Latest Videos

ಕೋಚಿಂಗ್ ಸೆಂಟರ್‌ಗೆ ಬೆಂಕಿ: ಜೀವ ಉಳಿಸಿಕೊಳ್ಳಲು ಕೇಬಲ್ ವೈರ್‌ ಹಿಡಿದಿಳಿದ ವಿದ್ಯಾರ್ಥಿಗಳು

By Anusha KbFirst Published Jun 15, 2023, 6:42 PM IST
Highlights

ರಾಷ್ಟ್ರ ರಾಜಧಾನಿಯಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದ್ದು, ಈ ವೇಳೆ ವಿದ್ಯಾರ್ಥಿಗಳು ಕೇಬಲ್ ವೈರ್ ಬಳಸಿ ಕಟ್ಟಡದಿಂದ ಕೆಳಗಿಳಿದು ಜೀವ ರಕ್ಷಿಸಿಕೊಂಡಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಗ್ನಿ ಅವಘಡವೊಂದು ಸಂಭವಿಸಿದ್ದು, ಈ ವೇಳೆ ವಿದ್ಯಾರ್ಥಿಗಳು ಕೇಬಲ್ ವೈರ್ ಬಳಸಿ ಕಟ್ಟಡದಿಂದ ಕೆಳಗಿಳಿದು ಜೀವ ರಕ್ಷಿಸಿಕೊಂಡಿದ್ದಾರೆ. ದೆಹಲಿಯ ಮುಖರ್ಜಿ ನಗರದ ಕೋಚಿಂಗ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಕೇಬಲ್ ವೈರ್ ಬಳಸಿ ಒಬ್ಬೊಬ್ಬರಾಗಿ ಕೆಳಗಿಳಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮುಖರ್ಜಿ ನಗರದ (Mukharji nagar)ಬಾತ್ರಾ ಸಿನಿಮಾ ಪಕ್ಕದ ಜ್ಞಾನ ಕಟ್ಟಡದಲ್ಲಿರುವ ಸಂಸ್ಕೃತಿ ಕೋಚಿಂಗ್ ಸೆಂಟರ್‌ನಲ್ಲಿ (Samskruti Coaching center) ಮಧ್ಯಾಹ್ನ 12 ಗಂಟೆ ವೇಳೆ ಈ ಘಟನೆ ನಡೆದಿದೆ.  ಬೆಂಕಿ ಕಾಣಿಸಿಕೊಂಡ ಕೂಡಲೇ ಕೋಚಿಂಗ್ ಸೆಂಟರ್‌ನ ಒಳಗಿದ್ದ ವಿದ್ಯಾರ್ಥಿಗಳು ಅಲ್ಲೇ ಸಿಲುಕಿಕೊಂಡಿದ್ದು, ಅನೇಕ ವಿದ್ಯಾರ್ಥಿಗಳು  ಮೂರು ಮಹಡಿಯ ಕಟ್ಟಡದಲ್ಲಿ ನೇತಾಡುತ್ತಿದ್ದ ಕೇಬಲ್ ವೈರ್‌ಗಳನ್ನು ಹಿಡಿದು ಕೆಳಗೆ ಇಳಿಯುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿದ ಕೂಡಲೇ  11 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ (Fire)ನಂದಿಸಿವೆ. ಕಟ್ಟಡದಲ್ಲಿ ಸಿಲುಕಿದ್ದ ಎಲ್ಲರನ್ನು ರಕ್ಷಣೆ ಮಾಡಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಯೂ ಮುಗಿದಿದೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ. 

ಕಾಲೇಜು ಉದ್ಯೋಗ ತೊರೆದು ಕಾಶ್ಮೀರಿ ಯುವಕರ ಬದುಕು ರೂಪಿಸಲು ನಿಂತ ಸಾಹಸಿ!

ಆದರೆ ಬೆಂಕಿ ಕಾಣಿಸಿಕೊಂಡ ನಂತರ ಕೆಲವು ವಿದ್ಯಾರ್ಥಿಗಳು ಪ್ರಾಣ ಉಳಿಸಿಕೊಳ್ಳಲು ಓಡುವ ವೇಳೆ ಕೆಲವರಿಗೆ ಗಾಯಗಾಗಿವೆ. ಆದರೆ ಕಟ್ಟಡದಲ್ಲಿ ಯಾರೂ ಸಿಲುಕಿ ಹಾಕಿಕೊಂಡಿಲ್ಲ, ಬೆಂಕಿ ಕಾಣಿಸಿಕೊಳ್ಳುವ ಮೊದಲು ಕಟ್ಟಡದ ವಿದ್ಯುತ್ ಮೀಟರ್‌ ಬೋರ್ಡ್‌ನಿಂದ ಹೊಗೆ ಕಾಣಿಸಿಕೊಂಡ ನಂತರ ಅಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ದೆಹಲಿ ಪೊಲೀಸ್ ಇಲಾಖೆಯ ಪಿಆರ್‌ಒ ಸುಮನ್ ನಲ್ವಾ ಹೇಳಿದ್ದಾರೆ.  ಇನ್ನು ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ದೇಶದಲ್ಲಿ ಹಲವು ಅಗ್ನಿ ಅವಘಡಗಳು ಸಂಭವಿಸಿದ ನಂತರವು ಬೆಂಕಿ ಸಂಭವಿಸಿದಾಗ ಪಾರಾಗುವ ಸುರಕ್ಷತಾ ನಿಯಮಗಳನ್ನು ಕಟ್ಟಡ ನಿರ್ಮಾಣ ಮಾಡುವ ವೇಳೆ ಪಾಲಿಸುತ್ತಿಲ್ಲ ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. 

ಒಡಿಶಾದಲ್ಲಿ ಮತ್ತೊಂದು ಅವಘಡ: ಇದ್ದಕ್ಕಿದ್ದಂತೆ ಎಕ್ಸ್‌ಪ್ರೆಸ್‌ ರೈಲಿಗೆ ಹೊತ್ತಿಕೊಂಡ ಬೆಂಕಿ; ಕಂಗಾಲಾದ ಪ್ರಯಾಣಿಕರು

click me!