ಆಗಿದ್ದು ಮೇಜರ್ ಸರ್ಜರಿ, ಐದೇ ದಿನಕ್ಕೆ ಹೊಲಕ್ಕಿಳಿದ 104 ವರ್ಷದ ಅಜ್ಜ ರೀ!

By Suvarna NewsFirst Published Feb 1, 2020, 8:43 PM IST
Highlights

104ನೇ ವರ್ಷದಲ್ಲಿಯೂ ಚಿರ ಯುವಕನಂತೆ ಕೆಲಸ ಮಾಡುವ ರೈತ/ ಆಪರೇಶನ್ ಆಗಿ ಐದೇ ದಿನಕ್ಕೆ ಹೊಲಕ್ಕೆ ಹಾಜರ್/ ಜೀವನೋತ್ಸಾಹ ಅಂದರೆ ಇದೇ ಇರಬೇಕು/ ಕೇರಳ ರೈತನ ಮಾದರಿ ಜೀವನ

ಕೊಯಂಬತ್ತೂರು(ಫೆ. 01)  ಈತ ಅಂತಿಂಥ ರೈತನಲ್ಲ. ಸರ್ಜರಿ, ಶಸ್ತ್ರ ಚಿಕಿತ್ಸೆ ಎಂದರೆ ಯುವಕರೇ  ಭಯಬೀಳುವ  ಕಾಲ ಇದು. ಅದರಲ್ಲೂ 80-90 ವರ್ಷ ತುಂಬಿದವರಿಗೆ ಚಿಕಿತ್ಸೆ ಮಾಡುವುದು.. ನಂತರ ಅವರು ಚೇತರಿಸಿಕೊಳ್ಳುವುದು ಒಂದು ಪವಾಡವೇ ಸರಿ. ಆದರೆ ಅದೆಲ್ಲವನ್ನು ಮೀರಿ ನಿಂತಿರುವ ಈ 104 ವರ್ಷದ ರೈತರ  ಜೀವನ ನಿಮ್ಮ ಮುಂದೆ ಇದೆ.

ಕೇರಳದ ಪಾಕ್ಕಾಡ್ ಜಿಲ್ಲೆಯ ಈ ರೈತರಿಗೆ 104 ವರ್ಷ ವಯಸ್ಸು.  ಕೊಯಂಬತ್ತೂರಿನ ಆಸ್ಪತ್ರೆಯೊಂದರಲ್ಲಿ ಮೇಜರ್ ಸರ್ಜರಿಗೆ ಒಳಗಾದ ಇವರು 48 ಗಂಟೆಗಳ ಅವಧಿಯಲ್ಲೇ ಚೇತರಿಸಿಕೊಂಡಿದ್ದಾರೆ.  5ನೇ ದಿನಕ್ಕೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ.  ಇದಾದ ಮರುದಿನವೇ ರೈತರು ಹೊಲದಲ್ಲಿ ಕೆಲಸಕ್ಕೆ ಇಳಿದಿದ್ದಾರೆ.

ವೆಲಂಥವಲಮ್ ನ ಕಿಟ್ಟುಶಾಮಿ ಲೀವರ್ ಸಮಸ್ಯೆಯಿಂದ ಜನವರಿ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಹೊಟ್ಟೆ ನೋವು ಮತ್ತು ವಾಂತಿ ಸಮಸ್ಯೆ ಅವರನ್ನು ಕಾಡುತ್ತಿತ್ತು. ಕರುಳಿನ ಸಮಸ್ಯೆಯೂ ಅವರನ್ನು ಕಾಡುತ್ತಿರುವುದು ಸಿಟಿ ಸ್ಕ್ಯಾನ್ ನಲ್ಲಿ ಪತ್ತೆಯಾಗಿತ್ತು. ಕಟ್ಟಿಕೊಂಡ ಬ್ಲಾಕ್ ಸರಿ ಮಾಡಲು ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು ಎಂದು ಆಸ್ಪತ್ರೆಯ ವೈದ್ಯ ಡಾ. ಎಸ್ ವಿಜಯಕುಮಾರ್ ಅಂದಿನ ಘಟನಾವಳಿ ವಿವರಿಸುತ್ತಾರೆ.

ಕೊರೋನಾ ವೈರಸ್ ನಿಂದ ಪಾರಾಗಲು ನಮ್ಮ ಬಳಿ ಇದೆ ಉಪಾಯ!

ಕಿಟ್ಟುಶಾಮಿಯ ಮಕ್ಕಳು ಸಹ ಅವರಿಗೆ ಈ ವಯಸ್ಸಿನಲ್ಲಿ ಸರ್ಜರಿ ಎಂದು ಒಂದು ಕ್ಷಣ ಭಯಭೀತರಾಗಿದ್ದರು. ಆದರೆ ಕಿಟ್ಟುಶಾಮಿ ಅವರಿಗೆ ಸಕ್ಕರೆ ಕಾಯಿಲೆ, ಬಿಪಿಯಂಥಹ ಯಾವ ಸಮಸ್ಯೆ ಇರಲಿಲ್ಲ. ಎಲ್ಲ ಅಂಗಾಗವ್ಯೂಹ ಸರಿಯಾಗಿ ಕಾರ್ಯ ನಿರ್ವಹಿಸುತ್ತಾ ಇರುವುದರಿಂದ ಅವರನ್ನು ಸರ್ಜರಿಗೆ ಒಳಪಡಿಸಲಾಗುತ್ತದೆ.

90 ನಿಒಮಿಷದ ಸರ್ಜರಿ ಮೂಲಕ ಕಟ್ಟಿಕೊಂಡಿದ್ದ ಬ್ಲಾಕ್ ಸರಿ ಮಾಡಲಾಗುತ್ತದೆ. ನಾವು ಅನಸ್ತೇಶಿಯಾವನ್ನು ಬಳಕೆ ಮಾಡಿದ್ದೇವು. ಲಿಕ್ವಿಡ್ ಆಹಾರ ಸೇವನೆ ಮಾಡಲು ತಿಳಿಸಿದ್ದೇವು. ಇದೆಲ್ಲವನ್ನು ಸರಿಯಾಗಿ ಪಾಲಿಸಿದ ರೈತ 5ನೇ ದಿನಕಲ್ಕೆ ಡಿಸ್ಚಾರ್ಜ್ ಆಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

 ಕಿಟ್ಟುಶಾಮಿ ತಂಬಾಕಿನಿಂದ ದೂರ ಇದ್ದಾರೆ. ಧೂಮಪಾನ ಚಟ ಅಂಟಿಸಿಕೊಂಡಿಲ್ಲ. ತಮ್ಮ 104ನೇ ವಯಸ್ಸಿನಲ್ಲಿಯೂ ಕಟ್ಟು ಮಸ್ತಾಗಿ ಕೆಲಸ ಮಾಡುತ್ತಾರೆ. ಇಡೀ ದೇಶದಲ್ಲಿಯೇ ಕೇರಳ ಅತಿ ಹೆಚ್ಚಿನ ವ್ಯಕ್ತಿಯ ಜೀವಿಯತಾವಧಿ ವರ್ಷ (72.8) ಹೊಂದಿದೆ ಎಂಬುದು ಮತ್ತೊಂದು ಅಂಶ.

click me!