
ನವದೆಹಲಿ: ವಿಡಿಯೋ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮೊಬೈಲ್‌ನ ಸ್ಕ್ರೀನ್ ಅನ್ನು ಹಂಚಿಕೊಳ್ಳಬಹುದಾದ ನೂತನ ಫೀಚರ್ ಅನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (whatsapp messaging app) ಘೋಷಿಸಿದೆ. ಮೆಟಾದ ಸಿಇಒ ಮಾರ್ಕ್ಜುಗರ್‌ಬಗ್‌ರ್ ಅವರು ವಾಟ್ಸಾಪ್‌ನ ಹೊಸ ಫೀಚರ್ ಬಗ್ಗೆ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ.
ಏನಿದು ಹೊಸ ಫೀಚರ್? :
ಸಾಮಾನ್ಯವಾಗಿ ವಿಡಿಯೋ ಕಾಲ್‌ನಲ್ಲಿ ಫ್ರಂಟ್ ಕ್ಯಾಮರಾ (Front cam) ಅಥವಾ ಬ್ಯಾಕ್ ಕ್ಯಾಮರಾಗಳನ್ನು ಟರ್ನ್ ಆನ್ ಮಾಡಿಕೊಂಡು ನಮ್ಮೊಂದಿಗೆ ವಿಡಿಯೋ ಕಾಲ್ (video call) ಮಾಡಿದವರ ಜೊತೆ ಸಂವಹನ ನಡೆಸಬಹುದಾಗಿತ್ತು. ಆದರೆ ನಮ್ಮ ಮೊಬೈಲ್‌ನ ಪರದೆಯನ್ನು ಶೇರ್ ಮಾಡಬಹುದಾದ ಹೊಸ ಫೀಚರ್ ಅನ್ನು ವಾಟ್ಸಾಪ್ ನೀಡಲಿದೆ.
ವಾಟ್ಸ್‌ಆಪ್‌ನಲ್ಲಿ ಬೇಕಾಬಿಟ್ಟಿ ಸ್ಟೇಟಸ್, ಕೇಸ್ ರದ್ದು ಮಾಡಲು ನಿರಾಕರಿಸಿದ ಕೋರ್ಟ್!
ಉದಾಹರಣೆಗೆ ಝೂಮ್ ಮೀಟಿಂಗ್ ಕಾಲ್‌ಗಳಲ್ಲಿ ಮೊಬೈಲ್ ಸ್ಕ್ರೀನ್ ಶೇರ್ ಮಾಡಿ ಹೇಗೆ ಮಾಹಿತಿಯನ್ನು ತೋರಿಸುತ್ತ ವಿವರಣೆ ನೀಡಬಹುದೋ ಅದೇ ಮಾದರಿಯಾಗಿದೆ. ಇದು ಕಚೇರಿ ಕೆಲಸಗಳಿಗೆ ಸಿಬ್ಬಂದಿಗಳ ಮೀಟಿಂಗ್‌ಗಾಗಿ ಬಹಳ ಉಪಯುಕ್ತವಾಗಿರಲಿದೆ. ಹೀಗಾಗಿ ಗೂಗಲ್ ಮೀಟ್ ಮತ್ತು ಝೂಮ್‌ಗಳಿಗೆ ವಾಟ್ಸಾಪ್ ಕಠಿಣ ಸ್ಪರ್ಧೆ ನೀಡಲು ಮುಂದಾಗಿದೆ.
ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ