ಈ ಕಾರಣಗಳಿಗೆ ಬಿಜೆಪಿ 3ನೇ ಬಾರಿ ಅಧಿಕಾರಕ್ಕೆ ಬರುತ್ತೆ ಎಂದ ನಿರ್ಮಲಾ ಸೀತಾರಾಮನ್

By Mahmad Rafik  |  First Published May 23, 2024, 4:14 PM IST

ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ನೋಡಿದ ಜನರು ಮೂರನೇ ಬಾರಿಯೂ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಹೇಳಿದರು. 


ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಸರ್ಕಾರ ಮೂರನೇ ಬಾರಿಗೆ ರಚನೆಯಾಗಲಿದೆ. ದೇಶದ ಜನತೆ ಕೇಂದ್ರದಲ್ಲಿ ಸುಭದ್ರವಾದ ಸರ್ಕಾರ ನೋಡಲು ಇಷ್ಟಪಡುತ್ತಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಲೋಕಸಭಾ ಚುನಾವಣೆಯ ಕುರಿತ ಹಲವು ವಿಷಯಗಳನ್ನು ಹಂಚಿಕೊಂಡರು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ನೋಡಿದ ಜನರು ಮೂರನೇ ಬಾರಿಯೂ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ಹೇಳಿದರು. 

Tap to resize

Latest Videos

ನಾವೇ ಅಧಿಕಾರಕ್ಕೆ ಬರುತ್ತೇವೆ

ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜನರು ಬಹುಮತದ ಸ್ಥಿರ ಸರ್ಕಾರವನ್ನು ಬಯಸುತ್ತಾರೆ. ಕಳೆದ 10 ವರ್ಷಗಳಲ್ಲಿ ಪ್ರಧಾನಿಗಳು ಜನತೆಗೆ ಏನು ನೀಡಿದ್ದಾರೆ ಎಂಬುವುದು ದೇಶದ ಜನತೆಗೆ ನೀಡಿದ್ದಾರೆ. ಹಾಗಾಗಿ ಸರಳವಾಗಿ ಯಾವುದೇ ಅಡ್ಡಿಗಳಿಲ್ಲದೇ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸೀತಾರಾಮನ್ ಹೇಳಿದರು. 

ಇಂದು ಮತದಾನದ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಯುವ ಜನತೆ ಸರತಿ ಸಾಲಿನಲ್ಲಿ ನಿಂತು ವೋಟ್ ಹಾಕುತ್ತಿದ್ದಾರೆ. ಮತದಾನದ ಪ್ರಮಾಣವೂ ಸಹ ಏರಿಕೆಯಾಗಿದೆ. ದೇಶದ ಜನತೆಗೆ ಸರ್ಕಾರದ ಯೋಜನೆಗಳ ಲಾಭ ದೊರೆಯುತ್ತಿದ್ದು, ಹಾಗಾಗಿ ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿಯವರನ್ನು ನೋಡಲು  ಇಚ್ಛಿಸುತ್ತಿದ್ದಾರೆ  ಎಂದರು.

ಮದುವೆ ಮಂಟಪದಲ್ಲೇ ವಧುವಿಗೆ ಮುತ್ತಿಕ್ಕಿದ ವರ: ರಣಾಂಗಣವಾಯ್ತು ಮದ್ವೆ ಮನೆ

ರಾಹುಲ್ ಗಾಂಧಿ ಕ್ಷಮೆಗೆ ಆಗ್ರಹ

ಇದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಯಾವುದೇ ದಾಖಲೆಗಳಿದ ಆಧಾರರಹಿತವಾಗಿ ಚೆನ್ನಾಗಿ ಮಾತನಾಡುತ್ತಾರೆ. ರಾಹುಲ್ ಗಾಂಧಿ 2014-15ರಿಂದಲೂ ಇದೇ ರೀತಿ ಮಾತನಾಡುತ್ತಿದ್ದು, ಸುಪ್ರೀಂಕೋರ್ಟ್ ಮುಂದೆ ಹೋಗಿ ಕ್ಷಮೆಯಾಚಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಆಗ್ರಹಿಸಿದರು. 

ಬುಡಕಟ್ಟು ವರ್ಗದ ಜನತೆಗೆ ಕೇಂದ್ರ ಸರ್ಕಾರ ನೀಡಿದ ಯೋಜನೆಗಳ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಿದರು. ಖನಿಜ ಕಾಯಿದೆ 201ರ ಪ್ರಕಾರ, ಜಿಲ್ಲಾ ಖನಿಜ ನಿಧಿಯನ್ನು ಅಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳಿಗೆ ಹಿಂದಿರುಗಿಸಲಾಗಿದೆ. ಈ ಯೋಜನೆ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗ ಉಪಯುಕ್ತವಾಗಿದೆ. ಇದ್ಯಾವಾದೂ ಕಾಂಗ್ರೆಸ್ ಆಡಳಿತದಲ್ಲಿ ಆಗಿರಲಿಲ್ಲ. 

'ತುಂಬಾ ನೀರು ಇಟ್ಕೊಂಡಿರಿ, ಜೂನ್‌ 4ಕ್ಕೆ ಬೇಕಾಗುತ್ತೆ..' ಟೀಕೆ ಮಾಡುವವರ ಕಾಲೆಳೆದ ಪ್ರಶಾಂತ್‌ ಕಿಶೋರ್‌!

ಪಿಎಂ ಮೋದಿ ಹೇಳಿಕೆಗೆ ಪ್ರತಿಕ್ರಿಯೆ

ಕಾಂಗ್ರೆಸ್ ಮತ್ತು ಐಎನ್‌ಡಿಐಎ ಒಂದು ವರ್ಗದ ತುಷ್ಟೀಕರಣಕ್ಕೆ ಮುಂದಾಗಿದೆ ಎಂದು ಪ್ರಧಾನಿ ಮೋದಿ ಅವರ ಆಸ್ತಿಯನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಮತ್ತು ನುಸುಳಕೋರರಿಗೆ ಹಂಚಿಕೆ ಮಾಡಲಾಗುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಪ್ರಧಾನಿ ಮೋದಿ ಹೇಳಿದ್ದೇನು?

ರಾಜಸ್ಥಾನದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಸಂಪನ್ಮೂಲಗಳಿಗೆ ಅಲ್ಪಸಂಖ್ಯಾತರು ಮೊದಲು ಹಕ್ಕುದಾರರು ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ ಉಲ್ಲೇಖಿಸಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಂಪತ್ತು ಮರು ಹಂಚಿಕೆ ಮಾಡೋದಾಗಿ ಹೇಳಿದೆ. ನಿಮ್ಮ ಆಸ್ತಿ ಹೆಚ್ಚು ಮಕ್ಕಳು ಮತ್ತು ನುಸುಳುಕೋರರಿಗೆ ಇರೋರಿಗೆ ಹಂಚಿಕೆ ಆಗುತ್ತದೆ. ಇದಕ್ಕೆ ನಿಮ್ಮ ಸಮ್ಮತಿ ಇದೇಯೇ ಎಂದು ಪ್ರಧಾನಿಗಳು ಜನರನ್ನು ಕೇಳಿದ್ದರು.

click me!