
ನವದೆಹಲಿ(ಜು.24): ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ರೈತ ಸಂಘಟನೆಗಳ ಪ್ರತಿಭಟನೆ ಅಸಲಿಯತ್ತನ್ನು ಪಂಜಾಬ್ ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷ ಬಹಿರಂಗ ಪಡಿಸಿದ್ದರು. ಇದರಿಂದ ಮುಜುಗರಕ್ಕೀಡಾಗಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಇದೀಗ ಕೇಂದ್ರದ ಮೇಲೆ ಹರಿಹಾಯ್ದಿದ್ದಾರೆ. ರೈತರಿಗೆ ಉಳುಮೆ ಮಾತ್ರವಲ್ಲ, ಪಾಠ ಕಲಿಸಲು ತಿಳಿದಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಕಿವುಡ ಹಾಗೂ ಮೂಕ ಸರ್ಕಾರವನ್ನು ರೈತ ಪ್ರತಿಭಟನೆ ಮೂಲಕ ಜಾಗೃತಗೊಳಿಸಲಾಗಿದೆ. ಆದರೆ ಪ್ರತಿಭಟನೆ ಆರಂಭಗೊಂಡು ಸರಿಸುಮಾರು ಒಂದು ವರ್ಷಗಳಾಗುತ್ತಾ ಬಂದಿದೆ. ಆದರೆ ನಮ್ಮನ್ನು ನಿರ್ಲಕ್ಷಿಸುತ್ತಾ ಬರುತ್ತಿರುವ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಲು ನಮಗೆ ತಿಳಿದೆ. ಸಂಸತ್ ನಡೆಸಲು ರೈತರಿಗೆ ಸಾಮರ್ಥ್ಯವಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಸಂಘದ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಸಂಸತ್ ಮುಂಗಾರು ಅಧಿವೇಶನ ಆರಂಭಗೊಂಡ ಬಳಿಕ ರೈತ ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಸಂಸತ್ ಮುಂಭಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ ಕಾರಣ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದೀಗ ದಿಢೀರ್ ಕೇಂದ್ರಕ್ಕೆ ಎಚ್ಚರಿಕೆ ನೀಡಲು ಪ್ರಮುಖ ಕಾರಣ ರೈತ ಪ್ರತಿಭಟನೆಯ ಅಸಲಿಯತ್ತು ಕುರಿತು ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಟಿಕಾಯತ್ ಇದೀಗ ಎಚ್ಚರಿಕೆ ತಂತ್ರ ಉಪಯೋಗಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷ ರೈತ ಪ್ರತಿಭಟನೆ ಅಸಲಿ ಮುಖ ಬಹಿರಂಗ ಪಡಿಸಿದ್ದರು. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರೈತರನ್ನು ಬಿಜೆಪಿ ವಿರುದ್ಧ ಪ್ರಚೋದಿಸಿ ಹೋರಾಟಕ್ಕೆ ಕಳುಹಿಸದಿದ್ದರೆ, ಪಂಜಾಬ್‌ನಲ್ಲಿ ರೈತರ ಕೋಪವನ್ನು ನಾವು ಎದುರಿಸಬೇಕಿತ್ತು. ಈ ವಿಚಾರದಲ್ಲಿ ಅಮರಿಂದರ್ ಸಿಂಗ್ ಸಾಧನೆಯನ್ನು ಮೆಚ್ಚಲೇ ಬೇಕು ಎಂದಿದ್ದರು.
ಸ್ವತಃ ಕಾಂಗ್ರೆಸ್ ಮಾಜಿ ಅಧ್ಯಕ್ಷರೇ ಈ ವಿಚಾರ ಬಹಿರಂಗ ಪಡಿಸಿದ ಕಾರಣ ರೈತ ಪ್ರತಿಭಟನೆ ವಿರುದ್ಧ ಆಕ್ರೋಶ ಹೆಚ್ಚಾಗಿತ್ತು. ಈ ಕಾರಣಕ್ಕೆ ರಾಕೇಶ್ ಟಿಕಾಯತ್ ಇದೀಗ ಕೇಂದ್ರದ ವಿರುದ್ಧ ಮುಗಿಬೀಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ