ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋಗಳ ಬೆಂಡೆತ್ತಿದ ಪೊಲೀಸರು

Published : Apr 20, 2026, 05:44 PM IST
road Romeo arrested

ಸಾರಾಂಶ

ಉತ್ತರ ಪ್ರದೇಶದ ಫತೇಪುರದಲ್ಲಿ ಶಾಲಾ ಬಾಲಕಿಯರಿಗೆ ಬೈಕ್‌ನಲ್ಲಿ ಬಂದು ಕಿರುಕುಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರ 'ನಂತರದ' ಸ್ಥಿತಿಯ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ರೋಡ್ ರೋಮಿಯೋಗಳಿಗೆ ಬೆಂಡೆತ್ತಿದ್ದ ಪೊಲೀಸರು

ಶಾಲೆ ಬಿಟ್ಟು ನಡೆದುಕೊಂಡು ಹೋಗುತ್ತಿದ್ದ ಬಾಲಕಿಯರಿಗೆ ಬೈಕ್‌ನಲ್ಲಿ ಸಾಗುತ್ತಾ ಕೆಟ್ಟದಾಗಿ ಕಾಮೆಂಟ್ ಮಾಡಿ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋಗಳಿಗೆ ಪೊಲೀಸರು ಬೆಂಡೆತ್ತಿದ್ದು, ಅವರ ಮೊದಲ ಹಾಗೂ ನಂತರದ ವೀಡಿಯೋವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಆರೋಪಿಗಳು ಬ್ಯುಸಿಯಾದ ಫತೇಪುರದ ರಸ್ತೆಯಲ್ಲಿ ಶಾಲೆ ಬಿಟ್ಟು ನಡೆದುಕೊಂಡು ಹೋಗುವ ಮಕ್ಕಳನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾ ಕಿರುಕುಳ ನೀಡುತ್ತಿದ್ದರು. ಬರೀ ಇಷ್ಟೇ ಅಲ್ಲ ಒಂದು ಕಡೆ ಈ ರೋಡ್ ರೋಮಿಯೋಗಳು ವಿದ್ಯಾರ್ಥಿನಿಯೊಬ್ಬಳ ಕೈ ಹಿಡಿದು ಎಳೆಯುವುದನ್ನು ಕೂಡ ಕಾಣಬಹುದು.

ಶಾಲಾ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಕಾಮುಕರು

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪೊಲೀಸರು ಸ್ವಯಂಪ್ರೇರಿತರಾಗಿ ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದು, ಈ ಬೀದಿ ಕಾಮುಕರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಆಗಿರುವ ಬಗ್ಗೆ ಫತೇಪುರ್ ಎಸ್‌ಪಿ ಅಭಿಮನ್ಯು ಮಂಗಳಿಕ್ ಸುದ್ದಿಗೋಷ್ಠಿ ನಡೆಸಿ ವಿಚಾರ ದೃಢಪಡಿಸಿದ್ದಾರೆ.

ಕೊತ್ವಾಲಿ ಪ್ರದೇಶದ ಐಟಿಐ ರಸ್ತೆಯ ಬಳಿ ಇಬ್ಬರು ಯುವಕರು ಬೈಕ್‌ನಲ್ಲಿ ಸಾಗುತ್ತಾ, ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ಬಾಲಕಿಯರಿಗೆ ಚೇಡಿಸುವುದರಲ್ಲಿತೊಡಗಿರುವುದು ಮತ್ತು ಅವರ ಕೈಗಳನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯು ತಕ್ಷಣ ಪ್ರಕರಣ ದಾಖಲಿಸಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಇಬ್ಬರೂ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಅವರ ಮೋಟಾರ್ ಸೈಕಲ್ ಅನ್ನು ಮೋಟಾರ್‌ಸೈಕಲ್ ಕಾಯ್ದೆಯ ಸೆಕ್ಷನ್ 207 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಮತ್ತು ನಿಯಮಗಳ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ನವವಿವಾಹಿತೆಯ ಸೀರೆ ಎಳೆದ ಕಿರಾತಕರು: ನಾಸಿಕ್ TCSನಲ್ಲಿ ಮತಾಂಧರ ಮತ್ತೊಂದು ಕಾಮಕಾಂಡ ತೆರೆದಿಟ್ಟ ಮಹಿಳಾ ಉದ್ಯೋಗಿ

ಶಾಲಾ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಗಳ ಬಂಧನಕ್ಕೆ ವ್ಯಾಪಕ ಆಗ್ರಹ ಕೇಳಿಬಂದಿತ್ತು. ಇದಾದ ನಂತರ ಆರೋಪಿಗಳ ಬಂಧಿಸಿರುವ ಪೊಲೀಸರು ಅವರಿಗೆ ಸರಿಯಾಗಿ ಬಾರಿಸಿದಂತೆ ಕಾಣುತ್ತಿದ್ದು, ನಡೆದಾಡುವುದಕ್ಕೆ ಆರೋಪಿಗಳು ಕಷ್ಟಪಡುತ್ತಿರುವುದರ ಜೊತೆಗೆ ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ಕೈ ಮುಗಿದು ಕ್ಷಮೆ ಕೇಳುತ್ತಿರುವ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ತಿರುವಿನಲ್ಲಿ ಕಾದಿದ್ದ ಜವರಾಯ: ಕಂದಕಕ್ಕೆ ಉರುಳಿದ ಸರ್ಕಾರಿ ಬಸ್ : 21 ಜನರ ದಾರುಣ ಸಾವು

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Breaking News ನಾರಾಯಣಪುರ ಅರಣ್ಯದಲ್ಲಿ ವಿಮಾನ ಪತನ, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು
ನವವಿವಾಹಿತೆಯ ಸೀರೆ ಎಳೆದ ಕಿರಾತಕರು: ನಾಸಿಕ್ TCSನಲ್ಲಿ ಮತಾಂಧರ ಮತ್ತೊಂದು ಕಾಮಕಾಂಡ ತೆರೆದಿಟ್ಟ ಮಹಿಳಾ ಉದ್ಯೋಗಿ