ಲಡಾಖ್‌ನಲ್ಲಿ ಮತ್ತೆ ಕಿರಿಕ್; ಚೀನಾ ಅತಿಕ್ರಮಣ ತಡೆಯಲು 15 ಸಾವಿರ ಸೈನಿಕರ ನಿಯೋಜನೆ!

By Suvarna NewsFirst Published Jul 24, 2021, 5:44 PM IST
Highlights
  • ಬೂದಿ ಮುಚ್ಚಿದ ಕೆಂಡಂದತಿರುವ ಲಡಾಖ್‌ನಲ್ಲಿ ಪರಿಸ್ಥಿತಿ ಉದ್ವಿಘ್ನ
  • ಚೀನಾ ಅತಿಕ್ರಮ, ಕಿರಿಕ್ ತಡೆಯಲು 15 ಸಾವಿರ ಸೈನಿಕರ ನಿಯೋಜನೆ
  • ಕಳೆದೊಂದು ವರ್ಷದಿಂದ ಲಡಾಖ್ ಗಡಿಯಲ್ಲಿ ಆತಂಕದ ವಾತಾವರಣ

ಲಡಾಖ್(ಜು.24): ಭಾರತ ಹಾಗೂ ಚೀನಾ ನಡುವಿನ ಲಡಾಖ್ ಗಡಿ ಕಿರಿಕ್ ಕಳೆದೊಂದು ವರ್ಷದಿಂದ ನಡೆಯುತ್ತಿದೆ. ಗಲ್ವಾನ್ ಘರ್ಷಣೆ ಬಳಿಕ ತೀವ್ರಗೊಂಡಿದೆ. ಪ್ರತಿ ಬಾರಿ ಅತ್ರಿಕ್ರಮಣಕ್ಕೆ ಮುಂದಾಗುತ್ತಿರುವ ಚೀನಾ ಸೈನಿಕರಿಗೆ ಭಾರತೀಯ ಸೇನೆ ತಕ್ಕ  ಉತ್ತರ ನೀಡಿದೆ. ಇದೀಗ ಚೀನಾ ಅತಿಕ್ರಣ ತಡೆಯಲು ಲಡಾಖ್‌ ಘಡಿಗೆ 15,000 ಹೆಚ್ಚುವರಿ ಸೈನಿಕರನ್ನು ಭಾರತ ನಿಯೋಜಿಸಿದೆ.

ಲಡಾಖ್ ಗಡಿ ಸಮೀಪ ಚೀನಾದಿಂದ ಯುದ್ದ ವಾಯು ನೆಲೆ ನಿರ್ಮಾಣ!

ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನಾ ನಿಗ್ರದ ದಳದ 15,000 ಯೋಧರು, ಲಡಾಖ್ ಘಡಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ವಿಶೇಷ ಅಂದರೆ ಭಾರತೀಯ ಸೇನೆ ಸದ್ದಿಲ್ಲದೆ 15 ಸಾವಿರ ಯೋಧರನ್ನು ಲಡಾಖ್ ಘಡಿಯಲ್ಲಿ ನಿಯೋಜಿಸಿದೆ. ಈ ಮಾಹಿತಿಯನ್ನು ಸೇನೆ ಇದೀಗ ಬಯಲು ಮಾಡುತ್ತಿದೆ.

ಲೇಹ್  ಹಾಗೂ ಲಡಾಖ್ ಎರಡು ವಿಭಾಗವನ್ನು ಸೇನೆಯ ಒಂದು ಟ್ರೂಪ್ ಮೇಲ್ವಿಚಾರಣೆ ಮಾಡುತ್ತಿತ್ತು. ಇದೀಗ 15, 000 ಸೈನಿಕರ ನಿಯೋಜನೆಯಿಂದ ಎರಡು ವಿಭಾಗ ಲಡಾಖ್ ಘಡಿಯುದ್ದಕ್ಕೂ ಹದ್ದಿನ ಕಣ್ಣಿಟ್ಟಿದೆ. ಈ ಮೂಲಕ ಚೀನಾದ ಅತಿಕ್ರಮಣಕ್ಕೆ ತಕ್ಕ ತಿರುಗೇಟು ನೀಡಲು ಸರ್ವಸನ್ನದ್ಧವಾಗಿ ನಿಂತಿದೆ.

ಭಾರತದ ಗಡಿಗಳಲ್ಲಿ ಶಾಶ್ವತ ಶಿಬಿರ ನಿರ್ಮಿಸುತ್ತಿರುವ ಚೀನಾ!

ಭಯೋತ್ಪಾದನಾ ನಿಗ್ರಹ ದಳದ 15 ಸಾವಿರ ಸೈನಿಕರು ಲೇಹ್‌ನ 14 ಕಾರ್ಪ್ಸ್ ಪ್ರಧಾನ ಕಚೇರಿಗೆ ಒಳಪಡುವ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈಗಾಗಲೇ ಲಡಾಖ್‌ನಲ್ಲಿದ್ದ ಬೆಟಾಲಿಯನ್ ಟ್ರೂಪ್ ಲಡಾಖ್ 17 ಕಾರ್ಪ್ಸ್ ಮೌಂಟೈನ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಲಡಾಖ್ 17 ಕಾರ್ಪ್ಸ್ ಮೌಂಟೈನ್‌ ಟ್ರೂಪ್‌ಗೆ ಈಗಾಗಲೇ 10,000 ಹೆಚ್ಚುವರಿ ಸೈನಿಕರು ಸೇರಿಕೊಂಡಿದ್ದಾರೆ. ಈ ಮೂಲಕ ಭಾರತ ಚೀನಾ ಘಡಿಯುದ್ದಕ್ಕೂ ಭಾರತ ತನ್ನ ಸೇನಾ ಬಲ ಹೆಚ್ಚಿಸಿದೆ.
 

click me!