
ನವದೆಹಲಿ(ಡಿ.16): ಚಿಕ್ಕ ವಯಸ್ಸಿನಲ್ಲಿ ಕಷ್ಟಗಳೆದುರಾದರೆ, ಜವಾಬ್ದಾರಿ ಎಂಬ ಭಾರದಿಂದ ನುಚ್ಚು ನೂರಾಗುತ್ತದೆ. ಒಂಭತ್ತು ವರ್ಷ ಬಾಲಕ ಅಂಕಿತ್‌ಗೂ ತನ್ನ ಊರು ಯಾವುದೆಂದು ನೆನಪಿಲ್ಲ. ಆದರೆ ಆ ಪುಟ್ಟ ಬಾಲಕನಿಗೆ ತನ್ನ ತಂದೆ ಜೈಲಿನಲ್ಲಿದ್ದಾರೆಂದು ಗೊತ್ತು. ಅತ್ತ ತಾಯಿಯೀ ಈ ಪುಟ್ಟ ಬಾಲಕನನ್ನು ಏಕಾಂಗಿಯಾಗಿ ಬಿಟ್ಟು ತೆರಳಿದ್ದಾರೆ. ಹೌದು ಇದನ್ನು ಬಿಟ್ಟು ಆತನಿಗೆ ಬೇರೇನೂ ತಿಳಿಸಿದಿಲ್ಲ. ಸದ್ಯ ಈ ಬಾಲಕ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಬಲೂನ್ ಮಾರುತ್ತಾ ಜೀವನ ಸಾಗಿಸುತ್ತಿದ್ದಾನೆ. ಫುಟ್‌ಪಾತ್‌ನಲ್ಲಿ ತನ್ನ ಏಕೈಕ ಗೆಳೆಯ(ನಾಯಿ) ಜೊತೆ ಮಲಗುತ್ತಾನೆ. ಈ ನಾಯಿಮರಿಯೂ ಆತನನ್ನು ಬಿಟ್ಟು ದೂರ ಉಳಿಯುವುದಿಲ್ಲ.
ದಿಕ್ಕಿಲ್ಲದವನಿಗೆ ಸಾಕ್ಷಾತ್ ದೇವರಾದ ಡಾಕ್ಟರ್: ಕೊಪ್ಪಳ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ಟೈಮ್ಸ್ ಆಫ್ ಇಂಡಿಯಾ ವರದಿಯನ್ವಯ ಕಳೆದ ಕೆಲ ವರ್ಷಗಳಿಂದ ಅಂಕಿತ್ ಹೀಗೇ ಜೀವನ ಸಾಗಿಸುತ್ತಿದ್ದಾನೆ. ದಿನವಿಡೀ ಸಂಪಾದಿಸಿದ ಹಣದಿಂದ ತನಗೆ ಹಾಗೂ ತನ್ನ ಮುದ್ದಿನ ಶ್ವಾನ ಡ್ಯಾನಿ ಊಟ ಖರೀದಿಸುತ್ತಾನೆ. ಇನ್ನು ಈ ಬಾಲಕ ಕೆಲಸ ಮಾಡುವ ಅಂಗಡಿ ಮಾಲಿಕ ಈತನ ಬಗ್ಗೆ ಮಾಹಿತಿ ನೀಡುತ್ತಾ ಅಂಕಿತ್ ಅಂಗಡಿಯಲ್ಲಿ ಕೆಲಸ ಮಾಡುವವರೆಗೂ ಡ್ಯಾನಿ ಯಾವುದಾದರೂ ಮೂಲೆಯಲ್ಲಿ ಕುಳಿತುಕೊಂಡಿರುತ್ತದೆ. ಅಂಕಿತ್ ಯಾವತ್ತೂ ಯಾವುದನ್ನೂ ಸುಖಾ ಸುಮ್ಮನೆ ಫ್ರೀಯಾಗಿ ತೆಗೆದುಕೊಳ್ಳುವುದಿಲ್ಲ. ತನ್ನ ನಾಯಿಗಾಗಿಯೂ ಹಾಲನ್ನು ಯಾರಿಂದಲೂ ಕೇಳಿ ಪಡೆಯುವುದಿಲ್ಲ ಎಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಯಾರೋ ಒಬ್ಬರು ಬಂದ್ ಆದ ಅಂಗಡಿ ಎದುರು ಅಂಕಿತ್ ಹಾಗೂ ನಾಯಿಯೊಂದು ಹೊದಿಕೆ ಹೊದ್ದು ಮಲಗಿರುವುದನ್ನು ನೋಡಿದ್ದಾರೆ. ಆತ ಅದನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ ಹಾಗೂ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಬಳಿಕ ಈ ವಿಚಾರ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಆಡಳಿತಾಧಿಕಾರಿಗಳು ಬಾಲಕನ್ನು ಹುಡುಕಾಡಿದ್ದಾರೆ. ಸೋಮವಾರ ಈತನನ್ನು ಪತ್ತೆ ಹಚ್ಚಿದ್ದಾರೆ.
ಅಂಕಿತ್ ವಯಸ್ಸು ಈಗಿನ್ನೂ 9 ರಿಂದ 10 ಆಗಿರಬಹುದು. ಸದ್ಯ ಮುಜಫ್ಫರ್‌ನಗರ ಪೊಲೀಸರು ಈತನ ಆರೈಕೆ ಮಾಡುತ್ತಿದ್ದಾರೆ.
ಇನ್ನು ಬಾಲಕನ ಸಂಬಂಧಿಕರನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದು, ಬಾಲಕನ ಫೋಟೋಗಳನ್ನು ಆಸು ಪಾಸಿನ ಜಿಲ್ಲೆಗಳಿಗೆ ಕಳುಹಿಸಿಕೊಟ್ಟಿದ್ದೇನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ