
ನವದೆಹಲಿ(ಡಿ.16): ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರ ‘ದಿ ಪ್ರೆಸಿಡೆಂಶ್ಶಿಯಲ್ ಇಯರ್’ ಆತ್ಮಕಥನದ ಅಂತಿಮ ಭಾಗ ಬಿಡುಗಡೆಗೆ ಸಂಬಂಧಿಸಿದಂತೆ ಪುತ್ರ, ಮಾಜಿ ಸಂಸದ ಅಭಿಜಿತ್ ಮುಖರ್ಜಿ ಮತ್ತು ಪುತ್ರಿ ಶರ್ಮಿಷ್ಠ ಮುಖರ್ಜಿ ನಡುವೆ ಮಂಗಳವಾರ ವಾಗ್ವಾದ ನಡೆದಿದೆ. ಅಭಿಜಿತ್ ಮುಖರ್ಜಿ, ‘ಪುಸ್ತಕದ ಆಯ್ದ ಭಾಗಗಳನ್ನು ಉದ್ದೇಶಪೂರ್ವಕವಾಗಿಯೇ ಬಿಡುಗಡೆ ಮಾಡಲಾಗಿದೆ.
ನಮ್ಮ ತಂದೆ ಬದುಕಿದ್ದರೆ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಹಾಗಾಗಿ ಅವರ ಪುತ್ರನಾಗಿ ನನ್ನ ಲಿಖಿತ ಅನುಮತಿ ಇಲ್ಲದೆ ಪುಸ್ತಕ ಬಿಡುಗಡೆ ಮಾಡಬಾರದು’ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಪುತ್ರಿ ಶರ್ಮಿಷ್ಠ ಮುಖರ್ಜಿ ಕೂಡ ಟ್ವೀಟ್ ಮಾಡಿ,‘ಸಹೋದರ ಅಭಿಜಿತ್, ಪುಸ್ತಕ ಬಿಡುಗಡೆಗೆ ಸಂಬಂಧಿಸಿದಂತೆ ಅನಗತ್ಯ ಅಡಚಣೆ ಬೇಡ. ಅವರು ಅನಾರೋಗ್ಯ ಪೀಡಿತರಾಗುವ ಮೊದಲೇ ಕೈ ಬರಹದ ಪ್ರತಿಯನ್ನು ಪರಿಶೀಲಿಸಿದ್ದರು. ಪುಸ್ತಕದಲ್ಲಿ ಬರೆದಿರುವುದು ಅವರ ಸ್ವಂತ ಅಭಿಪ್ರಾಯ. ಪ್ರಚಾರಕ್ಕಾಗಿ ಆ ಪುಸ್ತಕದ ಬಿಡುಗಡೆಯನ್ನು ತಡೆಯಲು ಯಾರೂ ಪ್ರಯತ್ನಿಸಬಾರದು’ ಎಂದಿದ್ದಾರೆ.
ರೂಪ ಪ್ರಕಾಶನ ಇತ್ತೀಚೆಗೆ ಪುಸ್ತಕದ ಆಯ್ದ ಭಾಗವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 2014ರ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಕಾರಣ ಎಂದು ಆಪಾದಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ