ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ಸಂಸತ್ ಚಲೋ ರ‍್ಯಾಲಿಗೆ ಸಜ್ಜಾದ ರೈತ ಸಂಘಟನೆ!

Published : Mar 31, 2021, 05:59 PM ISTUpdated : Mar 31, 2021, 06:00 PM IST
ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ಸಂಸತ್ ಚಲೋ ರ‍್ಯಾಲಿಗೆ ಸಜ್ಜಾದ ರೈತ ಸಂಘಟನೆ!

ಸಾರಾಂಶ

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ.  ಫೆಬ್ರವರಿ 1 ರಂದು ಸಂಸತ್ ಚಲೋ ರ‍್ಯಾಲಿ ಆಯೋಜಿಸಿ ರದ್ದು ಮಾಡಿದ್ದ ರೈತ ಸಂಘಟನೆ ಇದೀಗ ಮತ್ತೆ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ. ಮತ್ತೆ ಸಂಸತ್ ಚಲೋ ರ‍್ಯಾಲಿ ಘೋಷಣೆ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಮಾ.31): ಕೇಂದ್ರದ 3 ಕೃಷಿ ಕಾಯ್ದೆ ವಿರೋಧಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ಚುರುಕುಗೊಳಿಸಲು ರೈತ ಸಂಘಟನಗಳು ಮುಂದಾಗಿದೆ. ಟ್ರಾಕ್ಟರ್ ರ‍್ಯಾಲಿ ಗಲಭೆಯಿಂದ ರೈತ ಸಂಘಟನೆಳು ಫೆಬ್ರವರಿ 1 ರಂದು ಆಯೋಜಿಸಿದ್ದ ಸಂಸತ್ ಚಲೋ ರ‍್ಯಾಲಿ ರದ್ದು ಮಾಡಿತ್ತು. ಆದರೆ ರೈತ ಸಂಘಟನೆಗಳು ಮತ್ತೆ ಸಂಸತ್ ಚಲೋ ರ‍್ಯಾಲಿ ಆಯೋಜಿಸುವುದಾಗಿ ಘೋಷಿಸಿದ್ದಾರೆ.

ವಿಶ್ವಸಂಸ್ಥೆಗೆ ದೇಣಿಗೆ ನೀಡಿ ದಿಲ್ಲಿ ರೈತ ಹೋರಾಟ ಪರ ಖಲಿಸ್ತಾನ್‌ ಲಾಬಿ!.

ನವೆಂಬರ್ ತಿಂಗಳಿನಿಂದ ಸತತ ಹೋರಾಟ ಮಾಡುತ್ತಿರುವ ರೈತ ಸಂಘಟನೆ ಹಲವು ಸುತ್ತಿನ ಮಾತುಕತೆಗೂ ಜಗ್ಗಿಲ್ಲ. ಆದರೆ ಇತ್ತೀಚೆಗೆ ಕೊರೋನಾ, ಪಂಚ ರಾಜ್ಯ ಚುನಾವಣೆಗಳಿಂದ ರೈತ ಪ್ರತಿಭಟನೆ ಧ್ವನಿ ಕೇಳಿಸದಂತಾಗಿದೆ. ಹೀಗಾಗಿ ಕೇಂದ್ರ ಸರ್ಕಾರವನ್ನು ಎಚ್ಚರಿಸಲು ಇದೀಗ ರೈತ ಸಂಘಟನೆ ಮೇ ತಿಂಗಳಲ್ಲಿ ಸಂಸತ್ ಚಲೋ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಘೋಷಿಸಿದೆ.

ಎಲ್ಲಿಯವರೆಗೆ ರೈತ ಪ್ರತಿಭಟನೆ? ದಿನಾಂಕ ಘೋಷಿಸಿದ ಮುಖಂಡ ರಾಕೇಶ್ ಟಿಕೈಟ್!

ಪ್ರತಿಭಟನಾ ನಿರತ 40 ರೈತ ಸಂಘಟನೆಗಳ ಮುಂದಾಳತ್ವ ವಹಿಸಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚ ಸಂಘಟನೆ ಸಂಸತ್ ಚಲೋ ರ‍್ಯಾಲಿ ಘೋಷಿಸಿದ್ದಾರೆ. ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿದೆ. ಈ ಮೂಲಕ ತಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಲು ರೈತ ಸಂಘಟನೆ ಮುಂದಾಗಿದೆ.

ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಕೇಂದ್ರ ಕೃಷಿ ಕಾಯ್ದೆ ಸಾಧಕ ಬಾಧಕಗಳ ಕುರಿತು ವರದಿ ಸಲ್ಲಿಸಿದೆ. ಇದೀಗ ಈ ವರದಿ ತೀವ್ರ ಕುತೂಹಲ ಕೆರಳಿಸಿದೆ. ಕೇಂದ್ರದ ಕೃಷಿ ಕಾಯ್ದೆ ರೈತಕರಿಗೆ ಮಾರಕವೂ ಅಥವಾ ಪೂರಕವೋ ಅನ್ನೋ ಮಾಹಿತಿಯನ್ನು ಸಮಿತಿಯ ವರದಿ ಬಹಿರಂಗ ಮಾಡಲಿದೆ. ಈ ವರದಿ ಆಧರಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು