
ನವದೆಹಲಿ(ಫೆ.16): ಹೆದ್ದಾರಿಗಳ ಟೋಲ್‌ಗೇಟ್ ಮೂಲಕ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ ಮಾಡಿದ್ದಾಯಿತು. ಹಾಗಂತ ಕೇವಲ ನಗರಗಳ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಹಾಕಿಸುವ ಅಗತ್ಯವೇನೂ ಇಲ್ಲ ಎಂದು ಸುಮ್ಮನಾಗಬೇಡಿ. ಇಂಥ ವಾಹನಗಳಿಗೂ ಈಗ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಫಾಸ್ಟ್ಯಾಗ್ ಇರದೇ ಹೋದರೆ 200ರಿಂದ 500 ರು. ದಂಡ ತೆರಬೇಕಾಗುತ್ತದೆ!
"
ಇಂದು ರಾತ್ರಿಯಿಂದ ಫಾಸ್ಟ್ಯಾಗ್ ಕಡ್ಡಾಯ, ತಪ್ಪಿದರೆ ಡಬಲ್ ಸುಂಕ!
ಹೌದು. ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ನಿಯಮಗಳಲ್ಲೇ ಈ ಅಂಶವನ್ನು ನಮೂದಿಸಲಾಗಿದೆ. ಹೆದ್ದಾರಿಯಲ್ಲಿ ಸಂಚರಿಸದೇ ಹೋದ ಅಥವಾ ನಗರ ವ್ಯಾಪ್ತಿಯಲ್ಲಿ ಮಾತ್ರ ಸೀಮಿತವಾಗಿ ಸಂಚರಿಸುವ 4 ಚಕ್ರ ವಾಹನಗಳು ಹಾಗೂ ಅದಕ್ಕಿಂತ ಮೇಲ್ಪಟ್ಟದರ್ಜೆಯ ವಾಹನಗಳು ಕಡ್ಡಾಯವಾಗಿ ಫಾಸ್ಟ್ಯಾಗ್ ಹೊಂದಲೇಬೇಕು ಎಂದು ತಿಳಿಸಲಾಗಿದೆ. ಜನವರಿ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಇನ್ನು ಏಪ್ರಿಲ್ 4ರಿಂದ ವಾಹನ ವಿಮಾ ನವೀಕರಣಕ್ಕೂ ಫಾಸ್ಟ್ಯಾಗ್ ಕಡ್ಡಾಯ.
ಒಂದು ವೇಳೆ ಫಾಸ್ಟ್ಯಾಗ್ ಇಲ್ಲದೇ ಊರೊಳಗೆ ವಾಹನ ಸಂಚರಿಸುತ್ತಿರುವುದು ಕಂಡು ಬಂದರೆ ಮೊದಲ ಸಲ 200 ರು. ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಸಿಕ್ಕಿಬಿದ್ದರೆ 500 ರು. ದಂಡ ವಿಧಿಸಲಾಗುತ್ತದೆ.
ವಾಹನ ವಿವರ ಮಾರಾಟದಿಂದ 111 ಕೋಟಿ ರೂ. ಗಳಿಕೆ!
2017ರ ನಂತರ ಉತ್ಪಾದನೆಯಾದ ಹೊಸ ಕಾರುಗಳಿಗೆ, ಉತ್ಪಾದನಾ ಹಂತದಲ್ಲೇ ಫಾಸ್ಟ್ಯಾಗ್ ಅಳವಡಿಸಲಾಗಿದೆ. ಆದರೆ ಇದಕ್ಕೂ ಮುನ್ನ ಉತ್ಪಾದನೆಯಾದ ವಾಹನಗಳು ಸೇರಿದಂತೆ 2 ಕೋಟಿ 4 ಚಕ್ರ ವಾಹನಗಳು ಈವರೆಗೂ ಫಾಸ್ಟ್ಯಾಗ್ ಅಳವಡಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ