
ಮುಂಬೈ(ಅ.22): ಮುಂಬೈನ(Mumbai) ಲಾಲ್‌ಬಾಗ್(Lalbaug) ಪ್ರದೇಶದ 60 ಅಂತಸ್ತಿನ ಅವಿಘ್ನ ಪಾರ್ಕ್ ಕಟ್ಟಡದ 19 ನೇ ಮಹಡಿಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ದಟ್ಟ ಹೊಗೆ ಆವರಿಸಿದ್ದು, ಕಟ್ಟಡದಿಂದ ಅಗ್ನಿ ಜ್ವಾಲೆಗಳು ಎದ್ದಿವೆ. ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಬೆಂಕಿಯನ್ನು(Fire) ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಅದರ ನಿಯಂತ್ರಣಕ್ಕೆ 14 ಅಗ್ನಿಶಾಮಕ ವಾಹನಗಳು ಬಂದಿದ್ದವು. ಪ್ರಸ್ತುತ, ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದಲ್ಲಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಘಟನೆಯ ಶಾಕಿಂಗ್ ವಿಡಿಯೋ ವೈರಲ್ ಆಗಿದ್ದು, ಒಬ್ಬ ವ್ಯಕ್ತಿ ತನ್ನನ್ನು ಉಳಿಸಿಕೊಳ್ಳಲು ಬಾಲ್ಕನಿಗೆ ನೇತಾಡಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು, ಆತ ಮೃತಪಟ್ಟಿದ್ದಾನೆ. ಈ ವ್ಯಕ್ತಿಯ ಹೆಸರನ್ನು ಅರುಣ್ ತಿವಾರಿ ಎಂದು ಹೇಳಲಾಗುತ್ತಿದೆ, ಅವರ ವಯಸ್ಸು 30 ವರ್ಷ.
ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಈ ಬಗ್ಗೆ ಮಾಹಿತಿ ನೀಡುತ್ತಾ ಅಗ್ನಿಶಾಮಕ ದಳದ ತಂಡವು ಬೆಂಕಿಯ ಸುದ್ದಿ ತಿಳಿದ ತಕ್ಷಣ ತಲುಪಿದೆ ಎಂದು ಹೇಳಿದರು. ಅನೇಕ ಜನರನ್ನು ಹೊರಕರೆತರಲಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿದೆ. ಬಾಲ್ಕನಿ ಮೂಲಕ ಕೆಳಗಿಳಿಯುತ್ತಿದ್ದ ವ್ಯಕ್ತಿ ಗಾಬರಿಯಿಂದ ಜಿಗಿದಿದ್ದಾನೆ. ಈ ವೇಳೆ ಮೃತಪಟ್ಟಿದ್ದಾನೆ. ಇದರಲ್ಲಿ ಅಗ್ನಿಶಾಮಕ ದಳದ ತಂಡದ ತಪ್ಪು ಎನ್ನಲು ಸಾಧ್ಯವಿಲ್ಲ. ಹೀಗಾಗಿ ತಪ್ಪು ಮಾಹಿತಿಯನ್ನು ಹರಡಬೇಡಿ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ