ಭಾರತ ಗಡಿಯಲ್ಲಿ ಖ್ಯಾತೆ ತೆಗೆದು ಬೇಳೆ ಬೇಯಿಸಿಕೊಳ್ಳಲು ಪ್ಲಾನ್ ಮಾಡಿದ್ದ ಚೀನಾಗೆ ಎಲ್ಲವೂ ತಿರುಗುಬಾಣವಾಗಿದೆ. ಆರಂಭದಲ್ಲೇ ಭಾರತೀಯ ಸೇನೆ ಹೊಡೆತ ನೀಡಿದರೆ, ಸರ್ಕಾರ ಚೀನಾ ಆ್ಯಪ್ ಬ್ಯಾನ್, ಹಲವು ಒಪ್ಪಂದ ರದ್ದು ಮಾಡಿತು. ನಾಗರೀಕರು ಚೀನಾ ವಸ್ತು ಬಹಿಷ್ಕರಿಸಿ ತಿರುಗೇಟು ನೀಡಿದ್ದಾರೆ. ಇದೀಗ ನಾಕೌಪಡೆ ಚೀನಾಗೆ ಸ್ಪಷ್ಟ ಸಂದೇಶವೊಂದು ರವಾನೆ ಮಾಡುತ್ತಿದೆ.
ನವದೆಹಲಿ(ಜು.10): ಭಾರತ ಹಾಗೂ ಚೀನಾ ಗಡಿ ಸಂಘರ್ಷ ಎರಡು ದೇಶದ ನಡುವೆ ಯದ್ಧದ ಕಾರ್ಮೋಡವನ್ನೇ ಸೃಷ್ಟಿಸಿತ್ತು. ಚೀನಾ ಕುತಂತ್ರಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದು ಇಡೀ ಭಾರತದಲ್ಲಿ ಆಕ್ರೋಶದ ಕಿಡಿ ಹಚ್ಚಿತ್ತು. ಸೇನೆ ತಕ್ಕ ಪ್ರತ್ಯುತ್ತರ ನೀಡಿ ಸುಮಾರು 35 ಚೀನಾ ಸೈನಿಕರನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿತ್ತು. ಇತ್ತ ಸರ್ಕಾರ ಚೀನಾ ಜೊತೆಗಿನ ಹಲವು ಒಪ್ಪಂದ ರದ್ದು ಮಾಡಿತು. ಆ್ಯಪ್ ಬ್ಯಾನ್ ಮಾಡಿತು. ಚೀನಾ ವಸ್ತಗಳನ್ನು ಜನರು ಬಹಿಷ್ಕರಿಸಿದರು. ಇದೀಗ ಭಾರತೀಯ ನೌಕಾಪಡೆ, ಆಸ್ಟ್ರೇಲಿಯಾ ನೌಕಾಪಡೆಯನ್ನು ಆಹ್ವಾನಿಸಲು ಪ್ಲಾನ್ ಮಾಡಿದೆ.
ಲಡಾಖ್ ಸಂಘರ್ಷದ ಬೆನ್ನಲ್ಲೇ ಭಾರತೀಯ ಸೇನೆ ಸೇರಿಕೊಂಡ ಅಪಾಚೆ, ಚಿನೊಕ್ ಮಿಲಿಟರ್ ಹೆಲಿಕಾಪ್ಟರ್!.
ವಾರ್ಷಿಕ ನೌಕಾಪಡೆಯ ಸಮರಭ್ಯಾಸಕ್ಕೆ ಈ ಬಾರಿ ಆಸ್ಟ್ರೇಲಿಯಾ ಯುದ್ಧ ನೌಕೆಗೆ ಭಾರತ ಆಹ್ವಾನ ನೀಡಲು ನಿರ್ಧರಿಸಿದೆ. ಮಲಬಾರ್ ನೌಕಾಪಡೆ ವಾರ್ಷಿಕ ಸಮರಭ್ಯಾಸಕ್ಕೆ ಅಮೆರಿಕ ಹಾಗೂ ಜಪಾನ್ ಪಾಲ್ಗೊಂಡಿದೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಯುದ್ಧ ನೌಕೆಗೆ ಆಹ್ವಾನ ನೀಡುತ್ತಿದೆ.
ಚೀನಾ ವಿರುದ್ಧ ನಿಂತ ಭಾರತದ ಬಗ್ಗೆ ಹೆಮ್ಮೆ ಇದೆ: ಅಮೆರಿಕದ ಸೆನೆಟರ್ ಕೆನಡಿ!...
ಬೇ ಆಫ್ ಬೆಂಗಾಲ್ ತೀರದಲ್ಲಿ ನಡೆಯುವ ನಾಕೌಪಡೆ ಸಮರಭ್ಯಾಸಕ್ಕೆ ಸಿದ್ಧತೆ ಆರಂಭವಾಗಿದೆ. ಭಾರತದ ನೌಕಾಪಡೆ ಸಮರಭ್ಯಾಸ ಸದಸ್ಯರಾದ ಆಸ್ಟ್ರೇಲಿಯಾ ಹಾಗೂ ಜಪಾನ್ ಕೂಡ ಆಸ್ಟ್ರೇಲಿಯಾ ಆಹ್ವಾನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಚೀನಾ ವಿರುದ್ಧ ದಿಗ್ಗಜ ರಾಷ್ಟ್ರಗಳೇ ಒಟ್ಟಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ನೌಕಾಪಡೆಯ ಆಹ್ವಾನಕ್ಕೆ ಬೇಕಾದ ಸಹಕಾರನ್ನು ಕೇಂದ್ರ ಸರ್ಕಾರ ನೀಡಿದೆ. ಈಗಾಗಲೇ ಇಮೇಲ್ ಮೂಲಕ ಆಸ್ಟ್ರೇಲಿಯಾ ನಾಕೌಪಡೆಗೆ ಮಾಹಿತಿ ನೀಡಲಾಗಿದೆ. ಅಧೀಕೃತ ಪತ್ರ ಶೀಘ್ರದಲ್ಲೇ ರವಾನೆಯಾಗಲಿದೆ.