ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು: ಕರಾವಳಿ ರಾಜ್ಯಗಳ ಜನರಿಗೆ ಲಾಭ

By Kannadaprabha News  |  First Published May 21, 2020, 11:57 AM IST

ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು| ಮತ್ಸ್ಯೋದ್ಯಮ ಉತ್ತೇಜನಕ್ಕೆ ಹೊಸ ಯೋಜನೆ| ಕರ್ನಾಟಕ ಸೇರಿ ಕರಾವಳಿ ರಾಜ್ಯಗಳ ಜನರಿಗೆ ಲಾಭ


ನವದೆಹಲಿ(ಮೇ.21): ದೇಶದ ಮತ್ಸ್ಯ ಉದ್ಯಮದ ಸುಸ್ಥಿರ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20,050 ಕೋಟಿ ರು. ವಿನಿಯೋಗಿಸುವ ಮಹತ್ವದ ಮತ್ಸ್ಯಸಂಪದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

2020-21ರಿಂದ 2024-25ವರೆಗಿನ 5 ವರ್ಷಗಳ ಆರ್ಥಿಕ ವರ್ಷದಲ್ಲಿ ಈ ಯೋಜನೆ ಜಾರಿ ಮಾಡುವುದಾಗಿ ಕಳೆದ ವರ್ಷ ಮಂಡಿಸಲಾದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಈ ಯೋಜನೆಗೆ ಕೇಂದ್ರವು 9407 ಕೋಟಿ ರು., ರಾಜ್ಯ ಸರ್ಕಾರ 4880 ಕೋಟಿ ರು. ಹಾಗೂ ಫಲಾನುಭವಿಗಳ ಪಾಲು 5763 ಕೋಟಿ ರು. ಸೇರಿರಲಿದೆ ಎಂದು ತಿಳಿಸಲಾಗಿದೆ. ಈ ಯೋಜನೆ ಕರಾವಳಿ ತೀರ ಹೊಂದಿರುವ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಲಕ್ಷಾಂತರ ಮೀನುಗಾರರಿಗೆ ಲಾಭ ನೀಡಲಿದೆ.

Tap to resize

Latest Videos

20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!

ಈ ಯೋಜನೆಯ ಉದ್ದೇಶಗಳು

- ಮೀನುಗಾರಿಕಾ ವಲಯದಲ್ಲಿ 15 ಲಕ್ಷ ನೇರ ಉದ್ಯೋಗಾವಕಾಶ ಸೃಷ್ಟಿ

- 2024ರೊಳಗೆ ಮೀನುಗಾರರು, ಈ ಉದ್ಯಮದಲ್ಲಿರುವವರ ಆದಾಯ ದ್ವಿಗುಣ

- ಸುಸ್ಥಿರ ಅಭಿವೃದ್ಧಿ ಮೂಲಕ 2024-25ರ ಒಳಗೆ 2.2 ಲಕ್ಷ ಟನ್‌ ಮೀನುಗಳ ಉತ್ಪಾದನೆ

- ಮೀನುಗಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಅವಕಾಶ

click me!