ದಾರಿತಪ್ಪಿಸುವ ಟ್ವೀಟ್, ಸೋನಿಯಾ ಗಾಂಧಿ ವಿರುದ್ಧ FIR ದಾಖಲು!

By Suvarna NewsFirst Published May 21, 2020, 5:26 PM IST
Highlights

ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಸ್ ದಾಖಲಾಗಿದೆ. ದಾರಿ ತಪ್ಪಿಸುವ, ಸುಳ್ಳು ಟ್ವೀಟ್ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೇಲೆ  FIR ದಾಖಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ಶಿವಮೊಗ್ಗ(ಮೇ.21): ಪ್ರಧಾನಿ ಮಂತ್ರಿ ಪರಿಹಾರ ನಿಧಿ ಹಣ ಕುರಿತು ದಾರಿತಪ್ಪಿಸುವ ಹಾಗೂ ಸುಳ್ಳು ಟ್ವೀಟ್ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಕೇಸ್ ದಾಖಲಾಗಿದೆ.  ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿ ಹಣ ದುರ್ಬಳಕೆ ಕುರಿತು ಸರಣಿ ಟ್ವೀಟ್ ಮಾಡಲಾಗಿದೆ. ಆದರೆ ಈ ಟ್ವೀಟ್ ಭಾರತ ಸರ್ಕಾರದ ವಿರುದ್ಧ ಅಪನಂಬಿಕೆ, ಸುಳ್ಳು ಆರೋಪ ಹಾಗೂ ನಾಗರೀಕರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಶಿವಮೊಗ್ಗದಲ್ಲಿ FIR ದಾಖಲಾಗಿದೆ.

ಸೋನಿಯಾ ಮಾನಹಾನಿ ಪ್ರಕರಣ: ಅರ್ನಬ್‌ಗೆ ಸಿಕ್ತು ಸುಪ್ರೀಂ ರಿಲೀಫ್

INC ಇಂಡಿಯಾ ಅಧಿಕೃತ ಕಾಂಗ್ರೆಸ್ ಖಾತೆ ಹೊಂದಿರುವ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರ ಕೆಲ ಕಾಂಗ್ರೆಸ್ ನಾಯಕ ವಿರುದ್ಧವೂ ಕೇಸ್ ದಾಖಲಾಗಿದೆ. ವಕೀಲ ಪ್ರವೀಣ್ ಕೆ.ವಿ ಈ ಕುರಿತು ಕೇಸ್ ದಾಖಲಿಸಿದ್ದಾರೆ.

FIRನಲ್ಲಿ ಉಲ್ಲೇಖಿಸಿರುವ ಮಾಹಿತಿ ಇಲ್ಲಿದೆ:
ದಿನಾಂಕ ಮೇ. 11 ರಂದು ಸಂಜೆ 6 ಗಂಟೆಗೆ ಕಾಂಗ್ರೆಸ್ ಅಧಿಕೃತ INC ಇಂಡಿಯಾ(ಕಾಂಗ್ರೆಸ್ ಅಧೀಕೃತ ಟ್ವಿಟರ್ ಖಾತೆ) ಎಂಬ ಟ್ವಿಟರ್ ಖಾತೆ ಹೊಂದಿರುವ  ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ, ಅಕ್ಬರ್ ರಸ್ತೆ, ನವದೆಹಲಿ ಕಚೇರಿಯಿಂದ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದು, ಈ ಟ್ವಿಟರ್ ಖಾತೆಯಿಂದ ಹಲವಾರು ಸಂದೇಶಗಳನ್ನು ಮಾನ್ಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ಭಾರತ ಸರ್ಕಾರದ ವಿರುದ್ಧ ಮಾಡಲಾಗಿದೆ.

ಪಿಎಂ ಕೇರ್ ನಿಧಿಯಿಂದ ಹಣ ದುರ್ಬಳಕೆಯಾಗುತ್ತಿದೆ ಎಂದು ಹೇಳಿದ್ದು ಈ ರೀತಿ ಸಂದೇಶಗಳನ್ನು ಹರಿಬಿಡುವ ಮೂಲಕ ಭಾರತ ಸರ್ಕಾರದ ವಿರುದ್ಧ ಅಪನಂಬಿಕೆ ಉಂಟುಮಾಡಿ, ಪ್ರಧಾನ ಮಂತ್ರಿ ಪಿಎಂ ಕೇರ್ ನಿಧಿಯಿಂದ ವೈಯುಕ್ತಿವಾಗಿ ಹಣ ಬಳಕೆ ಮಾಡಿಕೊಂಡಿದ್ದಾರೆ. ಹಾಗೂ ಬಡ ಜನರ ಉಪಯೋಗಕ್ಕೆ ಹಣವನ್ನು ಬಳಕೆ ಮಾಡುತ್ತಿಲ್ಲ ಎಂದು ಸರ್ಕಾರ ಹಾಗೂ ಪ್ರಧಾನ ಮಂತ್ರಿ ವಿರುದ್ಧ ಸುಳ್ಳು ಸಂದೇಶವನ್ನು ಟ್ವಿಟರ್‌ನಲ್ಲಿ ಹಾಕುವ ಮೂಲಕ ದೇಶದ ಜನರನ್ನು ಎತ್ತಿಕಟ್ಟುವ ಉದ್ದೇಶದಿಂದ ಹರಿಬಿಡಲಾಗಿದೆ. ಅದ್ದರಿಂದ ಕಾಂಗ್ರೆಸ್ ಅಧ್ಯಕ್ಷೆ, ಟ್ವಿಟರ್ ಖಾತೆ ಹಾಗೂ ನೌಕರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದೆ.

ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚ ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

ವಕೀಲ ಪ್ರವೀಣ ಕೆ.ವಿ. ನೀಡಿದ ದೂರಿನಿಂದ ಪೊಲೀಸಲು IPC ಸೆಕ್ಷನ್ 153 ಹಾಗೂ 505(1) (B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

click me!