ಕೆಲ ಹೊತ್ತಲ್ಲೇ ಭಾರತಕ್ಕೆ ಅಪ್ಪಳಿಸಲಿದೆ ಬಿಪೊರ್‌ಜಾಯ್ ಸೈಕ್ಲೋನ್, ಹಲವು ತೀರ ಪ್ರದೇಶ ಮುಳುಗಡೆ!

By Suvarna News  |  First Published Jun 15, 2023, 6:28 PM IST

150 ಕಿಲೋಮೀಟರ್ ವೇಗದಲ್ಲಿ ಬಿಪೊರ್‌ಜಾಯ್ ಚಂಡಮಾರುತ ಗುಜರಾತ್ ಕರಾವಳಿ ತೀರಪ್ರದೇಶಕ್ಕೆ ಅಪ್ಪಳಸಲಿದೆ. 1 ಲಕ್ಷಕ್ಕೂ ಹೆಚ್ಚು ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ. ಈಗಾಗಲೇ ಜಾಮಾನಗರ ಸೇರಿದಂತೆ ಹಲವು ತೀರ ಪ್ರದೇಶ ಮುಳುಗಡೆಯಾಗಿದೆ.
 


ಜಾಮಾನಗರ(ಜೂ.15): ಬಿಪೊರ್‌ಜಾಯ್ ಚಂಡಮಾರುತ ಭಾರತೀಯರ ಖುಷಿಯನ್ನ ಕಸಿದುಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಕೆಲವೇ ಹೊತ್ತಲ್ಲಿ ಭಾರತದ ಗುಜರಾತ್‌ನ ಕಛ್‌ ಜಿಲ್ಲೆಯ ಜಖಾವು ಬಂದ​ರಿಗೆ ಚಂಡಮಾರುತ ಅಪ್ಫಳಿಸಲಿದೆ. ಸುಮಾರು 100 ರಿಂದ 150 ಕಿಲೋಮೀಟರ್ ವೇಗದಲ್ಲಿ ಸ್ಲೈಕ್ಲೋನ್ ಅಪ್ಪಳಸಲಿದೆ ಎಂದು ವರದಿಗಳು ಹೇಳುತ್ತಿದೆ. ಈಗಾಗಲೇ ಗುಜರಾತ್ ತೀರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಜಾಮಾನಗರ ಕಡಲ ತೀರ ಪ್ರದೇಶದಲ್ಲಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ತೀರ ಪ್ರದೇಶಗಳನ್ನು ಸಮುದ್ರ ಆವರಿಸಿಕೊಂಡಿದೆ. ಹಲವು ಪ್ರದೇಶಗಳಿಗೆ ನೀರು ನುಗ್ಗಿ ಮುಳುಗಡೆಯಾಗಿದೆ. 

1 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಬಿಪೊರ್‌ಜಾಯ್ ಚಂಡಮಮಾರುತ ಕೆಟಗರಿ 3 ಎಂದು ವಿಭಾಗಿಸಲಾಗಿದೆ. ಕಾರಣ ಈ ಚಂಡಮಾರುತ ಭಾರತದ ತೀರ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ 100 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹಲೆವೆಡೆ ಭಾರಿ ಮಳೆಯಾಗುತ್ತಿದೆ. 

Tap to resize

Latest Videos

ಗುಜರಾತ್‌ಗೆ ಅಪ್ಪಳಿಸಲಿದೆ ಭೀಕರ ಚಂಡಮಾರುತ; ಹಲವೆಡೆ ಆರೆಂಜ್‌ ಅಲರ್ಟ್‌: ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ

ಬಿಪೊರ್‌ಜಾಯ್ ಚಂಡಮಾರುತ ವಾಯವ್ಯ ಭಾಗ​ದತ್ತ ಮುನ್ನು​ಗ್ಗು​ತ್ತಿದ್ದು, ಗಂಟೆಗೆ 150 ಕಿ.ಮೀ. ವೇಗದ ಬಿರು​ಗಾ​ಳಿ​ಯೊಂದಿಗೆ ಇಂದು ಸಂಜೆ ಜಖಾವು ಬಂದ​ರಿಗೆ ಅಪ್ಪ​ಳಿ​ಸ​ಲಿದೆ’ ಎಂದು ಹವಾ​ಮಾನ ಇಲಾಖೆ ಹೇಳಿ​ದೆ.  ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಹತ್ವದ ಸಭೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಗುಜರಾತ್ ತೀರ ಪ್ರದೇಶ ಮಾತ್ರವಲ್ಲ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ತೀರ ಪ್ರದೇಶದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.

ಚಂಡ​ಮಾ​ರುತ ಅಬ್ಬ​ರಿ​ಸು​ತ್ತಿ​ರುವ ಕಾರಣ ರಕ್ಷಣಾ ಕಾರ್ಯ ಭರ​ದಿಂದ ಸಾಗಿದೆ. ರಕ್ಷಣಾ ಸಚಿವ ರಾಜ​ನಾಥ ಸಿಂಗ್‌ ಅವರು, ‘ಎಲ್ಲ ಸೇನಾ​ಪ​ಡೆ​ಗಳು ಸನ್ನದ್ಧ ಸ್ಥಿತಿ​ಯ​ಲ್ಲಿ​ರ​ಬೇ​ಕು. ರಕ್ಷ​ಣೆಗೆ ಧಾವಿ​ಸ​ಬೇ​ಕು’ ಎಂದು ಮೂರೂ ರಕ್ಷಣಾ ಮುಖ್ಯ​ಸ್ಥ​ರಿಗೆ ಸೂಚಿ​ಸಿ​ದ್ದಾ​ರೆ. ಇದರ ಬೆನ್ನನ್ನೇ ಸೇನೆ, ನೌಕಾ​ಪಡೆ ಹಾಗೂ ಬಿಎ​ಸ್‌ಎಫ್‌ ತಂಡ​ಗ​ಳನ್ನು ನಿಯೋ​ಜಿ​ಸ​ಲಾ​ಗಿ​ದೆ. ಇದೇ ವೇಳೆ, ಗುಜ​ರಾತ್‌ ಸರ್ಕಾ​ರ ಸತ 3ನೇ ದಿನವೂ ಕರಾ​ವ​ಳಿ​ಯಿಂದ 10 ಕಿ.ಮೀ. ಅಂತ​ರ​ದ​ಲ್ಲಿನ ಅಪಾ​ಯ​ಕಾರಿ ವಲ​ಯ​ಗ​ಳಲ್ಲಿ ರಕ್ಷಣಾ ಕಾರ್ಯ ಮುಂದು​ವ​ರಿ​ಸಿದೆ. ‘ಬುಧ​ವಾ​ರ​ದ​ವ​ರೆಗೆ 50 ಸಾವಿರ ಜನ​ರನ್ನು ಸುರ​ಕ್ಷಿತ ಶಿಬಿ​ರ​ಗ​ಳಿ​ಗೆ ಸ್ಥಳಾಂತ​ರಿ​ಸ​ಲಾ​ಗಿ​ದೆ. ಇನ್ನೂ 5 ಸಾವಿರ ಜನರನ್ನು ಗುರು​ವಾರ ಬೆಳ​ಗ್ಗೆ​ಯೊ​ಳಗೆ ಸ್ಥಳಾಂತ​ರಿ​ಸು​ತ್ತೇ​ವೆ​’ ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.

ಗುಜರಾತ್‌ಗೆ ಅಪ್ಪಳಿಸಲಿದೆ ಅತಿ ಭೀಕರ ಚಂಡಮಾರುತ: ಡೆಡ್ಲಿ ಸೈಕ್ಲೋನಾಗಿ ಪರಿವರ್ತನೆಯಾದ ಬಿಪೊರ್‌ಜೊಯ್‌

18 ಎನ್‌​ಡಿ​ಆ​ರ್‌​ಎಫ್‌ ತಂಡಗಳು, 12 ಎಸ್‌​ಡಿ​ಆ​ರ್‌​ಎಫ್‌, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರದ ತಂಡ​ಗಳು, 397 ವಿದ್ಯುತ್‌ ಇಲಾ​ಖೆಯ ತಂಡ​ಗ​ಳನ್ನು ರಕ್ಷಣಾ ಕೆಲಸಕ್ಕೆ ನಿಯೋ​ಜಿ​ಸ​ಲಾ​ಗಿದೆ. ಈಗಾ​ಗಲೇ ಹಲವು ಭಾಗ​ಗ​ಳಲ್ಲಿ ಬಿರು​ಗಾಳಿ ಕಾರಣ ವಿದ್ಯುತ್‌ ಸಂಪರ್ಕ ಕಡಿ​ತ​ಗೊಂಡಿದ್ದು, ಅಲ್ಲಿ ವಿದ್ಯುತ್‌ ಇಲಾಖೆ ತಂಡ​ಗಳು ಮರು ವಿದ್ಯುತ್‌ ಸಂಪ​ರ್ಕಕ್ಕೆ ಶ್ರಮಿ​ಸು​ತ್ತಿವೆ. ಮೊಬೈಲ್‌ ಹಾಗೂ ಸ್ಥಿರ ದೂರ​ವಾಣಿ ಸಂಪರ್ಕ ವ್ಯತ್ಯಯ ಆಗುವ ಸಾಧ್ಯತೆ ಇದೆ. ಹೀಗಾಗಿ ಸ್ಯಾಟ​ಲೈಟ್‌ ಫೋನ್‌​ಗ​ಳನ್ನು ರಕ್ಷಣಾ ತಂಡ​ಗ​ಳಿಗೆ ನೀಡ​ಲಾ​ಗಿ​ದೆ.
 

click me!