಾಗುತ್ತದೆ.

ಪೂರ್ಣ ಸೇನೆ ವಾಪಸಾತಿಗೆ ಒಪ್ಪಿಗೆ:

ಭಾರತ - ಚೀನಾ ನಡುವೆ ಶುಕ್ರವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆದಿದ್ದು, ಅದರಲ್ಲಿ ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಶಾಂತಿ ಕಾಪಾಡಲು ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ.

ಚೀನಾ ಮತ್ತೆ ಕುತಂತ್ರ: ಶಾಂತಿ ಮಂತ್ರ ಪಠಿಸುತ್ತಲೇ ಹೆಲಿಪ್ಯಾಡ್‌ ನಿರ್ಮಾಣ!

ಅಮೆರಿಕಕ್ಕೆ ರಾಜನಾಥ್‌ ಮಾಹಿತಿ:

ಚೀನಾ ಜೊತೆಗಿನ ಗಡಿ ಘರ್ಷಣೆಯ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಮೆರಿಕಕ್ಕೆ ಶುಕ್ರವಾರ ಮಾಹಿತಿ ನೀಡಿದ್ದಾರೆ. ಅಮೆರಿಕದ ರಕ್ಷಣಾ ಸಚಿವ ಮಾರ್ಕ್ ಎಸ್ಪರ್‌ ಜೊತೆ ನಡೆದ ದೂರವಾಣಿ ಮಾತುಕತೆಯಲ್ಲಿ ಪೂರ್ವ ಲಡಾಖ್‌ನ ಘರ್ಷಣೆ ಹಾಗೂ ಚೀನಾ ಜೊತೆಗಿನ ಒಟ್ಟಾರೆ ಗಡಿ ವಿವಾದದ ಕುರಿತು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!