ದೇಶದಲ್ಲಿ ಇನ್ನೂ 18-19 ಲಸಿಕೆಗಳು ಬರಲಿವೆ: ಹರ್ಷವರ್ಧನ್‌!

By Suvarna News  |  First Published Feb 16, 2021, 7:33 AM IST

ಇನ್ನೂ 18-19 ಲಸಿಕೆಗಳು ಬರಲಿವೆ: ಹರ್ಷವರ್ಧನ್‌|  50 ಮೇಲ್ಪಟ್ಟವರಿಗೆ ಮಾರ್ಚ್‌ನಿಂದ ಲಸಿಕೆ ವಿತರಣೆ| 25 ದೇಶಗಳಿಗೆ ಭಾರತದಿಂದಲೇ ಲಸಿಕೆ


ನವದೆಹಲಿ(ಫೆ.16): ಭಾರತದಲ್ಲಿ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆ ವಿತರಣೆ ಅಭಿಯಾನ ಮುಂದುವರಿದಿರುವಾಗಲೇ ಇನ್ನೂ 18-19 ಲಸಿಕೆಗಳು ಸದ್ಯದಲ್ಲೇ ಲಭ್ಯವಾಗಲಿವೆ. ಇವುಗಳು ವಿವಿಧ ಹಂತದ ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್‌ ಅವರು ಸೋಮವಾರ ತಿಳಿಸಿದ್ದಾರೆ.

ಮಾರ್ಚ್‌ನಿಂದ 2ನೇ ಹಂತದ ಕೊರೋನಾ ಲಸಿಕೆ ವಿತರಣೆ; 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್!

Latest Videos

undefined

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ 2-3 ವಾರಗಳಲ್ಲಿ 50 ವರ್ಷ ಮೇಲ್ಪಟ್ಟಜನರಿಗೆ ಕೊರೋನಾ ಲಸಿಕೆ ವಿತರಣೆ ಆರಂಭವಾಗಲಿದೆ. ಅಲ್ಲದೆ 18-19 ಲಸಿಕೆಗಳು ವಿವಿಧ ಹಂತದ ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟಿವೆ. ಭಾರತ 20-25 ದೇಶಗಳಿಗೆ ಲಸಿಕೆಗಳನ್ನು ಪೂರೈಸಲಿದೆ’ ಎಂದು ಹೇಳಿದರು. ಜೊತೆಗೆ ಲಸಿಕೆ ಸುರಕ್ಷತೆ ಕುರಿತು ಯಾವುದೇ ಅನುಮಾನ ಬೇಡ. ಅವು ಪೂರ್ಣ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಕಳೆದ 7 ದಿನಗಳಿಂದ 188 ಜಿಲ್ಲೆಗಳಲ್ಲಿ ಮತ್ತು ಕಳೆದ 21 ದಿನಗಳಿಂದ 21 ಜಿಲ್ಲೆಗಳಲ್ಲಿ ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿಲ್ಲ ಎಂದು ತಿಳಿಸಿದರು.

click me!